Health Alert | ಟೊಮ್ಯಾಟೊ ಸಾಸ್​ ಕೂಡ ಆರೋಗ್ಯಕ್ಕೆ ಹಾನಿಕಾರಕ

ಟೊಮ್ಯಾಟೊ ಸಾಸ್ ದಟ್ಟವಾಗಿ ಹಾಗೂ ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂಬ ಅಂಶ ವರದಿಯಿಂದ ತಿಳಿದುಬಂದಿದೆ.;

Update: 2025-03-04 06:20 GMT

ಟೊಮೆಟೋ ಸಾಸ್‌

ಇಡ್ಲಿ, ಹೋಳಿಗೆ ಬಳಿಕ ಇದೀಗ ಟೊಮ್ಯಾಟೊ ಸಾಸ್ ಕೂಡ ಆರೋಗ್ಯಕ್ಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಆರೋಗ್ಯ ಇಲಾಖೆಯ ವರದಿಯಿಂದ ಧೃಡವಾಗಿದೆ.

ಆಹಾರ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಫೆಬ್ರವರಿಯಲ್ಲಿ ಟೊಮ್ಯಾಟೊ ಸಾಸ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ತಪಾಸಣೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ಟೊಮ್ಯಾಟೊ ಸಾಸ್ ಕಲಬೆರಕೆಯಿಂದ ಕೂಡಿದ್ದು, ಆರೋಗ್ಯಕ್ಕೆ ಮಾರಕವಾಗಿದೆ ಅಂಶ ಬಹಿರಂಗವಾಗಿದೆ. ಈ ಮೂಲಕ ಮಕ್ಕಳಿಂದ ದೊಡ್ಡವರವರೆಗೆ ಬಾಯಿ ಚಪ್ಪರಿಸಿ ಸವಿಯುವ ಟೊಮ್ಯಾಟೊ ಸಾಸ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 

ಟೊಮ್ಯಾಟೊ ಸಾಸ್​ನಲ್ಲಿ ಸೋಡಿಯಂ ಬೆಂಜೊಯೆಟ್ ಬಳಸಲಾಗುತ್ತಿದೆ. ಸೋಡಿಯಂ ಬೆಂಜೊಯೆಟ್​ನಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಅಲ್ಲದೇ, ಟೊಮ್ಯಾಟೊ ಸಾಸ್  ಬ್ರೈಟ್ ಹಾಗೂ ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂಬ ಅಂಶ ವರದಿಯಿಂದ ತಿಳಿದುಬಂದಿದೆ.

ಕಲಬೆರಕೆ ಸಾಸ್​ನಿಂದ ಮಕ್ಕಳು, ದೊಡ್ಡವರಲ್ಲಿ ಬಿಪಿ ಸಮಸ್ಯೆ ಕಾಡಬಹುದು. ಅಲ್ಲದೇ ನಿಶಕ್ತಿ ಉಂಟಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಶಾಂತಿ, ಮನಸ್ಥಿತಿ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. 

ಜವವರಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. 28 ಕಳಪೆಯಾಗಿವೆ. ಜನವರಿಯಲ್ಲಿ 681 ರಷ್ಟು ಇಡ್ಲಿ ಸ್ಯಾಂಪಲ್ಸ್ ಪಡೆಯಲಾಗಿದೆ. ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಘಟನೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು.

Tags:    

Similar News