ಪ್ರಜ್ವಲ್‌ ಲೈಂಗಿಕ ಹಗರಣ | ಮೇ 16ರಂದು ಜನವಾದಿ ಮಹಿಳಾ ಸಂಘಟನೆಯ ಸಮಾಲೋಚನಾ ಗೋಷ್ಠಿ

Update: 2024-05-13 07:54 GMT

ಹಾಸನದ ಲೈಂಗಿಕ ಹಗರಣದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ಅದರ ಮೂಲ ವಿಷಯವನ್ನೇ ಮೂಲೆಗುಂಪು ಮಾಡುವ ತೀವ್ರ ಪ್ರಯತ್ನ ನಡೆಯುತ್ತಿದ್ದು, ಕಾನೂನಿನ ಕುಣಿಕೆ ಬಿಗಿಯಾಗಬೇಕು. ಕೆಟ್ಟ ರಾಜಕಾರಣದ ಸಂಚು ಬಯಲಾಗಬೇಕು. ನಾಗರಿಕ ಸಮಾಜ ಎಚ್ಚರದಲ್ಲಿದೆ ಎಂಬುದು ಮತ್ತೆ‌ ಮತ್ತೆ ಸ್ಪಷ್ಟವಾಗಿ ಗೋಚರಿಸಬೇಕು ಎನ್ನುವ ಉದ್ದೇಶದಿಂದ ಅಖಿಲ‌ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿ ಮೇ 16 ರ ಗುರುವಾರ ‌ಮಧ್ಯಾಹ್ನ 3ರಿಂದ ಸಮಾಲೋಚನಾ ಗೋಷ್ಠಿ ಹಮ್ಮಿಕೊಂಡಿದೆ.

ಈ ಸಮಾಲೋಚನಾ ಗೋಷ್ಠಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಬೇಕು ಎಂದು ಆಹ್ವಾನಿಸಿರುವ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ.ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಅವರು, ʻʻಈ ಲೈಂಗಿಕ ಹಗರಣದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ಅದರ ಮೂಲ ವಿಷಯವನ್ನೇ ಮೂಲೆಗುಂಪು ಮಾಡುವ ತೀವ್ರ ಪ್ರಯತ್ನ ಎನಿಸುತ್ತಿದ್ದು, ಕಾನೂನಿನ ಕುಣಿಕೆ ಬಿಗಿಯಾಗಬೇಕು. ಕೆಟ್ಟ ರಾಜಕಾರಣದ ಸಂಚು ಬಯಲಾಗಬೇಕು. ನಾಗರಿಕ ಸಮಾಜ ಎಚ್ಚರದಲ್ಲಿದೆ ಎಂಬುದು ಮತ್ತೆ‌ ಮತ್ತೆ ಸ್ಪಷ್ಟವಾಗಿ ಗೋಚರಿಸಬೇಕು. ಇದು ನಮ್ಮೆಲ್ಲರ ಪ್ರತಿಪಾದನೆ. ಈ ನಮ್ಮ ಪ್ರತಿಪಾದನೆಗೆ ಇನ್ನಷ್ಟು ಬಲ ತುಂಬಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರಿನ ಸುಬ್ಬಯ್ಯ ಸರ್ಕಲ್ ಬಳಿ ಇರುವ ಸಿ.ಎಸ್.ಐ. ಕಾಂಪೌಂಡ್ ಸೌಹಾರ್ದದಲ್ಲಿ ಮೇ 16 ರ ಗುರುವಾರ ‌ಮಧ್ಯಾಹ್ನ 3ರಿಂದ ಸಮಾಲೋಚನಾ ಗೋಷ್ಟಿ ನಡೆಸಲು ಉದ್ದೇಶಿಸಿದೆʼʼ ಎಂದು ತಿಳಿಸಿದ್ದಾರೆ.

ಈ ಗೋಷ್ಠಿಯಲ್ಲಿ ನ್ಯಾಯವಾದಿ ಸಿ.ಎಚ್. ಹನುಮಂತರಾಯ ಸೇರಿದಂತೆ ಹಲವಾರು ಕಾನೂನು ತಜ್ಞರು ಭಾಗವಹಿಸಿ ಪ್ರಕರಣದ ಕಾನೂನು ಸಂಬಂಧೀ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಮಹಿಳಾ ಆಯೊಗದ ಅಧ್ಯಕ್ಷರು ಕೂಡ ಭಾಗಿಯಾಗಲಿದ್ದಾರೆ. ಅದೇ ರೀತಿ ವಿವಿಧ ವಿಭಾಗಗಳಿಂದ ಪ್ರತಿನಿಧಿಗಳನ್ನು ಪಾಲ್ಗೊಳ್ಳಲು ಕೇಳಲಾಗುತ್ತಿದೆ. ಸಾರ್ವಜನಿಕರೂ ಭಾಗಿಯಾಗಬಹುದು ಎಂದು ಅವರು ಹೇಳಿದ್ದಾರೆ.

Tags:    

Similar News