ಕಿರುತೆರೆ ನಟಿಗೆ ಲೈಗಿಂಕ ಕಿರುಕುಳ, ಕಾಮಿಡಿ ಕಿಲಾಡಿ ನಟ ಮಡೆನೂರು ಮನು ಬಂಧನ
ಸಂತ್ರಸ್ತೆ ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣದಡಿಯಲ್ಲಿ ಪೊಲೀಸರು ಕಿರುತೆರೆ ನಟ ಮಡೆನೂರು ಮನು ಅವರನ್ನು ನಾಗರಬಾವಿಯ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ (ಮೇ23)ರಂದು ಮಡೆನೂರು ಮನು ನಾಯಕನಟನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರ ಬಿಡುಗಡೆಯಾಗಬೇಕಿತ್ತು.;
ಕಾಮಿಡಿ ಕಿಲಾಡಿ ನಟ ಮಡೆನೂರು ಮನು
ಕಿರುತೆರೆ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿಯಲ್ಲಿ ಕಾಮಿಡಿ ಕಿಲಾಡಿ ಸೀಸನ್-2 ವಿಜೇತ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣದಡಿಯಲ್ಲಿ ಪೊಲೀಸರು ಕಿರುತೆರೆ ನಟ ಮಡೆನೂರು ಮನು ಅವರನ್ನು ನಾಗರಬಾವಿಯ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ (ಮೇ23)ರಂದು ಮಡೆನೂರು ಮನು ನಾಯಕ ನಟನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ನಾಯಕ ನಟನ ಬಂಧನವಾಗಿರುವುದರಿಂದ ಸಿನಿಮಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ದೂರಿನಲ್ಲೇನಿದೆ?
"ಮಡೆನೂರು ಮನು ಹಾಗೂ ನಾನು ಕಳೆದ ಏಳು ವರ್ಷಗಳಿಂದ ಪರಿಚಿತರಾಗಿದ್ದೇವೆ. 2018 ರಲ್ಲಿ ಪರಿಚಯ ಸ್ನೇಹವಾಗಿ ಮಾರ್ಪಟ್ಟಿತು. ಕಾರ್ಯಕ್ರಮದ ನಿಮಿತ್ತ ಒಮ್ಮೆ ಶಿಕಾರಿಪುರಕ್ಕೆ ಹೋಗಿದ್ದಾಗ ಹೋಟೆಲ್ ರೂಮ್‌ಗೆ ನನ್ನನು ಕರೆಸಿಕೊಂಡು ಅತ್ಯಾಚಾರ ಮಾಡಿದ್ದರು. ಈ ವೇಳೆ ಗರ್ಭವತಿಯಾಗಿದ್ದ ನನಗೆ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದರು. 2022 ರಲ್ಲಿ ನಮ್ಮ ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿ ಅನೇಕ ಬಾರಿ ಅತ್ಯಾಚಾರ ಮಾಡಿದ್ದು ತನ್ನ ಖಾಸಗಿ ವಿಡಿಯೋ ಸೆರೆಹಿಡಿದು ಹಲವು ಬಾರಿ ಬೆದರಿಕೆ ಹಾಕಿದ್ದಾನೆ," ಎಂದು ಆರೋಪಿಸಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ನಟ ಮಡೆನೂರು ಮನು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. "ಇತ್ತೀಚೆಗೆ ನಾನು ಆಕೆಯೊಂದಿಗೆ ಮಾತನಾಡಿದ್ದು ಸುಮ್ಮನಿರುವಂತೆ ತಿಳಿಸಿದ್ದೆ. ಆದರೆ ಆಕೆಯ ಜತೆಯಲ್ಲಿರುವವರು ಆಕೆಯಿಂದ ದೂರು ಕೊಡುವಂತೆ ಮಾಡುತ್ತಿದ್ದಾರೆ. ಆಕೆ ಹಿಂದೆ ಇಬ್ಬರು ಹಿರೋ ಹಾಗೂ ಓರ್ವ ಲೇಡಿ ಡಾನ್ ಸೇರಿ ಹನ್ನೆರೆಡು ಜನರಿದ್ದು ಅವರ ಬಗ್ಗೆಯು ನನಗೆ ತಿಳಿಸಿದ್ದು ಶೀಘ್ರದಲ್ಲೇ ಕಾನೂನು ಮೂಲಕ ಉತ್ತರ ಕೊಡುತ್ತೇನೆ. ತುಂಬಾ ಇಷ್ಟ ಹಾಗೂ ಕಷ್ಟ ಪಟ್ಟು ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದ್ದು ಈ ವೇಳೆ ದೂರು ನೀಡುವ ಅಗತ್ಯವಿರಲಿಲ್ಲ," ಎಂದು ಹೇಳಿಕೊಂಡಿದ್ದಾರೆ.