Cooking oil prices increase| ಅಡುಗೆ ಎಣ್ಣೆ ಬೆಲೆ ಏರಿಕೆ, ಕೊಬ್ಬರಿ ಎಣ್ಣೆ ದರ ಲೀಟರ್‌ಗೆ 300 ರೂಪಾಯಿ
ಒಂದು ವರ್ಷದ ಹಿಂದೆ ಕ್ವಿಂಟಲ್‌ಗೆ 8,000-8,500 ರೂ.ಗಳಿದ್ದ ಕೊಬ್ಬರಿಯ ಬೆಲೆ ಈಗ 14,500-15,000 ರೂ.ಗಳಿಗೆ ಏರಿಕೆಯಾಗಿದೆ.;
ರಾಜ್ಯದಲ್ಲಿ ಬಸ್, ಮೆಟ್ರೋ ಮತ್ತು ಹಾಲಿನ ಬೆಲೆ ಏರಿಕೆಯ ಬಳಿಕ ಇದೀಗ ಜನಸಾಮಾನ್ಯರಿಗೆ ಅಡುಗೆ ಎಣ್ಣೆಯ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೆಂಗಿನ ಎಣ್ಣೆಯ ಬೆಲೆ ಲೀಟರ್‌ಗೆ 300 ರೂ.ಗಳಷ್ಟು ಹೆಚ್ಚಾಗಿದ್ದು, ಇತರ ಖಾದ್ಯ ಎಣ್ಣೆಗಳ ಬೆಲೆಯೂ ಕಳೆದ ಒಂದು ತಿಂಗಳಿನಿಂದ ಹೆಚ್ಚುತ್ತಿದೆ. ಸೂರ್ಯಕಾಂತಿ, ತಾಳೆ, ನೆಲಗಡಲೆ, ಎಳ್ಳು ಮತ್ತು ತೆಂಗಿನ ಎಣ್ಣೆಗಳು ಲೀಟರ್‌ಗೆ 10-20 ರೂ.ಗಳಷ್ಟು ಹೆಚ್ಚಳವಾಗಿದೆ.
ಸಾಮಾನ್ಯವಾಗಿ ಮಾರ್ಚ್ ಮಧ್ಯದಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತದೆ. ಆದರೆ ಈ ಬಾರಿ ಫೆಬ್ರವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ. ಹೀಗಾಗಿ ಕೊಬ್ಬರಿ ಎಣ್ಣೆb ಏರಿಕೆ ಕಂಡಿದೆ.
ಒಂದು ವರ್ಷದ ಹಿಂದೆ ಕ್ವಿಂಟಲ್‌ಗೆ 8,000-8,500 ರೂ.ಗಳಿದ್ದ ಕೊಬ್ಬರಿಯ ಬೆಲೆ ಈಗ 14,500-15,000 ರೂ.ಗಳಿಗೆ ಏರಿಕೆಯಾಗಿದೆ. ಕೂಲರ್‌ಗಳಲ್ಲಿ ತೆಂಗಿನ ಎಣ್ಣೆಯ ಬಳಕೆ ಹೆಚ್ಚಾದ ಕಾರಣ ತೆಂಗಿನ ಎಣ್ಣೆಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಈ ಕೊರತೆಯ ನೇರ ಪರಿಣಾಮ ತೆಂಗಿನ ಎಣ್ಣೆ ಬೆಲೆಗಳ ಮೇಲೆ ಬೀಳುತ್ತಿದ್ದು, ಪರಿಣಾಮವಾಗಿ, ಒಂದು ಲೀಟರ್ ತೆಂಗಿನ ಎಣ್ಣೆಯ ಬೆಲೆ 50 ರೂ.ಗಳಷ್ಟು ಹೆಚ್ಚಾಗಿದೆ.