ನಟ್ಟು- ಬೋಲ್ಟ್ ಹೇಳಿಕೆ | ಕಲಾವಿದರಿಗೆ ಬೆದರಿಕೆ ಹಾಕಬಾರದು: ನಟಿ ರಮ್ಯಾ ಯೂಟರ್ನ್
ಡಿ ಕೆ ಶಿವಕುಮಾರ್ ಮಾತು ಸಂಪೂರ್ಣ ತಪ್ಪಲ್ಲ. ಆದರೆ, ಎಲ್ಲದ್ದಕ್ಕೂ ಕಲಾವಿದರನ್ನು ದೂಷಿಸುವುದು ತಪ್ಪು. ರಾಜಕಾರಣಿಗಳಿಗೆ ಕಲಾವಿದರು ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವ ಮೂಲಕ ರಮ್ಯಾ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ.;
ನಟಿ ರಮ್ಯಾ
ಕನ್ನಡದ ನೆಲ, ಜಲ, ಭಾಷೆ ವಿಷಯಕ್ಕೆ ಕಲಾವಿದರು ಬೆಂಬಲ ನೀಡುತ್ತಿಲ್ಲ. ಇಂಥವರ ನಟ್ಟು ಬೋಲ್ಟ್ ಟೈಟ್ ಮಾಡುವುದು ಕೂಡ ತಮಗೆ ಗೊತ್ತು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಸ್ಯಾಂಡಲ್‌ವುಡ್ ಹಾಗೂ ರಾಜಕೀಯ ವಲಯದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇದೀಗ ಡಿಕೆ ಶಿವಕುಮಾರ್ ಮಾತುಗಳನ್ನು ಬೆಂಬಲಿಸಿ ಮಾತನಾಡಿದ್ದ ನಟಿ ರಮ್ಯಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಯು ಟರ್ನ್ ಹೊಡೆದಿದ್ದಾರೆ.
ಡಿ ಕೆ ಶಿವಕುಮಾರ್ ಮಾತು ಸಂಪೂರ್ಣ ತಪ್ಪಲ್ಲ. ಆದರೆ, ಎಲ್ಲದ್ದಕ್ಕೂ ಕಲಾವಿದರನ್ನು ದೂಷಿಸುವುದು ತಪ್ಪು. ರಾಜಕಾರಣಿಗಳಿಗೆ ಕಲಾವಿದರು ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವ ಮೂಲಕ ರಮ್ಯಾ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ.
ರಮ್ಯಾ ಪೋಸ್ಟ್‌ನಲ್ಲಿ ಏನಿದೆ?
ಡಿಕೆ ಶಿವಕುಮಾರ್ ಅವರು ಆಡಿದ್ದ ಮಾತು ಸಂಪೂರ್ಣವಾಗಿ ತಪ್ಪಲ್ಲ.
ನಟರು ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪ್ರಭಾವವನ್ನು ಬೀರುತ್ತಾರೆ ಮತ್ತು (ವೈಯಕ್ತಿಕ ಅಭಿಪ್ರಾಯ). ಸಂವಾದವು ಪ್ರಜಾಪ್ರಭುತ್ವದಲ್ಲಿ ಅವಶ್ಯಕ.ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಗೆ ಬೆಂಬಲ ನೀಡಿದಂತಹ ಅದ್ಭುತ ಉದಾಹರಣೆಯಾಗಿದೆ.
ಕಲಾವಿದರು ಯಾವುದೇ ಕಾರ್ಯಕ್ಕೆ ತಮ್ಮ ಹೆಸರನ್ನು ನೀಡಬೇಕೋ ಇಲ್ಲವೋ ಎಂಬುದು ಅವರ ಆದ್ಯತೆ. ಚಿತ್ರರಂಗದಲ್ಲಿರುವ ನನ್ನ ಸ್ನೇಹಿತರಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಹಂಚಿಕೊಳ್ಳುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳುವುದನ್ನು ದೂರ ಇಡುತ್ತಾರೆ. ಏಕೆಂದರೆ ಅವರ ಕೆಲಸ ನಿರಂತರವಾಗಿ ವಿಮರ್ಶೆಗೆ ಒಳಗಾಗಬಹುದು ಅಥವಾ ಅವರ ಪ್ರಚಾರಗಳು ಪ್ರಭಾವಿತವಾಗಬಹುದು.
ನಟಿ ಮಹಿಳೆಯರು ರಾಜಕೀಯ ನಾಯಕರಿಗೆ ಸುಲಭ ಗುರಿಯಾಗುತ್ತಾರೆ. ವಿಶೇಷವಾಗಿ, ನಾಯಕರು ಅವರ ವಿರುದ್ಧ ಬೆದರಿಕೆ ಒಡ್ಡುವುದು ಮತ್ತು ದೌರ್ಜನ್ಯ ನಡೆಸುವುದನ್ನು ತೊರೆದು, ಈ ಧೋರಣೆಯನ್ನು ಬಿಡಬೇಕು. ಇದೇ ಕಾರಣಕ್ಕೆ ಅವರಂತಹವರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಕಲಾವಿದರ ಕುರಿತಾಗಿ ಡಿಕೆ ಶಿವಕುಮಾರ್ ಆಡಿದ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷ ನಾಯಕರು ಚಿತ್ರರಂಗದ ಕೆಲವು ನಟ-ನಟಿಯರು ಕೂಡ ಪರ-ವಿರೋಧ ವ್ಯಕ್ತಪಡಿಸಿದ್ದಾರೆ.