ಹಂಪಿ ಅತ್ಯಾಚಾರಕ್ಕೂ 10 ದಿನಗಳ ಮೊದಲು ಆರೋಪಿ ಸರಗಳ್ಳತನಕ್ಕೆ ಯತ್ನ: ಪೊಲೀಸರು
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಇಬ್ಬರು ಸಾಯಿ ಚೇತನ್ ಮತ್ತು ಮಲ್ಲೇಶ್ ಎಂದು ಗುರುತಿಸಿದ್ದಾರೆ. ಇಬ್ಬರೂ ಪ್ರವಾಸಿ ತಾಣವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರದೇಶದವರು.;
ಬಂಧಿತ ಆರೋಪಿಗಳು
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ ಬಳಿ ಇಸ್ರೇಲ್ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳು. ಈ ಘಟನೆ ನಡೆಯುವ 10 ದಿನಗಳ ಮೊದಲು ಸರ ಕಳ್ಳತನದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದಿನ ಅಪರಾಧಲ್ಲಿ ಅವರು ವಿಫಲವಾಗಿದ್ದರು. ಆದರೆ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿರಲಿಲ್ಲ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಬಹುಶಃ ಈ ಘಟನೆ (ಸಾಮೂಹಿಕ ಅತ್ಯಾಚಾರ) ತಪ್ಪಿಸಬಹುದಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರೋಪಿಗಳು ಗಂಗಾವತಿ ಪ್ರದೇಶದ ನಿರ್ಮಾಣ ಕಟ್ಟಡದ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಇಬ್ಬರು ಸಾಯಿ ಚೇತನ್ ಮತ್ತು ಮಲ್ಲೇಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರವಾಸಿ ತಾಣವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರದೇಶದವರು. ಚೇತನ್ ಮತ್ತು ಮಲ್ಲೇಶ್ ಶನಿವಾರ ಬಂಧನಕ್ಕೆ ಒಳಗಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮೂರನೇ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.
ಆರೋಪಿಗಳಿಗೆ ಘಟನಾ ಸ್ಥಳದಿಂದ ಹೊರಬರಲು ಒಂದೇ ಒಂದು ಮಾರ್ಗವಿತ್ತು. ಸಂತ್ರಸ್ತರು ಇನ್ನೊಂದು ದಾರಿಯಲ್ಲಿ ಓಡಿಹೋಗಿದ್ದರು. ಆ ಮಾರ್ಗದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆ ರಾತ್ರಿ 11.17ಕ್ಕೆ ಆ ದಿಕ್ಕಿನಲ್ಲಿ ಬೈಕ್ ಪ್ರಯಾಣಿಸಿರುವುದು ಪೊಲೀಸರಿಗೆ ಕಂಡುಬಂದಿದೆ. ಈ ಮೂಲಕ ಆರೋಪಿಗಳ ಸುಳಿವು ಸಿಕ್ಕಿತ್ತು ಎಂದು ಅವರು ತಿಳಿಸಿದ್ದಾರೆ.