Honey Trap | ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು: ಕೆ.ಎನ್.ರಾಜಣ್ಣ

ಮೊದಲ ಬಾರಿ ಬ್ಲೂ ಜೀನ್ಸ್ ಧರಿಸಿದ ಯುವತಿ ಹನಿಟ್ರ್ಯಾಪ್ ಮಾಡಲು ಬಂದಿದ್ದರು. ಎರಡನೇ ಬಾರಿ ಬಂದಾಗ ಯುವತಿ ತಾನು ಹೈಕೋರ್ಟ್ ಲಾಯರ್ ಎಂದು ಪರಿಚಯಿಸಿಕೊಂಡಿದ್ದಳು.;

Update: 2025-03-25 10:22 GMT

ಸಚಿವ ರಾಜಣ್ಣ

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕೊನೆಗೂ ಸ್ಪಷ್ಟನೆ ನೀಡಿದ್ದು, ಎರಡು ಬಾರಿ ತಾನು ಹನಿಟ್ರ್ಯಾಪ್ ಯತ್ನಕ್ಕೆ ಗುರಿಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲ ಬಾರಿ ಬ್ಲೂ ಜೀನ್ಸ್ ಧರಿಸಿದ ಯುವತಿ ಹನಿಟ್ರ್ಯಾಪ್ ಮಾಡಲು ಬಂದಿದ್ದರು. ಎರಡನೇ ಬಾರಿ ಬಂದಾಗ ಯುವತಿ ತಾನು ಹೈಕೋರ್ಟ್ ಲಾಯರ್ ಎಂದು ಪರಿಚಯಿಸಿಕೊಂಡಿದ್ದಳು" ಎಂದು ತಿಳಿಸಿದರು.

"ಮೊದಲ ಬಾರಿ ಲಾಯರ್ ಎಂದು ಹೇಳಿರಲಿಲ್ಲ, ಆದರೆ ಎರಡನೇ ಬಾರಿ ಬಂದಾಗ ಯುವತಿ ತಾನು ಹೈಕೋರ್ಟ್ ವಕೀಲೆಯಾಗಿದ್ದೇನೆ ಎಂದು ತಿಳಿಸಿ, ವೈಯಕ್ತಿಕವಾಗಿ ಮಾತನಾಡಬೇಕು ಎಂದು ಪೀಡಿಸಿದ್ದಾಳೆ ಎಂದು ವಿವರಿಸಿದರು. ಈ ಯತ್ನಗಳ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಬೇಕು. ನಾನು ಈ ಬಗ್ಗೆ ದೂರು ನೀಡುತ್ತೇನೆ" ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಮತ್ತು ಅಧಿಕಾರಿಗಳಿಗೆ ತಲೆನೋವಾಗಿ ಸಂಭವಿಸಿದೆ. ರಾಜಕೀಯ ನಾಯಕರನ್ನು ಬಲೆಗೆ ಹಾಕಲು, ಆಡಿಯೋ-ವೀಡಿಯೋ ದೃಶ್ಯಗಳನ್ನು ಬಳಸುವ ಹೊಸ ಮಾದರಿಯ ಹನಿಟ್ರ್ಯಾಪ್‌ ರಾಜ್ಯದಲ್ಲಿ ನಡೆಯುತ್ತಿದೆ. 

Tags:    

Similar News