ನಕಲಿ ಎಂದು ತಪ್ಪಾಗಿ ಭಾವಿಸಿ ಅಸಲಿ ಗನ್ನಲ್ಲಿ 3 ವರ್ಷದ ತಮ್ಮನನ್ನು ಗುಂಡು ಹೊಡೆದು ಕೊಂದ ಅಣ್ಣ
ಕೋಳಿ ಫಾರಂನಲ್ಲಿ ರಕ್ಷಣೆಗಾಗಿ ಇಟ್ಟಿದ್ದ ಗನ್ ಅನ್ನು ಮಕ್ಕಳು ಆಡವಾಡಲು ತೆಗೆದುಕೊಂಡಿದ್ದರು. ಅಣ್ಣ ಆಟವಾಡುತ್ತಾ ತಮ್ಮನ ಹೊಟ್ಟೆಗೆ ಗುರಿಯಿಟ್ಟು ಹೊಡೆದಿದ್ದ.;
ಮಕ್ಕಳಿಬ್ಬರು ಮನೆಯಲ್ಲಿ ಆಟವಾಡುತ್ತಾ ನಕಲಿ ಎಂದು ಅಸಲಿ ಗನ್ನಲ್ಲಿ ಶೂಟ್ ಮಾಡಿದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಘಟನೆ ನಾಗಮಂಗಲ ತಾಲೂಕಿನ ದೊಂದೇಮಾದಿಹಳ್ಳಿ ಕೋಳಿ ಫಾರಂನಲ್ಲಿ ನಡೆದಿದೆ. ಮೂರು ವರ್ಷದ ಅಭಿಷೇಕ್ ಮೃತಪಟ್ಟ ಬಾಲಕ. ಆತನ ಅಣ್ಣನೇ ಆಟವಾಡುತ್ತಾ ಗುಂಡು ಹೊಡೆದಿದ್ದಾನೆ.
ಅವರಿಬ್ಬರೂ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರ ಕುಟುಂಬದ ಮಕ್ಕಳು. ಈ ವೇಳೆ ಕೋಳಿ ಫಾರಂನಲ್ಲಿ ಭದ್ರತೆಯಾಗಿ ಅಸಲಿ ಗನ್ ಇಡಲಾಗಿತ್ತು. ಅದರಲ್ಲಿ ಜೀವಂತ ಗುಂಡುಗಳಿದ್ದವು. 13 ವರ್ಷದ ಅಣ್ಣನೊಂದಿಗೆ 3 ವರ್ಷದ ಅಭಿಷೇಕ್ನನ್ನು ಆಟವಾಡಲು ಬಿಟ್ಟು ಮನೆಯವರು ಕೆಲಸ ಮಾಡಲು ಹೋಗಿದ್ದರು. ಈ ವೇಳೆ ಅವರಿಬ್ಬರೂ ಅಸಲಿ ಗನ್ ತೆಗೆದುಕೊಂಡು ಕಳ್ಳ-ಪೊಲೀಸ್ ಆಟವಾಡುತ್ತಾ ಶೂಟ್ ಮಾಡಿಕೊಂಡಿದ್ದರು. ಆಕಸ್ಮಿಕ ಫೈರಿಂಗ್‌ನಿಂದ ಮಗುವಿನ ಹೊಟ್ಟೆ ಸೀಳಿ ಹೋಗಿದೆ.
ಸುದೀಪ್ ದಾಸ್ ಮಗುವಿನ ಕಡೆಗೆ ಫೈರಿಂಗ್ ಆಗುತ್ತಿದ್ದಂತೆ 3 ವರ್ಷದ ಮಗು ಅಭಿಷೇಕ್ ಹೊಟ್ಟೆಗೆ ಗುಂಡು ಹೊಕ್ಕಿದೆ. ಅಲ್ಲೇ ಅಭಿಷೇಕ್ ತಾಯಿ ಲಿಪಿಕಾ ಇದ್ದರು. ಗುಂಡೇಟು ಅವರಿಗೂ ಬಿದ್ದಿದೆ.
ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂ ಇದಾಗಿದೆ. ಅಲ್ಲಿ ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕಾ ದಂಪತಿ ಮಕ್ಕಳೊಂದಿಗೆ ಇದ್ದರು. ಅವರು ಕಳೆದ ಕೆಲವು ವರ್ಷಗಳಿಂದ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲೇ ಕೆಲಸ ಮಾಡುತ್ತಿದ್ದರು.
ಶಶಾಂಕ್ ಹಾಗೂ ಲಿಪಿಕರನ್ನ ನೋಡಲು ಬಂದಿದ್ದ ಅವರ ಭಾವ ಶಂಕರ್ ದಾಸ್‌ನೊಂದಿಗೆ ಅವರ ಮಗ ಸುದೀಪ್ ದಾಸ್ ಕೂಡ ಬಂದಿದ್ದನು. ಆಟವಾಡುತ್ತಿದ್ದಾಗ ಮಕ್ಕಳ ಕೈಗೆ ಗನ್ ಸಿಕ್ಕಿದೆ. ಕೋಳಿ ಫಾರಂ ಮಾಲೀಕ ನರಸಿಂಹಮೂರ್ತಿ ಅವರಿಗೆ ಸೇರಿದ ಗನ್ ಇದಾಗಿದೆ. ಪರವಾನಗಿ ಪಡೆದು ಗನ್ ಇಟ್ಟುಕೊಂಡಿದ್ದರು.