ಸೋಲಿನ ಬೇಸರದಲ್ಲಿರುವ ಭಾರತಕ್ಕೆ ಈಗ ಗಾಯದ ಬರೆ, ಗಿಲ್ ಬೆರಳು ಮುರಿತ
ಭಾರತದ ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿನ ಯುವ ಹೀರೋಗಳಲ್ಲಿ ಒಬ್ಬರಾದ ಗಿಲ್ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಿಂದ ಹೊರಗುಳಿದರೆ, ಭಾರತದ ಅಗ್ರ ಕ್ರಮಾಂಕವು ದುರ್ಬಲವಾಗಬಹುದು.;
ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಮನ್ ಗಿಲ್ ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ನವೆಂಬರ್ 22ರಿಂದ ಪರ್ತ್ ನ ಓಪ್ಟಸ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಯಾಕೆಂದರೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಸೋತು ಐದರಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಭಾರತದ ಬ್ಯಾಟಿಂಗ್ ಬಲ ಕುಸಿಯಲಿದೆ.
ಭಾರತದ ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿನ ಯುವ ಹೀರೋಗಳಲ್ಲಿ ಒಬ್ಬರಾದ ಗಿಲ್ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಿಂದ ಹೊರಗುಳಿದರೆ, ಭಾರತದ ಅಗ್ರ ಕ್ರಮಾಂಕವು ದುರ್ಬಲವಾಗಬಹುದು.
ಇಂಟ್ರಾ-ಸ್ಕ್ವಾಡ್ ಪಂದ್ಯದ ಸಿಮ್ಯುಲೇಶನ್ ಪಂದ್ಯದ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಗಿಲ್ ಗಾಯಗೊಂಡರು. ಅವರು ಸಾಕಷ್ಟು ನೋವಿನಿಂದ ಬಳಲಿದ್ದಾರೆ. ಮತ್ತು ಹೆಚ್ಚಿನ ಸ್ಕ್ಯಾನ್ ಗಳಿಗಾಗಿ ತಕ್ಷಣ ಮೈದಾನ ತೊರೆದಿದ್ದಾರೆ .
ಬಿಸಿಸಿಐ ಮೂಲವೊಂದರ ಪ್ರಕಾರ, ಗಿಲ್ ಅವರ ಎಡ ಹೆಬ್ಬೆರಳು ಮುರಿದಿದೆ ಮತ್ತು ಟೆಸ್ಟ್ ಪ್ರಾರಂಭವಾಗಲು ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿರುವುದರಿಂದ, ಸ್ಟೈಲಿಶ್ ಬಲಗೈ ಬ್ಯಾಟ್ಸ್ಮನ್ ಆರಂಭಿಕ ಪಂದ್ಯಕ್ಕೆ ಸಮಯಕ್ಕೆ ಸರಿಯಾಗಿ ಫಿಟ್ ಆಗುವುದು ಅಸಾಧ್ಯ.
ಹೆಬ್ಬೆರಳಿನ ಮೂಳೆ ಮುರಿತ ಗುಣವಾಗಲು ಸಾಮಾನ್ಯವಾಗಿ 14 ದಿನ ಬೇಕಾಗುತ್ತದೆ. ನಂತರ ತಮ್ಮ ನಿಯಮಿತ ನೆಟ್ ಸೆಷನ್‌ಗಳನ್ನು ಪ್ರಾರಂಭಿಸಬೇಕಾಗುತ್ತದೆ. . ಅಡಿಲೇಡ್‌ನಲ್ಲಿ ಡಿಸೆಂಬರ್ 6 ರಿಂದ ಎರಡನೇ ಟೆಸ್ಟ್ ಪ್ರಾರಂಭವಾಗುವುದರಿಂದ, ಅವರು ಆ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆಯಿದೆ.
ಭಾರತದ ಬ್ಯಾಟಿಂಗ್‌ಗೆ ತೊಂದರೆ
ಗಿಲ್ ಅವರ ಅನುಪಸ್ಥಿತಿ ರಾಷ್ಟ್ರೀಯ ತಂಡಕ್ಕೆ ದೊಡ್ಡ ಹಿನ್ನಡೆ. ಏಕೆಂದರೆ ಅವರು ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಮಾತ್ರವಲ್ಲ, ರೋಹಿತ್ ಅನುಪಸ್ಥಿತಿಯಲ್ಲಿ, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸುವ ಅವಕಾಶವನ್ನೂ ಹೊಂದಿದ್ದರು.
ಇನ್ನು ಫಾರ್ಮ್‌ನಲ್ಲಿ ಇಲ್ಲದ ಹೊರತಾಗಿಯೂ ಭಾರತ ತಂಡಕ್ಕೆ ಪರಿಗಣಿಸಬಹುದಾಗಿದ್ದ ಕೆ. ಎಲ್ ರಾಹುಲ್ ಅವರು ಪಂದ್ಯದ ಆರಂಭಿಕ ದಿನದಂದು ಪ್ರಸಿದ್ಧ್ ಕೃಷ್ಣ ಶಾರ್ಟ್ ಬಾಲ್ ಹೊಡೆತ ತಿಂದಿದ್ದಾ. ಹೀಗಾಗಿ ಅವರ ಮೊಣಕೈಗೆ ಗಾಯವಾಗಿದ್ದು, ಮೈದಾನದಿಂದ ಹೊರಹೋಗಬೇಕಾಯಿತು.
ರಾಹುಲ್ ಅವರ ಗಾಯಗೊಂಡ ಜಾಗಕ್ಕೆ ಐಸಿಂಗ್ ಅಗತ್ಯವಿತ್ತು. ಶನಿವಾರ ಪಂದ್ಯದ ಸಿಮ್ಯುಲೇಶನ್‌ನ ಎರಡನೇ ದಿನದಂದು ಅವರು ಮೈದಾನಕ್ಕೆ ಇಳಿಯಲಿಲ್ಲ,
ಗಿಲ್ ಅನುಪಸ್ಥಿತಿಯಲ್ಲಿ, ಅಭಿಮನ್ಯು ಈಶ್ವರನ್ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯಕ್ಕೆ ಆಯ್ಕೆಯಾಗಬಹುದು. ಏಕೆಂದರೆ ಭಾರತ ತಂಡಕ್ಕೆ ಹೆಚ್ಚಿನ ಆಯ್ಕೆಗಳು ಉಳಿದಿಲ್ಲ.
ಗಂಡು ಮಗುವಿಗೆ ತಂದೆಯಾಗಿರುವ ನಾಯಕ ರೋಹಿತ್ ಮೂರು ದಿನಗಳ ತರಬೇತಿಯೊಂದಿಗೆ ತಂಡ ಸೇರಲು ನಿರ್ಧರಿಸಿದರೆ ಕೋಚ್ ಮುಖದಲ್ಲಿ ಮಂದಹಾಸ ಮೂಡಬಹುದು.
ರಣಜಿ ಟ್ರೋಫಿಯಲ್ಲಿ 43.2 ಓವರ್ ಬೌಲಿಂಗ್ ಮಾಡಿ ಏಳು ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 37 ರನ್ ಗಳಿಸಿರುವ ಮೊಹಮ್ಮದ್ ಶಮಿ ಖಂಡಿತವಾಗಿಯೂ ಎರಡನೇ ಟೆಸ್ಟ್‌ಗೆ ಮೊದಲು ತಂಡ ಸೇರಿಕೊಳ್ಳಲಿದ್ದಾರೆ.
ಪಂದ್ಯದ ಭಾನುವಾರ ವಾಕಾದಲ್ಲಿ ಮುಕ್ತಾಯವಾಗಲಿದೆ. ನಂತರ ಮೀಸಲು ಆಟಗಾರರನ್ನು ಹೊರತುಪಡಿಸಿ ಭಾರತ ಎ ತಂಡವು ಭಾರತಕ್ಕೆ ಮರಳಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಆಯಾ ರಾಜ್ಯ ತಂಡಗಳನ್ನು ಸೇರಿಕೊಳ್ಳಲಿದೆ.
ಮುಖ್ಯ ತಂಡವು ನಂತರ ಪರ್ತ್ನ ಒಪ್ಟಸ್ ಕ್ರೀಡಾಂಗಣಕ್ಕೆ ತೆರಳಲಿದ್ದು, ಅಲ್ಲಿ ಅವರು ಶುಕ್ರವಾರದಿಂದ ಪ್ರಾರಂಭವಾಗುವ ಟೆಸ್ಟ್‌ಗೆ ಪೂರ್ವಭಾವಿಯಾಗಿ ಗುರುವಾರದವರೆಗೆ ಮೂರು ನೆಟ್ ಸೆಷನ್‌ಗಳನ್ನು ಎದುರಿಸಲಿದ್ದಾರೆ.