ಸಮಿತ್ ದ್ರಾವಿಡ್ U-19 ತಂಡಕ್ಕೆ ಆಯ್ಕೆ

Update: 2024-08-31 07:00 GMT
ಬೆಂಗಳೂರಿನಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡದ ಸಮಿತ್ ದ್ರಾವಿಡ್ ಸಿಕ್ಸರ್ ಬಾರಿಸಿದರು.

ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಅವರನ್ನು ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ವಿವಿಧ ರೂಪಗಳ ಸರಣಿಗೆ ಯು19 ತಂಡಕ್ಕೆ ಆಯ್ಕೆ ಮಾಡಲಾಗಿದೆ.‌ 

ಪುದುಚೇರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯು ಸೆಪ್ಟೆಂಬರ್ 21, 23 ಮತ್ತು 26 ರಂದು ನಡೆಯಲಿದ್ದು, ಭಾರತವನ್ನು ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದಾರೆ. ಆನಂತರ ಚೆನ್ನೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7 ರಂದು ಎರಡು ನಾಲ್ಕು ದಿನಗಳ ಪಂದ್ಯ ನಡೆಯಲಿದೆ. ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ತಂಡದ ನಾಯಕತ್ವ ವಹಿಸಲಿದ್ದಾರೆ. 

ವೇಗಿ, ಆಲ್ ರೌಂಡರ್ ಸಮಿತ್(18) ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ. ಅವರ ರನ್‌ ಗಳಿಕೆ ಉತ್ತಮವಾಗಿಲ್ಲ. ಏಳು ಇನ್ನಿಂಗ್ಸ್‌ಗಳಿಂದ 82 ರನ್‌ ಗಳಿಸಿದ್ದು, ಅತ್ಯಧಿಕ 33 ರನ್.‌ ಈ ಪಂದ್ಯಾವಳಿಯಲ್ಲಿ ಬೌಲ್ ಮಾಡಿಲ್ಲ. 

ಆದರೆ, ವರ್ಷದ ಆರಂಭದಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕವು ಚೊಚ್ಚಲ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂಟು ಪಂದ್ಯಗಳಿಂದ 362 ರನ್ ಮತ್ತು ಜಮ್ಮು-ಕಾಶ್ಮೀರ ವಿರುದ್ಧ 98 ರನ್‌ ಗಳಿಸಿದ್ದರು. ಮುಂಬೈ ವಿರುದ್ಧದ ಎರಡು ಫೈನಲ್ ಸೇರಿದಂತೆ ಎಂಟು ಪಂದ್ಯಗಳಲ್ಲಿ 16 ವಿಕೆಟ್‌ ಪಡೆದರು. 

ಏಕದಿನ ಸರಣಿ ತಂಡ: ರುದ್ರ ಪಟೇಲ್, ಸಾಹಿಲ್ ಪರಾಖ್, ಕಾರ್ತಿಕೇಯ ಕೆ.ಪಿ., ಮೊಹಮ್ಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ, ಅಭಿಗ್ಯಾನ್ ಕುಂದು/‌ ಹರ್ವಂಶ್ ಸಿಂಗ್ ಪಾಂಗಾಲಿಯಾ (ವಿಕೆಟ್‌ ಕೀಪರ್), ಸಮಿತ್ ದ್ರಾವಿಡ್, ಯುಧಾಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮ್ಮದ್ ಇನಾನ್.

ನಾಲ್ಕು ದಿನಗಳ ಸರಣಿ ತಂಡ: ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆಪಿ, ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು/ ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್‌ ಕೀಪರ್), ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಇನಾನ್.

Tags:    

Similar News