Rohit Sharma : 25 ಓವರ್ಗಳಲ್ಲಿ 114 ರನ್ ಬಾರಿಸಿದ ನ್ಯೂಜಿಲೆಂಡ್
Rohit Sharma: ರೋಹಿತ್ ಶರ್ಮಾ ಮತ್ತು ಮೆನ್ ಇನ್ ಬ್ಲೂ ತಂಡ ಇಂದು ಮಧ್ಯಾಹ್ನ 2 ಗಂಟೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ.;
ಟೀಮ್ ಇಂಡಿಯಾ ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಉತ್ಸಾಹ ಮತ್ತು ನಿರೀಕ್ಷೆಯ ಉತ್ತುಂಗದಲ್ಲಿದ್ದಾರೆ. ಹೀಗೆ ಟೀಮ್ ಇಂಡಿಯಾಗೆ ಪ್ರೋತ್ಸಾಹ ನೀಡುತ್ತಿರುವವರಲ್ಲಿ ರೋಹಿತ್ ಶರ್ಮಾರ ಬಾಲ್ಯದ ಕೋಚ್ ದಿನೇಶ್ ಲಾಡ್ ಕೂಡ ಒಬ್ಬರು. ಅವರು ತಮ್ಮ ಶಿಷ್ಯ ರೋಹಿತ್ ಮತ್ತು ಸಂಪೂರ್ಣ ತಂಡಕ್ಕೆ ವಿಶೇಷ ಸಂದೇಶ ಕಳುಹಿಸಿದ್ದಾರೆ.
The Federal ಜತೆ ಮಾತನಾಡಿದ ಲಾಡ್, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2024ರ ಟಿ20 ವಿಶ್ವಕಪ್ ವಿಜಯವನ್ನು ಉಲ್ಲೇಖಿಸಿದ ಅವರು, ರೋಹಿತ್ ತಂಡವನ್ನು ವಿಜಯದ ಕಡೆಗೆ ಮುನ್ನಡೆಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಟೀಮ್ ಇಂಡಿಯಾ ಮತ್ತು ವಿಶೇಷವಾಗಿ ರೋಹಿತ್ ಶರ್ಮಾ ನನಗೆ ಮಾಡಿದ ವಾಗ್ದಾನವನ್ನು ನಾನು ಮರೆಯುವುದಿಲ್ಲ. ನೀವು ಟಿ20 ವಿಶ್ವಕಪ್ ಗೆಲ್ಲುವ ಭರವಸೆ ನೀಡಿದ್ದೀರಿ ಮತ್ತು ಅದನ್ನು ಸಾಧಿಸಿದ್ದೀರಿ. ಈಗ ಅದೇ ರೀತಿಯಾಗಿ ಉತ್ತಮ ಕ್ರಿಕೆಟ್ ಆಡಿಕೊಂಡು, ಚಾಂಪಿಯನ್ಸ್ ಟ್ರೋಫಿಯನ್ನು ಸಹ ದೇಶಕ್ಕೆ ತರುವಂತೆ ನಾನು ಆಶಿಸುತ್ತೇನೆ" ಎಂದು ಲಾಡ್ ಹೇಳಿದರು.
ಭಾರತ ಈ ಟೂರ್ನಿಯ ಪೂರ್ತಿ ಹಂತದಲ್ಲಿ ಪ್ರಬಲ ಆಟವನ್ನು ಪ್ರದರ್ಶಿಸಿದ್ದು, ಇದು ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. "ನಾನು ತಂಡಕ್ಕೆ ಶುಭ ಹಾರೈಸುತ್ತೇನೆ. ಅವರು ಈ ಟ್ರೋಫಿಯನ್ನು ಗೆದ್ದು ದೇಶಕ್ಕೆ ತಂದು ಕೊಡಬೇಕೆಂದು ಆಶಿಸುತ್ತೇನೆ" ಎಂದು ಲಾಡ್ ಹೇಳಿದರು.
ರೋಹಿತ್ ಶರ್ಮಾ ಮತ್ತು ಮೆನ್ ಇನ್ ಬ್ಲೂ ತಂಡ ಇಂದು ಮಧ್ಯಾಹ್ನ 2 ಗಂಟೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ.
ದಾಖಲೆ ಬರೆದ ರೋಹಿತ್
ಮೈದಾನಕ್ಕಿಳಿಯುತ್ತಿದ್ದಂತೆ ನಾಯಕ ರೋಹಿತ್ ಶರ್ಮ ದಾಖಲೆಯೊಂದನ್ನು ತಮ್ಮ ಹೆಸೆರಿಗೆ ಬರೆದರು. ಎಲ್ಲ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ರೋಹಿತ್ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ರೋಹಿತ್ ಹೊರತುಪಡಿಸಿ ಮಹೇಂದ್ರ ಸಿಂಗ್ ಧೋನಿ ಮತ್ತು ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.