Rishabh Pant | ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್ಯಾಕಿಂಗ್‌ನಲ್ಲಿ ಆರನೇ ಸ್ಥಾನಕ್ಕೇರಿದ ರಿಷಭ್ ಪಂತ್
ಮುಂಬೈ ಟೆಸ್ಟ್‌ನಲ್ಲಿ ಎರಡು ಅರ್ಧಶತಕಗಳು ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮತ್ತೊಂದು ಉದಾಹರಣೆಯಾಗಿದೆ. ಅವರೀಗ ಈ ಮಾದರಿಯಲ್ಲಿ ಲಯಕ್ಕೆ ಮರಳಿದ್ದಾರೆ ಎಂಬುದರ ಸೂಚನೆಯಾಗಿದೆ.
ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಸರಣಿಯ ಮುಂಬೈ ಪಂದ್ಯದಲ್ಲಿ ಅವರು ಸತತವಾಗಿ ಎರಡು ಅರ್ಧ ಶತಕಗಳನ್ನು ಹೊಡೆದ ಹಿನ್ನೆಲೆಯಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಐದು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೆ ಏರಿದ್ದಾರೆ.
ಆಕ್ರಮಣಕಾರಿ ಎಡಗೈ 2022ರ ಜುಲೈನಲ್ಲಿ ಐದನೇ ಸ್ಥಾನಕ್ಕೆ ಏರಿದ್ದರು. ಇದೀಗ ಅವರು ಆ ಸ್ಥಾನಕ್ಕಿಂತ ಒಂದು ಸ್ಥಾನ ಹಿಂದಿದ್ದಾರೆ. ಅಂದ ಹಾಗೆ 2022ರಲ್ಲಿ ಅವರು ಅಪಘಾತಕ್ಕೆ ಒಳಗಾಗಿದ್ದರು. ಅಲ್ಲಿಂದ ಸುಮಾರು ಎರಡು ವರ್ಷ ಆಟದಿಂದ ದೂರವುಳಿದಿದ್ದ ಅವರು ಚೇತರಿಸಿಕೊಂಡು ಬಂದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಮುಂಬೈ ಟೆಸ್ಟ್‌ನಲ್ಲಿ ಎರಡು ಅರ್ಧಶತಕಗಳು ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮತ್ತೊಂದು ಉದಾಹರಣೆಯಾಗಿದೆ. ಅವರೀಗ ಈ ಮಾದರಿಯಲ್ಲಿ ಲಯಕ್ಕೆ ಮರಳಿದ್ದಾರೆ ಎಂಬುದರ ಸೂಚನೆಯಾಗಿದೆ.
ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತದ ಮತ್ತೊಬ್ಬ ಬ್ಯಾಟರ್ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 25 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ವಿರುದ್ಧ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದರು. ಆ ತಂಡದ ಡ್ಯಾರಿಲ್ ಮಿಚೆಲ್ ಟಾಪ್ 10 ಟೆಸ್ಟ್ ಬ್ಯಾಟರ್‌ಗಳ ರ್ಯಾಂಕಿಂಗ್‌ನಲ್ಲಿ ಪ್ರಮುಖರಾಗಿದ್ದಾರೆ.
ಮುಂಬೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್ ಗಳಿಸಿದ ನಂತರ ಮಿಚೆಲ್ ಎಂಟು ಸ್ಥಾನ ಜಿಗಿದು ಏಳನೇ ಸ್ಥಾನಕ್ಕೆ ಬಂದಿದ್ದಾರೆ, ತಂಡದ ಸಹ ಆಟಗಾರ ಕೇನ್ ವಿಲಿಯಮ್ಸನ್ (ಎರಡನೇ) ಅಗ್ರ -10 ರಲ್ಲಿ ಸ್ಥಾನ ಪಡೆದ ಮತ್ತೊಬ್ಬ ನ್ಯೂಜಿಲೆಂಡ್ ಬ್ಯಾಟರ್ .
ಇಂಗ್ಲೆಂಡ್ ಬಲಗೈ ಬ್ಯಾಟ್ಸ್ಮನ್ ಜೋ ರೂಟ್ ಅಗ್ರಸ್ಥಾನದಲ್ಲಿದ್ದರೆ. ವಿಲಿಯಮ್ಸನ್, ಹ್ಯಾರಿ ಬ್ರೂಕ್ (ಮೂರನೇ), ಜೈಸ್ವಾಲ್ (ನಾಲ್ಕನೇ) ಮತ್ತು ಸ್ಟೀವ್ ಸ್ಮಿತ್ (ಐದನೇ ಸ್ಥಾನ) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿದ ನಂತರ ಭಾರತದ ಶುಬ್ಮನ್ ಗಿಲ್ (ನಾಲ್ಕು ಸ್ಥಾನ ಮೇಲೇರಿ 16 ನೇ ಸ್ಥಾನ) ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ವಲ್ಪ ಮುನ್ನಡೆ ಗಳಿಸಿದ್ದಾರೆ. ಇದೇ ವೇಲೆ ನ್ಯೂಜಿಲೆಂಡ್‌ನ ವಿಲ್ ಯಂಗ್ 29 ಸ್ಥಾನಗಳ ಏರಿಕೆ ಕಂಡು ಒಟ್ಟಾರೆ 44ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲರ್‌ಗಳ ಪಟ್ಟಿ ಹೀಗಿದೆ
ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ ಪಡೆದ ನಂತರ ರವೀಂದ್ರ ಜಡೇಜಾ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ.
ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. .
ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ವಾಷಿಂಗ್ಟನ್ ಸುಂದರ್ ಏಳು ಸ್ಥಾನ ಜಿಗಿದು 46ನೇ ಸ್ಥಾನಕ್ಕೇರಿದರೆ, ಸ್ಪಿನ್ ಜೋಡಿ ಅಜಾಜ್ ಪಟೇಲ್ (12 ಸ್ಥಾನ ಮೇಲೇರಿ 22ನೇ ಸ್ಥಾನ) ಮತ್ತು ಇಶ್ ಸೋಧಿ (ಮೂರು ಸ್ಥಾನ ಮೇಲೇರಿ 70ನೇ ಸ್ಥಾನ). ಉತ್ತಮ ಸಾಧನೆ ಮಾಡಿದ್ದಾರೆ.