ಮಹಾರಾಜ T20 ಟ್ರೋಫಿ: ಸಮಿತ್ ದ್ರಾವಿಡ್‌ ಭಾರಿ ಸಿಕ್ಸರ್‌ ವಿಡಿಯೋ ವೈರಲ್

Update: 2024-08-17 10:53 GMT

ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿ ಪಂದ್ಯದಲ್ಲಿ ಬ್ಯಾಟಿಂಗ್ ದಂತಕಥೆ ಹಾಗೂ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್, ಭರ್ಜರಿ ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.

ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಬಲಗೈ ಬ್ಯಾಟರ್ ಸಮಿತ್, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಏಳು ಎಸೆತಗಳಲ್ಲಿ ಕೇವಲ ಏಳು ರನ್ ಗಳಿಸಿದರು. ದೊಡ್ಡ ಸಿಕ್ಸರ್‌ ಹೊಡೆದು, ಸುದ್ದಿಯಾದರು. 

ಪಂದ್ಯಾವಳಿಯ ಅಧಿಕೃತ ಪ್ರಸಾರಕ, ಸ್ಟಾರ್ ಸ್ಪೋರ್ಟ್ಸ್, ಸಮಿತ್(18) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್ ಬಾರಿಸುವ ವಿಡಿಯೋ ಎಕ್ಸ್‌ ನಲ್ಲಿ ಹಂಚಿಕೊಂಡಿದೆ. ಕ್ಲಿಪ್ ವೀಕ್ಷಿಸಿದ ಅಭಿಮಾನಿಗಳು, ಸಮಿತ್ ಅವರನ್ನು ಅವರ ತಂದೆ ರಾಹುಲ್ ಅವರೊಂದಿಗೆ ಹೋಲಿಸಿದರು. ತಂಡದ ಪರ 4ನೇ ಕ್ರಮಾಂಕದಲ್ಲಿ ಆಟವಾಡಿದ ಸಮಿತ್ ಗೆ ನೆಟಿಜನ್‌ ಸಮೂಹ ಮೆಚ್ಚುಗೆಯ ಮಹಾಪೂರ ಹರಿಸಿದೆ. 

ಮಳೆಯಿಂದ ತಂಡಕ್ಕೆ ತಲಾ 18 ಓವರ್‌ಗೆ ಕಡಿಮೆಯಾದ ಸ್ಪರ್ಧೆಯಲ್ಲಿ ಬ್ಲಾಸ್ಟರ್ಸ್, ವಾರಿಯರ್ಸ್‌ನ್ನು ಐದು ಎಸೆತ ಬಾಕಿ ಇರುವಂತೆಯೇ ಐದು ವಿಕೆಟ್‌ಗಳಿಂದ ಸೋಲಿಸಿತು. ಮಹಾರಾಜ ಟಿ20 ಟ್ರೋಫಿಯಲ್ಲಿ ಇದುವರೆಗೆ ಎರಡು ಪಂದ್ಯಗಳಲ್ಲಿ ಸಮಿತ್ ತಲಾ ಏಳು ರನ್ ಗಳಿಸಿದ್ದಾರೆ. 

Tags:    

Similar News