R Ashwin: ಆರ್​ ಅಶ್ವಿನ್ ಕ್ರಿಕೆಟ್ ಸಾಧನೆಗಳು, ದಾಖಲೆಗಳ ವಿವರ ಇಲ್ಲಿದೆ

R Ashwin: ಭಾರತ ಕ್ರಿಕೆಟ್​ ತಂಡ ಕಂಡ ಶ್ರೇಷ್ಠ ಬೌಲರ್​ ಹಾಗೂ ದಾಖಲೆಗಳ ಸರದಾರ ಆರ್. ಅಶ್ವಿನ್​ ಬುಧವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾಧನೆಗಳ ಮೆಲುಕು ಇಲ್ಲಿದೆ;

Update: 2024-12-18 08:09 GMT
ಸಾಧಕ ಬೌಲರ್ ಆರ್ ಅಶ್ವಿನ್​.

ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ (ಡಿಸೆಂಬರ್ 18) ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಅವರು ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಪರ ಕಾಣಿಸಿಕೊಳ್ಳುವುದನ್ನು ಮುಂದುವರಿಸಲಿದ್ದಾರೆ.


ಬ್ರಿಸ್ಬೇನ್​​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಮುಗಿದ ನಂತರ, 38 ವರ್ಷದ ಅಶ್ವಿನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ಗೆ ವಿದಾಯ ಹೇಳುವ ನಿರ್ಧಾರ ಘೋಷಿಸಿದರು. ಭಾರತೀಯ ಕ್ರಿಕೆಟಿಗನಾಗಿ ಡಿಸೆಂಬರ್ 18 ನನ್ನ ಕೊನೆಯ ದಿನ ಎಂದು ಅವರು ಹೇಳಿದರು. ಆದಾಗ್ಯೂ, ಅವರು ಬ್ರಿಸ್ಬೇನ್ ಟೆಸ್ಟ್​​ನ ಭಾಗವಾಗಿರಲಿಲ್ಲ, ಮತ್ತು ಅಧಿಕೃತವಾಗಿ ಅವರ ಕೊನೆಯ ಆಟದ ದಿನವೆಂದರೆ ಡಿಸೆಂಬರ್ 8ರಂದು ಅಡಿಲೇಡ್​ನಲ್ಲಿ ಪಿಂಕ್-ಬಾಲ್ (ಹಗಲು / ರಾತ್ರಿ) ಟೆಸ್ಟ್ ಆಡಿರುವುದು. .

ಅಶ್ವಿನ್ ಅವರ ಭಾರತ ವೃತ್ತಿಜೀವನ, ಅವರ ದಾಖಲೆಗಳು ಇಲ್ಲಿವೆ

ಟೆಸ್ಟ್: 106 ಪಂದ್ಯಗಳು ; ವಿಕೆಟ್: 537; ಶತಕ: 6

ಟೆಸ್ಟ್ ಕ್ರಿಕೆಟ್​​ನಲ್ಲಿ 37 ಬಾರಿ 5 ವಿಕೆಟ್ ಸಾಧನೆ

ಟೆಸ್ಟ್ ಕ್ರಿಕೆಟ್​ನಲ್ಲಿ 8 ಬಾರಿ 10 ವಿಕೆಟ್ ಸಾಧನೆ

ಟೆಸ್ಟ್ ಕ್ರಿಕೆಟ್​ನಲ್ಲಿ 25 ಸಲ 4 ವಿಕೆಟ್ ಸಾಧನೆ

ಅನಿಲ್ ಕುಂಬ್ಳೆ (619) ನಂತರ ಅಶ್ವಿನ್ ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.

ಟೆಸ್ಟ್ ಕ್ರಿಕೆಟ್​​ನಲ್ಲಿ 25.75ರ ಸರಾಸರಿಯಲ್ಲಿ 3,503 ರನ್ ಗಳಿಸಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ 2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಅಶ್ವಿನ್​.

ಅಶ್ವಿನ್​ ಟೆಸ್ಟ್ ಪಂದ್ಯಗಳಲ್ಲಿ ಜಂಟಿಯಾಗಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು (11) ಗೆದ್ದಿದ್ದಾರೆ. ಅವರು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಈ ದಾಖಲೆ ಹಂಚಿಕೊಂಡಿದ್ದಾರೆ

ಅಶ್ವಿನ್ ಹೆಚ್ಚು ಟೆಸ್ಟ್ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ

ಮುರಳೀಧರನ್ (67) ನಂತರ ಅಶ್ವಿನ್ ಟೆಸ್ಟ್​​ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ (37) ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ.

ಅಶ್ವಿನ್ ವಿಶ್ವದ 11 ಟೆಸ್ಟ್ ಆಲ್ರೌಂಡರ್​ಗಳಲ್ಲಿ ಒಬ್ಬರಾಗಿದ್ದು, 3,000 ಕ್ಕೂ ಹೆಚ್ಚು ರನ್ ಮತ್ತು 300 ಕ್ಕೂ ಹೆಚ್ಚು ವಿಕೆಟ್​​ ಉರುಳಿಸಿದ್ದಾರೆ.

ಏಕದಿನ: 116 ಪಂದ್ಯ., 156 ವಿಕೆಟ್​; 707 ರನ್​

ಟಿ20ಐ: 65 ಪಂದ್ಯ;: 72 ವಿಕೆಟ್​; 184 ರನ್​

ಪದಾರ್ಪಣೆ ಮತ್ತು ಕೊನೇ ಪಂದ್ಯ

ಚೊಚ್ಚಲ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ದೆಹಲಿ, ನವೆಂಬರ್ 6-9, 2011

ಕೊನೆಯ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್, ಡಿಸೆಂಬರ್ 6-8, 2024

ಚೊಚ್ಚಲ ಏಕದಿನ ಪಂದ್ಯ: ಶ್ರೀಲಂಕಾ ವಿರುದ್ಧ, ಹರಾರೆ, ಜೂನ್ 5, 2010

ಕೊನೆಯ ಏಕದಿನ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಚೆನ್ನೈ, ಅಕ್ಟೋಬರ್ 8, 2023

ಚೊಚ್ಚಲ ಟಿ20: ಜಿಂಬಾಬ್ವೆ ವಿರುದ್ಧ ಹರಾರೆ, ಜೂನ್ 12, 2010

ಕೊನೆಯ ಟಿ20: ಇಂಗ್ಲೆಂಡ್ ವಿರುದ್ಧ ಅಡಿಲೇಡ್, ನವೆಂಬರ್ 10, 2022

Tags:    

Similar News