Nitish Reddy: ಶತಕ ವೀರ ನಿತೀಶ್‌ಗೆ ಆಂಧ್ರ ಕ್ರಿಕೆಟ್‌ ಸಂಸ್ಥೆಯಿಂದ ಭರ್ಜರಿ ಬಹುಮಾನ

Nitish Reddy: ರೆಡ್ಡಿ ಅವರ ಗಮನಾರ್ಹ ಇನ್ನಿಂಗ್ಸ್‌ ಅನ್ನು ಕ್ರಿಕೆಟ್ ದಂತಕಥೆಗಳು ಶ್ಲಾಘಿಸಿದ್ದಾರೆ. ಸುನಿಲ್ ಗವಾಸ್ಕರ್ ಇದನ್ನು ಭಾರತದ ಟೆಸ್ಟ್ ಇತಿಹಾಸದಲ್ಲಿ ಶ್ರೇಷ್ಠ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

Update: 2024-12-29 07:18 GMT
ನಿತೀಶ್‌ ಕುಮಾರ್‌ ರೆಡ್ಡಿ

ಮೆಲ್ಬರ್ನ್‌ನಲ್ಲಿ ನಡೆದ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನನಲ್ಲಿ ನಿರ್ಣಾಯಕ ಸಮಯದಲ್ಲಿ ಶತಕ ಬಾರಿಸಿದ್ದ ಯುವ ಆಟಗಾರ ನಿತೀಶ್ ರೆಡ್ಡಿ ಅವರಿಗೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಶನಿವಾರ 25 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು 21 ವರ್ಷದ ರೆಡ್ಡಿ ಅಜೇಯ 105 ರನ್ ಗಳಿಸುವ ಮೂಲಕ ಭಾರತವನ್ನು 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಗೆ ಮುನ್ನಡೆಸಿದ್ದರು.


"ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ಇದು ಅದೃಷ್ಟದ ದಿನ ಮತ್ತು ಸಂತೋಷದ ಕ್ಷಣ. ಆಂಧ್ರದ ಹುಡುಗನೊಬ್ಬ ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಆಯ್ಕೆಯಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ನಿತೀಶ್ ಕುಮಾರ್ ರೆಡ್ಡಿ ಅವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತಿದೆ ಎಂದು ಎಸಿಎ ಅಧ್ಯಕ್ಷ ಕೇಸಿನೇನಿ ಶಿವನಾಥ್ ತಿಳಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೆಡ್ಡಿ, ನಾಲ್ಕನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ತಮ್ಮ ಧೈರ್ಯ ತೋರಿಸಿದರು, ವಾಷಿಂಗ್ಟನ್ ಸುಂದರ್ (162 ಎಸೆತಗಳಲ್ಲಿ 50 ರನ್) ಅವರೊಂದಿಗೆ ನಿರ್ಣಾಯಕ 127 ರನ್‌ಗಳ ಜೊತೆಯಾಟ ಹಂಚಿಕೊಂಡರು.

ರೆಡ್ಡಿ ಅವರ ಗಮನಾರ್ಹ ಇನ್ನಿಂಗ್ಸ್‌ ಅನ್ನು ಕ್ರಿಕೆಟ್ ದಂತಕಥೆಗಳು ಶ್ಲಾಘಿಸಿದ್ದಾರೆ. ಸುನಿಲ್ ಗವಾಸ್ಕರ್ ಇದನ್ನು ಭಾರತದ ಟೆಸ್ಟ್ ಇತಿಹಾಸದಲ್ಲಿ ಶ್ರೇಷ್ಠ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

Tags:    

Similar News