ಲಂಕಾ ಟಿ10 ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್: ಭಾರತದ ಮಾಲೀಕನ ಬಂಧನ
ಲಂಕಾ ಟಿ 10 ಸೂಪರ್ ಲೀಗ್‌ನಲ್ಲಿ 'ಗಾಲೆ ಮಾರ್ವೆಲ್ಸ್' ತಂಡದ ಮಾಲೀಕತ್ವನ್ನು ಠಾಕೂರ್ ಹೊಂದಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
ಲಂಕಾ ಟಿ10 ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿರುವ ಆರೋಪದ ಮೇಲೆ ಅದರಲ್ಲಿ ಫ್ರಾಂಚೈಸಿ ಹೊಂದಿರುವ ಭಾರತೀಯ ಮೂಲದ ಮಾಲೀಕನನ್ನು ಶ್ರೀಲಂಕಾದ ಕ್ರೀಡಾ ಪೊಲೀಸರು ಬಂಧಿಸಿದ್ದಾರೆ. ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದ ಕೇಂದ್ರ ಜಿಲ್ಲೆಯಲ್ಲಿ ನಡೆಯುತ್ತಿರುವ ಲಂಕಾ ಟಿ 10 ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಪ್ರೇಮ್ ಠಾಕೂರ್ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ.
"ಲಂಕಾ ಟಿ 10 ಸೂಪರ್ ಲೀಗ್‌ನಲ್ಲಿ 'ಗಾಲೆ ಮಾರ್ವೆಲ್ಸ್' ತಂಡದ ಮಾಲೀಕತ್ವನ್ನು ಠಾಕೂರ್ ಹೊಂದಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ. ಪಂದ್ಯಾವಳಿಯ ಆರು ತಂಡಗಳ ಪೈಕಿ ಗಾಲೆ ಮಾರ್ವೆಲ್ಸ್ ಒಂದು
ಪಂದ್ಯವನ್ನು ಫಿಕ್ಸ್ ಮಾಡುವ ಅವರ ಮನವಿಯನ್ನು ತಿರಸ್ಕರಿಸಿದ ವೆಸ್ಟ್ ಇಂಡೀಸ್‌ನ ವಿದೇಶಿ ಆಟಗಾರರೊಬ್ಬರು ನೀಡಿದ ದೂರಿನ ನಂತರ ಗುರುವಾರ ಅವರನ್ನು ಬಂಧಿಸಲಾಗಿದೆ. ಉದ್ಘಾಟನಾ ಲಂಕಾ ಟಿ 10 ಪಂದ್ಯಾವಳಿಯ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಈ ಘಟನೆಯ ಬಗ್ಗೆ ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ. ಇದು ಲಂಕಾ ಟಿ 10 ಸೂಪರ್ ಲೀಗ್ನ ಉದ್ಘಾಟನಾ ಆವೃತ್ತಿಯಾಗಿದೆ.