3 ಸೂಪರ್ ಓವರ್‌: ಮಹಾರಾಜ ಟ್ರೋಫಿಯಲ್ಲಿ ಐತಿಹಾಸಿಕ ದಾಖಲೆ

Update: 2024-08-24 10:48 GMT
ಮನ್ವಂತ್ ಕುಮಾರ್ ಅವರು ಹುಬ್ಬಳ್ಳಿ ಟೈಗರ್ಸ್ ಪರ ಅದ್ವಿತೀಯ ಪ್ರದರ್ಶನ ನೀಡಿ, 28 ರನ್ ಹಾಗೂ 33ಕ್ಕೆ 4 ವಿಕೆಟ್‌ ಗಳಿಸಿದರು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಟಿಎ ಟಿ 20 ಪಂದ್ಯದಲ್ಲಿ ಶುಕ್ರವಾರ (ಆಗಸ್ಟ್ 23) ಮೂರು ಸೂಪರ್‌ ಓವರ್‌ ಮಾಡುವ ಮೂಲಕ ಚರಿತ್ರೆ ನಿರ್ಮಾಣವಾಯಿತು.

ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿತು. ಮನ್ವಂತ್ ಕುಮಾರ್ ಅವರು ಅಸಾಧಾರಣ ಪ್ರದರ್ಶನ ನೀಡಿ, 28 ರನ್ ಹಾಗೂ 33ಕ್ಕೆ 4 ವಿಕೆಟ್‌ ಪಡೆದರು. ಮೂರನೇ ಸೂಪರ್ ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಿಸಿದರು.

ಎರಡೂ ತಂಡಗಳು ಇನ್ನಿಂಗ್ಸ್ ನ್ನು 164/10 ಕ್ಕೆ ಮುಗಿಸಿದವು. ಮೊದಲ ಎರಡು ಸೂಪರ್ ಓವರ್‌ಗಳ ನಂತರ ತೀರ್ಮಾನ ಆಗಲಿಲ್ಲ. ಮನ್ವಂತ್ ಕುಮಾರ್ ಮೂರನೇ ಸೂಪರ್ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಹುಬ್ಬಳ್ಳಿಯ ಗೆಲುವನ್ನು ಖಚಿತಪ ಡಿಸಿದರು.

ದಿನದ ಆರಂಭದಲ್ಲಿ ಬೆಂಗಳೂರಿನ ಲವಿಶ್ ಕೌಶಲ್ ಈ ಋತುವಿನ ಮೊದಲ ಐದು ವಿಕೆಟ್ ಕಬಳಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್ ಅನ್ನು 164 ರನ್‌ ಗೆ ನಿರ್ಬಂಧಿಸಿದರು. ಮಯಾಂಕ್ ಅಗರ್ವಾಲ್ (54) ಅವರ ಅರ್ಧ ಶತಕ ಗಳಿಸಿದರು.

165 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್, ಮೊದಲ ಓವರ್‌ನಲ್ಲಿ ವಿದ್ವತ್ ಕಾವೇರಪ್ಪ ಎಸೆತದಲ್ಲಿ ಚೇತನ್ ಎಲ್‌ಆರ್ ಅವರನ್ನು ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಬಂದ ನಿರಂಜನ್ ನಾಯ್ಕ್ ಒಂದು ಸಿಕ್ಸರ್ ಸೇರಿದಂತೆ ನಾಲ್ಕು ಬೌಂಡರಿ ಸಿಡಿಸಿದರು. ಆದರೆ ಕಾವೇರಪ್ಪ ಐದನೇ ಓವರ್‌ನಲ್ಲಿ ನಾಯಕ್ ಅವರ ಆಟವನ್ನು ಅಂತ್ಯಗೊಳಿಸಿದರು.

ಮಯಾಂಕ್ ಅಗರ್ವಾಲ್ ಪವರ್‌ಪ್ಲೇನಲ್ಲಿ ಐದು ಬೌಂಡರಿ ಹೊಡೆದರು. ಆದರೆ, ಆರನೇ ಓವರ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 48/3 ರನ್‌ ಮಾಡಿ ತಿಣುಕುತ್ತಿತ್ತು. ಮನ್ವಂತ್ ಕುಮಾರ್ 6ನೇ ಓವರಿನಲ್ಲು ಶುಭಾಂಗ್ ಹೆಗ್ಡೆ ಅವರನ್ನು ಸೊನ್ನೆಗೆ ಬಲಿ ಪಡೆದರು.

ಮಯಾಂಕ್ ಅಗರ್ವಾಲ್ ಮತ್ತು ರಕ್ಷಿತ್ ಎಸ್ (11) 29 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿದರು. ರನ್‌ ದರ ಹೆಚ್ಚಿಸಲು ಹೋದ ರಕ್ಷಿತ್ ಎಸ್, ಮನ್ವಂತ್ ಅವರಿಗೆ ಎರಡನೇ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ 29 ಎಸೆತಗಳಲ್ಲಿ ಎಂಟು ಬೌಂಡರಿ ಸೇರಿದಂತೆ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಮನ್ವಂತ್ ಕುಮಾರ್ ಅವರಿಗೆ ವಿಕೆಟ್‌ ಒಪ್ಪಿಸಿದರು. ಬೆಂಗಳೂರು ಬ್ಲಾಸ್ಟರ್ಸ್ 13.2 ಓವರ್‌ಗಳಲ್ಲಿ 5 ವಿಕೆಟ್‌ಗೆ 96 ರನ್‌ ಗಳಿಸಿ, ಸಂಕಷ್ಟದಲ್ಲಿ ಸಿಲುಕಿತ್ತು.

ಸೂರಜ್ ಅಹುಜಾ (26) ಮತ್ತು ಅನಿರುದ್ಧ ಜೋಶಿ (17), 27 ಚುರುಕಿನ ರನ್‌ಗಳ ಜೊತೆಯಾಟ ನೀಡಿದರು. 17ನೇ ಓವರ್‌ನಲ್ಲಿ ಅಹುಜಾ ರನೌಟ್ ಆದರು ಮತ್ತು ಜೋಶಿ ಅವರನ್ನು ಮನ್ವಂತ್ ಕುಮಾರ್ ಬೌಲ್ಡ್ ಮಾಡಿದರು. 18 ಎಸೆತಗಳಲ್ಲಿ 30 ರನ್‌ ಅಗತ್ಯವಿದ್ದಾಗ, ಎಂ. ಜಿ.ನವೀನ್ ಅವರು 11 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಸಿಕ್ಸರ್‌ ಗಳಿಸಿದರು. 19 ನೇ ಓವರ್‌ನಲ್ಲಿ ಕುಮಾರ್ ಅವರಿಗೆ ವಿಕೆಟ್‌ ಒಪ್ಪಿಸಿದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ಗೆ ಒಂದು ರನ್ ಅಗತ್ಯವಿತ್ತು. ಆದರೆ, ಕ್ರಾಂತಿಕುಮಾರ್ ರನೌಟ್‌ ಆಗಿದ್ದರಿಂದ, ಇನಿಂಗ್ಸ್ ಟೈ ಆಯಿತು.

ತಿಪ್ಪಾ ರೆಡ್ಡಿ (7), ಮೊಹಮ್ಮದ್‌ ತಾಹಾ ಮೂರನೇ ಓವರ್‌ನಲ್ಲಿ ಸಂತೋಕ್ ಸಿಂಗ್ ಎಸೆತದಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದರು. ಲವಿಶ್ ಕೌಶಲ್ ಐದನೇ ಓವರ್‌ನಲ್ಲಿ ತಾಹಾ ಅವರನ್ನು ಔಟ್‌ ಮಾಡಿದರು. ಹುಬ್ಬಳ್ಳಿ ಟೈಗರ್ಸ್ ಪವರ್‌ಪ್ಲೇಯನ್ನು 53/2 ರಲ್ಲಿ ಮುಗಿಸಿತು.

ಶುಭಾಂಗ್ ಹೆಗ್ಡೆ ತಮ್ಮ ಮೊದಲ ಓವರ್‌ನಲ್ಲಿ ಕೆ.ಎಲ್. ಶ್ರೀಜಿತ್ (9) ಮತ್ತು ಕಾರ್ತಿಕೇಯ ಕೆ.ಪಿ. (13) ಅವರ ವಿಕೆಟ್‌ ಲವಿಶ್ ಕೌಶಲ್ ಪಾಲಾಯಿತು. ಮನೀಷ್ ಪಾಂಡೆ (33) ಮತ್ತು ಅನೀಶ್ವರ್ ಗೌತಮ್ (30), 40 ಎಸೆತಗಳಲ್ಲಿ 57 ರನ್‌ ಸೇರಿಸಿದರು. ಆದರೆ, ಇಬ್ಬರೂ 16 ನೇ ಓವರ್‌ನಲ್ಲಿ ಔಟ್‌ ಆದರು. ಸ್ಕೋರ್ 131/6.

ಮನ್ವಂತ್ ಕುಮಾರ್ ‌15 ಎಸೆತಗಳಲ್ಲಿ 28 ರನ್ ಗಳಿಸಿದರು. ಕ್ರಾಂತಿ ಕುಮಾರ್ 17ನೇ ಓವರ್‌ನಲ್ಲಿ ಕೆಸಿ ಕಾರಿಯಪ್ಪ ಮತ್ತು ಆದರ್ಶ್ ಪ್ರಜ್ವಲ್ ಅವರನ್ನು ಪೆವಿಲಿಯನ್ನಿಗೆ ಕಳಿಸಿದರು. ಕುಮಾರ್‌ ಅವರ ವಿಕೆಟ್‌ ಉರುಳಿಸಿದ ಲವಿಶ್ ಕೌಶಲ್, ಐದನೇ ವಿಕೆಟ್ ಪಡೆದರು. ಹುಬ್ಬಳ್ಳಿ ಟೈಗರ್ಸ್ 164/10 ಗಳಿಸಿತು.

ಸಂಕ್ಷಿಪ್ತ ಸ್ಕೋರ್:

ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 164/10 (ಮನೀಷ್ ಪಾಂಡೆ 22 ಎಸೆತಗಳಲ್ಲಿ 33, ಅನೀಶ್ವರ್ ಗೌತಮ್ 24 ಎಸೆತಗಳಲ್ಲಿ 30, ಮನ್ವಂತ್ ಕುಮಾರ್ 15 ಎಸೆತಗಳಲ್ಲಿ 27, ಲವೀಶ್ ಕೌಶಲ್ 5/17, ಕ್ರಾಂತಿ ಕುಮಾರ್ 2/33)

ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 164/10 (ಮಯಾಂಕ್ ಅಗರವಾಲ್ 34 ಎಸೆತಗಳಲ್ಲಿ 54, ಸೂರಜ್ ಅಹುಜಾ 20 ಎಸೆತಗಳಲ್ಲಿ 26, ನವೀನ್ ಎಂಜಿ 11 ಎಸೆತಗಳಲ್ಲಿ 23, ಮನ್ವಂತ್ ಕುಮಾರ್ 4/32, ವಿಧ್ವತ್ ಕಾವೇರಪ್ಪ 2/35)

ಹುಬ್ಬಳ್ಳಿ ಟೈಗರ್ಸ್ 3ನೇ ಸೂಪರ್ ಓವರಿನಲ್ಲಿ ಜಯ ಗಳಿಸಿತು.

ಸೂಪರ್ ಓವರ್ (3)- ಬೆಂಗಳೂರು ಬ್ಲಾಸ್ಟರ್ಸ್ 1 ಓವರ್‌ನಲ್ಲಿ 12/1 (ಶುಭಾಂಗ್ ಹೆಗ್ಡೆ 3 ಎಸೆತಗಳಲ್ಲಿ 7* ರನ್, ಸೂರಜ್ ಅಹುಜಾ 3 ಎಸೆತಗಳಲ್ಲಿ 4* ರನ್, ಮನ್ವಂತ್ ಕುಮಾರ್ 1/11)

ಹುಬ್ಬಳ್ಳಿ ಟೈಗರ್ಸ್ 1 ಓವರ್‌- 13/0 (ಮನ್ವಂತ್ ಕುಮಾರ್ 4 ಎಸೆತಗಳಲ್ಲಿ 11* ರನ್, ಮನೀಶ್ ಪಾಂಡೆ 3 ಎಸೆತಗಳಲ್ಲಿ 1* ರನ್)

ಸೂಪರ್ ಓವರ್ (2)- ಹುಬ್ಬಳ್ಳಿ ಟೈಗರ್ಸ್ 1 ಓವರ್‌ನಲ್ಲಿ 8/0 (ಮನೀಷ್ ಪಾಂಡೆ 4 ಎಸೆತಗಳಲ್ಲಿ 7* ರನ್, ಮನ್ವಂತ್ ಕುಮಾರ್ 2 ಎಸೆತಗಳಲ್ಲಿ 1* ರನ್)

ಬೆಂಗಳೂರು ಬ್ಲಾಸ್ಟರ್ 8/1 (ಚೇತನ್ ಎಲ್ ಆರ್ 5* ರನ್ 3 ಎಸೆತ, ಸೂರಜ್ ಅಹುಜಾ 2* ರನ್ 2 ಬಾಲ್)

ಸೂಪರ್ ಓವರ್ (1)- ಬೆಂಗಳೂರು ಬ್ಲಾಸ್ಟರ್ಸ್ 10/1 (ಅನಿರುದ್ಧ ಜೋಶಿ 4 ಎಸೆತಗಳಲ್ಲಿ 8* ರನ್, ಚೇತನ್ ಎಲ್ಆರ್ 1* ರನ್ 2 ಎಸೆತ)

ಹುಬ್ಬಳ್ಳಿ ಟೈಗರ್ಸ್ 10/0 (ಮನ್ವಂತ್ ಕುಮಾರ್ 2* ರನ್: 2 ಎಸೆತ, ಮನೀಶ್ 8* ರನ್: 4 ಎಸೆತ)

Tags:    

Similar News