Jasprit Bumrah : ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಔಟ್; ಹರ್ಷಿತ್ಗೆ ಬುಲಾವ್
Jasprit Bumrah : ಟೂರ್ನಿ ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿದೆ. ಬದಲಾದ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯೂ ಸ್ಥಾನ ಪಡೆದಿದ್ದಾರೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬದಲಿಗೆ ವರುಣ್ ಆಯ್ಕೆಯಾಗಿದ್ದಾರೆ.;
ಮುಂಬೈ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಬೆನ್ನು ನೋವಿನ ಕಾರಣದಿಂದ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ ಎಂದು ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೃಢಪಡಿಸಿದೆ.
ಬುಮ್ರಾ ಅವರ ಅಲಭ್ಯತೆಯ ಕಾರಣ, ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿಯು ಟೂರ್ನಮೆಂಟ್‌ಗಾಗಿ ಹರ್ಷಿತ್ ರಾಣಗೆ ಬುಲಾವ್ ಕೊಟ್ಟಿದೆ. ಟೂರ್ನಿ ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿದೆ. ಬದಲಾದ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯೂ ಸ್ಥಾನ ಪಡೆದಿದ್ದಾರೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬದಲಿಗೆ ವರುಣ್ ಆಯ್ಕೆಯಾಗಿದ್ದಾರೆ.
ಬುಮ್ರಾ ಅಲಭ್ಯತೆ ಭಾರತ ತಂಡಕ್ಕೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ಹಿನ್ನಡೆಯಾಗಿದೆ. ಭಾರತ ಈ ಟೂರ್ನಮೆಂಟ್ ಅನ್ನು ಎರಡು ಬಾರಿ (2002 ಮತ್ತು 2013ರಲ್ಲಿ) ಗೆದ್ದಿದೆ. ಬುಮ್ರಾ ಪ್ರಸ್ತುತ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದರು. 31 ವರ್ಷದ ಬುಮ್ರಾ ಭಾರತದ 2024ರ ಟಿ20 ವಿಶ್ವಕಪ್ ಟ್ರೋಫಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಅವರು 15 ವಿಕೆಟ್ ಪಡೆದು 8.26 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು.
ಕೆಲಸದ ಒತ್ತಡ
ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅವರು ಭಾರತದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಹೀಗಿದ್ದರೂ ಭಾರತ 3-1ರಲ್ಲಿ ಸೋತಿತ್ತು. ಉಳಿದ ಬೌಲರ್ಗಳ ಪ್ರದರ್ಶನ ಪೂರಕವಾಗಿರದ ಕಾರಣ ಬುಮ್ರಾ ಮೇಲಿನ ಒತ್ತಡ ಹೆಚ್ಚಾಗಿತ್ತು. ಆದಾಗ್ಯೂ ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 32 ವಿಕೆಟ್ ಉರುಳಿಸಿದ್ದರು.
ಭಾರತ ತಂಡ ಬುಮ್ರಾ ಅವರಿಗೆ ಸತತ ಓವರ್ಗಳನ್ನು ನೀಡುತ್ತಿತ್ತು. ವನಾಲ್ಕನೇ ಟೆಸ್ಟ್ ನಡೆದ ಮೆಲ್ಬೋರ್ನ್‌ನಲ್ಲಿ ಅವರು ರೋಹಿತ್ ಶರ್ಮಾಗೆ ಹಳೆಯ ಚೆಂಡು ನೀಡದಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು. ಐದನೇ ಟೆಸ್ಟ್‌ಗೆ , ರೋಹಿತ್ ಗೈರಿನಲ್ಲಿ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ವಸಿಡ್ನಿಯಲ್ಲಿ ನಡೆದ ಈ ಹಣಾಹಣಿಯಲ್ಲಿ ಅವರು ಗಾಯಗೊಂಡರು. ವಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಬೌಲಿಂಗ್ ಮಾಡಲಾಗಲಿಲ್ಲ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್ (ಉಪನಾಯಕ) ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣ, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.