IPL 2025| ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್

ರಿಕಿ ಪಾಂಟಿಂಗ್ ಅವರು ಈಮೊದಲು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನ ತರಬೇತುದಾರ ಆಗಿದ್ದರು

Update: 2024-09-18 11:27 GMT

ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಪಂಜಾಬ್ ಕಿಂಗ್ಸ್ (PBKS)ನ ಮುಖ್ಯ ಕೋಚ್ ಆಗಿ ಬುಧವಾರ (ಸೆಪ್ಟೆಂಬರ್ 18) ನೇಮಕಗೊಂಡಿದ್ದಾರೆ. 

ಪಾಂಟಿಂಗ್ ಅವರು ಐಪಿಎಲ್ 2025 ಮತ್ತು ಆನಂತರ ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅವರ ಅಧಿಕಾರಾವಧಿ ನಾಲ್ಕು ವರ್ಷ. 

ʻಮುಖ್ಯ ಕೋಚ್ ಆಗುವ ಅವಕಾಶ ಒದಗಿಸಿದ್ದಕ್ಕೆ ಪಂಜಾಬ್ ಕಿಂಗ್ಸ್‌ಗೆ ಕೃತಜ್ಞನಾಗಿದ್ದೇನೆ. ಹೊಸ ಸವಾಲು ತೆಗೆದುಕೊಳ್ಳಲು ಉತ್ಸುಕನಾಗಿದ್ದೇನೆ. ಮಾಲೀಕರು ಮತ್ತು ಆಡಳಿತದೊಂದಿಗೆ ಮಾತುಕತೆ ನಡೆಸಿದ್ದೇನೆ. ತಂಡದ ಅಭಿಮಾನಿಗಳು ವಿಭಿನ್ನ ಪಂಜಾಬ್ ಕಿಂಗ್ಸ್ ತಂಡವನ್ನು ನೋಡಲಿದ್ದಾರೆ ಎಂದು ಭರವಸೆ ನೀಡುತ್ತೇನೆ,ʼ ಎಂದು ಹೇಳಿದರು. 

ಪಾಂಟಿಂಗ್ ಅವರು ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ದೆಹಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ತರಬೇತುದಾರರಾಗಿದ್ದರು. 2024 ರ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಋತುವಿನಲ್ಲಿ ವಾಷಿಂಗ್ಟನ್ ಫ್ರೀಡಂ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು. ಪಾಂಟಿಂಗ್ ಅವರು 2021 ರಿಂದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಹೋಬಾರ್ಟ್ ಹರಿಕೇನ್ಸ್‌ನ ಕಾರ್ಯತಂತ್ರದ ಮುಖ್ಯಸ್ಥರಾಗಿದ್ದಾರೆ. 

ನೇಮಕ ಕುರಿತು ಮಾತನಾಡಿದ ಪಂಜಾಬ್ ಕಿಂಗ್ಸ್‌‌ ಸಿಇಒ ಸತೀಶ್ ಮೆನನ್,ʻ ಪಾಂಟಿಂಗ್ ಮುಂದಿನ 4 ಋತುಗಳಲ್ಲಿ ತಂಡಕ್ಕೆ ಮಾರ್ಗದರ್ಶನ ಮತ್ತು ರೂಪಿಸಲು ನೆರವಾಗಲಿದ್ದಾರೆ. ತಂಡ ಮೈದಾನದಲ್ಲಿ ಯಶಸ್ಸನ್ನು ಗಳಿಸಲು ಅವರ ಅನುಭವ ನಮಗೆ ನೆರವಾಗಲಿದೆ,ʼ ಎಂದರು. ಪಾಂಟಿಂಗ್ ನೇತೃತ್ವದಲ್ಲಿ, ಡೆಲ್ಲಿ ತಂಡವು 2020 ರಲ್ಲಿ ಫೈನಲ್ ತಲುಪಿತ್ತು. 

ಈವರೆಗೆ ಗೆದ್ದಿಲ್ಲ: 2008 ರಲ್ಲಿ ಐಪಿಎಲ್ ಪ್ರಾರಂಭವಾದ ಬಳಿಕ ಪಂಜಾಬ್ ಕಿಂಗ್‌ ಒಮ್ಮೆಯೂ ಗೆದ್ದಿಲ್ಲ.ವಿಶ್ವಕಪ್ ವಿಜೇತ ನಾಯಕ ಯಶಸ್ಸು ತಂದುಕೊಡುತ್ತಾರೆ ಎಂದು ನಾಲ್ವರು ಸಹ ಮಾಲೀಕರು ಭಾವಿಸಿದ್ದಾರೆ. ಪಂಜಾಬ್‌ 2014 ರಲ್ಲಿ ಫೈನಲ್‌ ಪ್ರವೇಶಿಸಿತ್ತು. ಆಗಾಗ ಆಟಗಾರರನ್ನು ತೆಗೆದುಹಾಕುವುದು ಹಾಗೂ ನಾಯಕನ ಬದಲಾವಣೆ ಮಾಡುವು ದರಿಂದ ಟೀಕಿಸಲ್ಪಟ್ಟಿದೆ. ಕಳೆದ ಏಳು ಆವೃತ್ತಿಗಳಲ್ಲಿ ಮೊದಲ ಐದು ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ ಮತ್ತು ಈ ವರ್ಷದ ಆರಂಭದಲ್ಲಿ 10 ತಂಡಗಳಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ. 

ಬೇಲಿಸ್ ಕಳೆದ ಎರಡು ಋತುಗಳಲ್ಲಿ ತಂಡದ ಜವಾಬ್ದಾರಿ ಹೊತ್ತಿದ್ದು, ಈಗ ನಿವೃತ್ತರಾಗಿರುವ ಶಿಖರ್ ಧವನ್ ತಂಡದ ನಾಯಕರಾಗಿದ್ದರು. ಸಂಜಯ್ ಬಂಗಾರ್ ಅವರು ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥ, ಚಾರ್ಲ್ಸ್ ಲ್ಯಾಂಗ್ವೆಲ್ಡ್ ವೇಗದ ಬೌಲಿಂಗ್ ಕೋಚ್ ಮತ್ತು ಸುನಿಲ್ ಜೋಶಿ ಸ್ಪಿನ್‌ ವಿಭಾಗ ನೋಡಿಕೊಂಡರು. ಬೇಲಿಸ್‌ಗೆ ಮೊದಲು ಅನಿಲ್ ಕುಂಬ್ಳೆ ಪಂಜಾಬ್‌ ಕಿಂಗ್ಸ್‌ ತರಬೇತಿದಾರರಾಗಿದ್ದರು. ಆದರೆ, ಅವರು ಕೂಡ ಯಶಸ್ಸು ಗಳಿಸಲಿಲ್ಲ.

ತಂಡದಲ್ಲಿ ಅರ್ಷದೀಪ್ ಸಿಂಗ್, ಜಿತೇಶ್ ಶರ್ಮಾ, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್ ಮತ್ತು ಜಾನಿ ಬೈರ್‌ಸ್ಟೋವ್ ಮತ್ತಿತರ ಪ್ರಬಲ ಆಟಗಾರರಿದ್ದಾರೆ. ಆದರೆ, ಫಲಿತಾಂಶ ಬಂದಿಲ್ಲ. ಕಳೆದ ಋತುವಿನಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಕಿಂಗ್ಸ್‌ ಪರ ಅತ್ಯುತ್ತಮ ಆಟ ಆಡಿದ್ದರು.

Tags:    

Similar News