IPL 2025: ಮಾರ್ಚ್ 14ರಿಂದ ಮೇ 25ರವರೆಗೆ ಐಪಿಎಲ್ ಟೂರ್ನಿ
2027ರ ಆವೃತ್ತಿಯು ಮಾರ್ಚ್ 14ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ 30ರಂದು ನಡೆಯಲಿದೆ. ಎಲ್ಲಾ ಮೂರು ಫೈನಲ್ ಪಂದ್ಯಗಳು ಭಾನುವಾರ ನಡೆಯಲಿವೆ.
ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 14ರಿಂದ ಮೇ 25ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಎಲ್ಲ ಐಪಿಎಲ್ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆ.
ಭಾನುವಾರದಿಂದ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಎರಡು ದಿನಗಳ ಮೆಗಾ ಆಟಗಾರರ ಹರಾಜು ನಡೆಯಲಿದೆ. ಅದರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತೀಯ ಮೂಲದ ಅಮೆರಿಕನ್ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ ಮತ್ತು ಅನ್‌ಕ್ಯಾಪ್ಡ್ ಮುಂಬೈ ವಿಕೆಟ್ ಕೀಪರ್-ಬ್ಯಾಟರ್ ಹಾರ್ದಿಕ್ ತಾಮೋರ್ ಅವರನ್ನು ಸೇರಿಸಲು ಬಿಸಿಸಿಐ ನಿರ್ಧರಿಸಿದೆ.
ಆಟಗಾರರ ಹರಾಜಿಗೆ ಯೋಜನೆ ಹಾಕಲು ಅನುಕೂಲವಾಗುವಂತೆ ಫ್ರಾಂಚೈಸಿಗಳಿಗೆ ಸಹಾಯ ಮಾಡಲು ಮುಂದಿನ ಮೂರು ಋತುಗಳ ಐಪಿಎಲ್ ಟೂರ್ನಿಯ ದಿನಾಂಕಗಳನ್ನು ಒಂದೇ ಬಾರಿಗೆ ತಿಳಿಸಲಾಗುವುದು ಎಂದು ಬಿಸಿಸಿಐ ಫ್ರಾಂಚೈಸಿಗಳೊಂದಿಗೆ ಮಾಡಿದ ಸಂವಹನದಲ್ಲಿ ತಿಳಿಸಿದೆ. 2026ರ ಆವೃತ್ತಿಯ ಟೂರ್ನಿ ಮಾರ್ಚ್ 15ರಿಂದ ಆರಂಭವಾಗಲಿದ್ದು, ಮೇ 31ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
2027ರ ಆವೃತ್ತಿಯು ಮಾರ್ಚ್ 14ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ 30ರಂದು ನಡೆಯಲಿದೆ. ಎಲ್ಲಾ ಮೂರು ಫೈನಲ್ ಪಂದ್ಯಗಳು ಭಾನುವಾರ ನಡೆಯಲಿವೆ.
ಐಪಿಎಲ್ 10.5 ವಾರಗಳ ಕಾಲ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಪಂದ್ಯಗಳ ಸಂಖ್ಯೆ ಹೆಚ್ಚಿಸಲು ಯೋಜಿಸಿದೆ ಮತ್ತು ನಿಗದಿಪಡಿಸಿದ ವಿಂಡೊ ನೋಡಿದರೆ ಲೀಗ್‌ನ ಪಂದ್ಯಗಳ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ .
ಆರ್ಚರ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊಣಕೈ ಗಾಯದಿಂದಾಗಿ 2023ರ ಆವೃತ್ತಿಯಲ್ಲೂ ಆಡಲು ಸಾಧ್ಯವಾಗಿರಲಿಲ್ಲ.
ಅಮೆರಿಕದ ವೇಗಿ ನೇತ್ರವಾಲ್ಕರ್ ಈ ವರ್ಷದ ಆರಂಭದಲ್ಲಿ ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್‌ನ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದರು. ಅವರ ತಂಡವು ಸೂಪರ್ 8ಕ್ಕೆ ಏರಲು ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಸೌರಭ್, ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದ ಭಾರತದ ಮಾಜಿ ಅಂಡರ್-19 ಆಟಗಾರ, ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಲು ಯುಎಸ್ಎಗೆ ವಲಸೆ ಹೋದವರು ಪ್ರಸ್ತುತ ಒರಾಕಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ಭಾಗವಾಗದ ಕಾರಣ ಭಾರತದಿಂದ ಅಮೆರಿಕದ ಮತ್ತೊಬ್ಬ ಆಟಗಾರ ಉನ್ಮುಕ್ತ್ ಚಾಂದ್ ಅವರ ವೆಚ್ಚದಲ್ಲಿ ಅವರನ್ನು ಹರಾಜು ಪಟ್ಟಿಯಿಂದ ಕೈಬಿಟ್ಟಿರುವುದು ಹುಬ್ಬೇರುವಂತೆ ಮಾಡಿತ್ತು. ಪಿಟಿಐ