IPL 2025: ನವೆಂಬರ್ 24, 25ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು

ಪಂಜಾಬ್‌ ಕಿಂಗ್ಸ್‌ ತಂಡದ ಕೈಯಲ್ಲಿ 110.5 ಕೋಟಿ ರೂಪಾಯಿಗಳು ಉಳಿದ್ದು, ಅತಿದೊಡ್ಡ ಮೊತ್ತದೊಂದಿಗೆ ಮೆಗಾ ಹರಾಜಿನಲ್ಲಿ ಪಾಲ್ಗೊಂಡು ಸ್ಟಾರ್‌ ಆಟಗಾರರಿಗೆ ಬಿಡ್‌ ಮಾಡುವ ನಿರೀಕ್ಷೆಯಿದೆ.

Update: 2024-11-04 13:42 GMT
ಸಾಂದರ್ಭಿಕ ಚಿತ್ರ

ಎಲ್ಲಾ 10 ಫ್ರಾಂಚೈಸಿಗಳು ಐಪಿಎಲ್ 2025ಗಾಗಿ ತಮ್ಮ ಆಟಗಾರರನ್ನು ಉಳಿಸಿಕೊಳ್ಳುವಿಕೆ ಪ್ರಕ್ರಿಯೆ ಮುಗಿಸಿ ಬಿಸಿಸಿಐಗೆ ಪಟ್ಟಿ ಸಲ್ಲಿಸಿದೆ. ಇದೀಗ ಐಪಿಎಲ್‌ ಪ್ ಗಮನವು ಮೆಗಾ ಆಟಗಾರರ ಹರಾಜಿನತ್ತ ತಿರುಗಿದೆ. ಮೂಲಗಳನ್ನು ಸುದ್ದಿ ಸಂಸ್ಥೆಗಳ ಪ್ರಕಾರ ಐಪಿಎಲ್ 2025 ರ ಹರಾಜು ಪ್ರಕ್ರಿಯೆ ನವೆಂಬರ್ 24 ರಿಂದ 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ಐಪಿಎಲ್ 2024 ಉಳಿಸಿಕೊಳ್ಳುವ ಗಡುವು ಅಕ್ಟೋಬರ್ 31ಕ್ಕೆ ಕೊನೆಗೊಂಡಿತ್ತು. ಎಲ್ಲಾ 10 ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಸಲ್ಲಿಸಿವೆ. ಅದರಂತೆ ಒಟ್ಟು 46 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.

ಎಂಎಸ್ ಧೋನಿ ಐಪಿಎಲ್ 2025ರಲ್ಲಿ ಆಡಲಿದ್ದಾರೆ ಎಂಬುದು ಆಟಗಾರರನ್ನು ಉಳಿಸಿಕೊಳ್ಳುವ ಗಡುವಿನ ದಿನದಂದು ಹೊರಬಂದ ದೊಡ್ಡ ಸುದ್ದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ ) ಧೋನಿಯನ್ನು 4 ಕೋಟಿ ರೂ.ಗೆ ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಂಡಿದೆ.

120 ಕೋಟಿ ರೂಪಾಯಿ ಪರ್ಸ್‌

25 ಆಟಗಾರರ ತಂಡವನ್ನು ರಚಿಸಲು ಪ್ರತಿ ತಂಡಕ್ಕೆ ಮೆಗಾ ಹರಾಜಿನಲ್ಲಿ ಒಟ್ಟು 120 ಕೋಟಿ ರೂ.ಗಳ ವೇತನ ಮಿತಿ ಲಭ್ಯವಿದೆ. ಫ್ರಾಂಚೈಸಿಗಳಿಗೆ ಗರಿಷ್ಠ ಐದು ಕ್ಯಾಪ್ಡ್ ಅಂತರರಾಷ್ಟ್ರೀಯ ಆಟಗಾರರು ಮತ್ತು ಇಬ್ಬರು ಅನ್ಕ್ಯಾಪ್ಡ್ ಭಾರತೀಯ ಆಟಗಾರರೊಂದಿಗೆ ಆರು ಆಟಗಾರರನ್ನು (ಉಳಿಸಿಕೊಳ್ಳಲು / ಪಂದ್ಯದ ಹಕ್ಕು) ಉಳಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು.

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಲಾ ಆರು ಆಟಗಾರರನ್ನು ಉಳಿಸಿಕೊಂಡಿದ್ದೆರೆ. ಸಿಎಸ್ಕೆ, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಐದು ಆಟಗಾರರನ್ನು ಉಳಿಸಿಕೊಂಡಿವೆ.

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಕ್ರಮವಾಗಿ ನಾಲ್ಕು, ಮೂರು ಮತ್ತು ಇಬ್ಬರು ಆಟಗಾರರನ್ನು ಉಳಿಸಿಕೊಂಡಿವೆ.

ಕೈಯಲ್ಲಿ 110.5 ಕೋಟಿ ರೂ.ಗಳೊಂದಿಗೆ, ಪಿಬಿಕೆಎಸ್ ಅತಿದೊಡ್ಡ ಪರ್ಸ್‌ನೊಂದಿಗೆ ಬಹು ನಿರೀಕ್ಷಿತ ಆಕ್ಷನ್-ಪ್ಯಾಕ್ಡ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.

ಈ ಆಟಗಾರರ ಮೇಲೆ ಗಮನ

ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್ವೆಲ್, ಜೋಸ್ ಬಟ್ಲರ್ ಮತ್ತು ಐಪಿಎಲ್ 2025 ರ ಹರಾಜಿನಲ್ಲಿ ಗಮನ ಸೆಳೆಯುವ ಆಟಗಾರರು. ಇನ್ನೂ ಕೆಲವು ಆಟಗಾರರು ಹೆಚ್ಚಿನ ಮೊತ್ತ ಪಡೆಯುವ ಸಾಧ್ಯತೆ ಇದೆ.

ಐಪಿಎಲ್ 2025ಗಾಗಿ ಯಾವುದೇ ಇಂಗ್ಲೆಂಡ್ ಆಟಗಾರರನ್ನು ಉಳಿಸಿಕೊಳ್ಳಲಾಗಿಲ್ಲ ಮತ್ತು ಹರಾಜಿನಲ್ಲಿ ಯಾರೆಲ್ಲಾ ಭಾಗವಾಗುತ್ತಾರೆ ಎಂಬುದನ್ನು ನೋಡುವುದು ಆಸಕ್ತಿದಾಯಕ.

Tags:    

Similar News