ಐಪಿಎಲ್ 2024: ಕೆ.ಎಲ್. ರಾಹುಲ್ 'ಮೊದಲ ಪಂದ್ಯಗಳಲ್ಲಿ' ವಿಕೆಟ್ ಕೀಪಿಂಗ್ ಇಲ್ಲ
ನವದೆಹಲಿ, ಮಾ.18- ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಐಪಿಎಲ್ ನ ಮೊದಲ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡುವ ಸಾಧ್ಯತೆ ಇಲ್ಲ.
ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಾಹುಲ್ ಸ್ನಾಯು ಸೆಳೆತ ಅನುಭವಿಸಿದ್ದರು. ಮೂರನೇ ಪಂದ್ಯದ ವೇಳೆಗೆ ಅವರು ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಂಪೂರ್ಣ ಗುಣಮುರಾಗದ ಹಿನ್ನೆಲೆಯಲ್ಲಿ ಉಳಿದ ಪಂದ್ಯಗಳಲ್ಲಿ ಆಡಲಿಲ್ಲ. ರಾಹುಲ್ ತಮ್ಮ ಬ್ಯಾಟಿಂಗ್, ಕೀಪಿಂಗ್ ಮತ್ತು ಕ್ಷೇತ್ರರಕ್ಷಣೆ ಅಭ್ಯಾಸದ ಕಿರು ವಿಡಿಯೋ ಎನ್‌ಸಿಎಯಲ್ಲಿ ಪೋಸ್ಟ್ ಮಾಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅವರಿಗೆ ಕ್ರಮೇಣ ಹಿಂತಿರುಗಲು ಸಲಹೆ ನೀಡಿದೆ. ಹೀಗಾಗಿ, ಐಪಿಎಲ್ 2024 ರ ಆರಂಭಿಕ ಪಂದ್ಯವನ್ನು ಮಾರ್ಚ್ 2024ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದಾರೆ.
ಪಂದ್ಯಕ್ಕಾಗಿ ಜೈಪುರಕ್ಕೆ ತೆರಳುವ ಮೊದಲು ಗುರುವಾರ (ಮಾರ್ಚ್ 20) ಲಕ್ನೋದಲ್ಲಿ ಜೊತೆಗಾರರನ್ನು ಸೇರಿಕೊಳ್ಳಲಿದ್ದಾರೆ. ವಿಕೆಟ್ ಕೀಪಿಂಗ್ ಮಾಡದೆ ಇರಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಇರುವುದರಿಂದ, ಉಪನಾಯಕರೂ ಆದ ರಾಹುಲ್ ಅವರ ಕೀಪಿಂಗ್ ಬಗ್ಗೆ ಲಕ್ನೋ ತಲೆ ಕೆಡಿಸಿಕೊಂಡಿಲ್ಲ.
ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ತಂಡದಲ್ಲಿ ಸ್ಥಾನ ಗಳಿಸಲು ಕೀಪಿಂಗ್ ಅಗತ್ಯವಿದೆ. ʻರಾಹುಲ್ ಅವರ ಹಿಂದಿನ ಪ್ರದರ್ಶನವನ್ನು ನೋಡಿದರೆ, ಬ್ಯಾಂಟಿಂಗ್‌ನಲ್ಲಿ ಮೊದಲ ಮೂರು ಸ್ಥಾನಗಳಿಗೆ ಪರಿಗಣಿಸುವ ಸಾಧ್ಯತೆ ಇಲ್ಲ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, 5 ಅಥವಾ 6 ರ ಕೀಪರ್-ಬ್ಯಾಟರ್ ಆಗಬಹುದು. ಬ್ಯಾಟರ್ ಆಗಿ ಪರಿಗಣಿಸಲು ಸಂಪೂರ್ಣವಾಗಿ ಬ್ಯಾಟರ್ ಆಗಿ ಪರಿಗಣಿಸಬೇಕೆಂದರೆ, ರಿಷಬ್ ಪಂತ್ ಇಲ್ಲವೇ ರಿಂಕು ಸಿಂಗ್ ಉತ್ತಮ ಆಯ್ಕೆʼ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.