Test Cricket | ಕಿವೀಸ್‌ ವಿರುದ್ಧ ಸರಣಿ ಸೋತ ಭಾರತ; 12 ವರ್ಷಗಳ ಬಳಿಕ ತವರಿನಲ್ಲಿ ಮೊದಲ ಸೋಲು

Update: 2024-10-26 12:58 GMT

ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್‌ ಪಡೆ 113 ರನ್‌ಗಳಿಂದ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿ, ಗೆಲುವಿನ ನಗೆ ಬೀರುವುದರೊಂದಿಗೆ ಸರಣಿ ಜಯಿಸಿದೆ. 12 ವರ್ಷಗಳ ನಂತರ ತವರಿನಲ್ಲಿ ಟೀಂ ಇಂಡಿಯಾದ ಮೊದಲ ಟೆಸ್ಟ್‌ ಸರಣಿ ಸೋಲು ಇದಾಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಕೀವಿಸ್‌ ಪಡೆ ಎರಡೂ ಇನ್ನಿಂಗ್‌ಗಳಲ್ಲಿ ಭಾರತ ತಂಡಕ್ಕೆ 359 ರನ್‌ಗಳ ಗುರಿ ನೀಡಿತ್ತು.

ಕಿವೀಸ್‌ ಪಡೆಯ ಗುರಿ ಬೆನ್ನತ್ತಿದ ಭಾರತ ಕೊನೆಯ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು. ವಿರಾಮದ ಬಳಿಕ ಮತ್ತೆ ಪಂದ್ಯ ಆರಂಭವಾಗುತ್ತಿದ್ದಂತೆ ಮೂರು ವಿಕೆಟ್ಗಳನ್ನು ಕಳೆದುಕೊಂಡು 245 ರನ್ಗಳಿಗೆ ಆಲೌಟ್ ಆಯಿತು.

ಕಿವೀಸ್‌ ಪಡೆಯ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (6/104) ಭಾರತದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು. ಮೊದಲ ಟೆಸ್ಟ್‌ ಪಂದ್ಯದಲ್ಲೂ ಸ್ಯಾಂಟ್ನರ್ 53ಕ್ಕೆ ಏಳು ವಿಕೆಟ್ ಕಬಳಿಸಿದ್ದರು.

ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೇವಲ 65 ಎಸೆತಗಳಲ್ಲಿ 77 ರನ್ ಕಲೆ ಹಾಕಿ ಜಯದ ವಿಶ್ವಾಸ ಮೂಡಿಸಿದ್ದರು. ಶುಭಮನ್ ಗಿಲ್ (23) ಜೊತೆಗೂಡಿ ಎರಡನೇ ವಿಕೆಟ್ಗೆ 62 ರನ್ ಜೊತೆಯಾಟ ಆಡಿದರು. ಆದರೆ, ಕಿವೀಸ್ ಬೌಲರ್ಗಳ ಎದುರು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಗಳ ಆಟ ನಡೆಯಲಿಲ್ಲ. 2012 ರಿಂದ ಭಾರತ ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದಿತ್ತು.

Tags:    

Similar News