10 ವರ್ಷಗಳ ಬಳಿಕ ಭಾರತಕ್ಕೆ ಬಾರ್ಡರ್‌- ಗವಾಸ್ಕರ್‌ ಟ್ರೋಫಿಯಲ್ಲಿ ಸೋಲು

ಈ ಸರಣಿ ಸೋಲಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ಅವಕಾಶ ನಷ್ಟಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡ ಪ್ರಶಸ್ತಿಗಾಗಿ ಸೆಣಸಾಡಲಿದೆ.;

Update: 2025-01-05 05:13 GMT
ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡ.

ಸಿಡ್ನಿಯಲ್ಲಿ ನಡೆದ ಐದನೇ ಹಾಗೂ ಕೊನೇ ಪಂದ್ಯದಲ್ಲಿ ಸೋಲು ಕಂಡಿರುವ ಬಾರತ ಕ್ರಿಕೆಟ್‌ ತಂಡ 10 ವರ್ಷಗಳ ಬಳಿಕ ಬಾರ್ಡರ್‌- ಗವಾಸ್ಕರ್‌ ಟ್ರೋಫಿಯನ್ನು ಕಳೆದುಕೊಂಡಿದೆ. ಗೌತಮ್‌ ಗಂಭೀರ್‌ ಕೋಚಿಂಗ್‌ನಲ್ಲಿ ಪ್ರವಾಸ ಮಾಡಿದ್ದ ಭಾರತ ತಂಡ ಬೇಸರದ ಮುಖ ಹೊತ್ತುಕೊಂಡು ಭಾರತಕ್ಕೆ ಮರಳುವಂತಾಗಿದೆ.

ಈ ಸರಣಿ ಸೋಲಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ಅವಕಾಶ ನಷ್ಟಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಸಿಡ್ನಿ ಪಂದ್ಯದಲ್ಲಿ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಟ್ರಾವಿಸ್ ಹೆಡ್ (ಅಜೇಯ 34) ಮತ್ತು ಬ್ಯೂ ವೆಬ್‌ಸ್ಟರ್‌ (ಅಜೇಯ 39) ಅವರ ಅರ್ಧಶತಕದ ಜತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ಭಾರತ ನೀಡಿದ್ದ 162 ರನ್‌ಗಳ ಗುರಿಯನ್ನು 27 ಓವರ್‌ಗಳಲ್ಲಿ ಬೆನ್ನಟ್ಟಿತು.

ಐದು ಪಂದ್ಯಗಳ ಸರಣಿಯನ್ನು ಭಾರತ 1-3ರಿಂದ ಕಳೆದುಕೊಂಡಿದೆ. ಭಾರತ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿತು. ಆ ಗೆಲುವು ಪರ್ತ್‌ನಲ್ಲಿ ಸಿಕ್ಕಿತ್ತು.

ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 157 ರನ್ ಗಳಿಗೆ ಆಲೌಟ್ ಆಗಿದೆ. ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಸೆಷನ್‌ನಲ್ಲಿ ವಿಕೆಟ್‌ಗಳನ್ನು ಹಂಚಿಕೊಂಡರು. ಬೋಲ್ಯಾಂಡ್‌ ಒಟ್ಟು ಆರು ವಿಕೆಟ್‌ಗಳನ್ನು ಉರಳಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ನಾಲ್ಕು ಸರಣಿಗಳನ್ನು ಭಾರತ ಗೆದ್ದಿದೆ. ಎರಡು ತವರು ಮತ್ತು ಅಷ್ಟೇ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನ್ನಿಂಗ್ಸ್: 185. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 181 ಭಾರತ ಎರಡನೇ ಇನ್ನಿಂಗ್ಸ್: 39.5 ಓವರ್‌ಗಳಲ್ಲಿ 157 (ರಿಷಭ್ ಪಂತ್ 61, ಸ್ಕಾಟ್ ಬೋಲ್ಯಾಂಡ್ 6/45).

ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್: 27 ಓವರ್‌ಗಳಲ್ಲಿ 4 ವಿಕೆಟ್‌ಗೆ 162 (ಉಸ್ಮಾನ್ ಖವಾಜಾ 41, ಟ್ರಾವಿಸ್ ಹೆಡ್ ಅಜೇಯ 34, ಬ್ಯೂ ವೆಬ್‌ಸ್ಟರ್‌ ಅಜೇಯ 39) ಪ್ರಸಿದ್ಧ್ ಕೃಷ್ಣ 3/65).  

Tags:    

Similar News