ಎಸ್​​ಪಿ ಸಂಸದೆ ಪ್ರಿಯಾ ಸರೋಜ್‌ ಜೊತೆ ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್‌

300ಕ್ಕೂ ಹೆಚ್ಚು ಅತಿಥಿಗಳ ಸಾಮರ್ಥ್ಯದ ಈ ಹಾಲ್‌ಗೆ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸಿದ್ದರು. ಸಮಾರಂಭದ ವೀಡಿಯೊವೊಂದು ಬಿಡುಗಡೆಯಾಗಿದೆ.;

Update: 2025-06-08 09:47 GMT

ಕ್ರಿಕೆಟಿಗ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್‌ ಅವರೊಂದಿಗೆ ಜೂನ್ 8ರಂದು ಲಕ್ನೋದ ಪಂಚತಾರಾ ಹೋಟೆಲ್‌ ದಿ ಸೆಂಟ್ರಮ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಮಾರಂಭಕ್ಕೆ ದಂಪತಿಯ ಕುಟುಂಬ ಸದಸ್ಯರೊಂದಿಗೆ, ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಪ್ರಮುಖ ವ್ಯಕ್ತಿಗಳು ಸಾಕ್ಷಿಯಾದರು.

ಸಮಾರಂಭಕ್ಕೂ ಮುನ್ನ ರಿಂಕು ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಚೌಧೇರಾ ವಾಲಿ ವಿಚಿತ್ರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ದಂಪತಿ ಬಿಳಿ ಮತ್ತು ಗುಲಾಬಿ ಬಣ್ಣದ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.

ನಿಶ್ಚಿತಾರ್ಥ ಸಮಾರಂಭವು ಹೂವಿನ ಅಲಂಕಾರ ಮತ್ತು ಆಕರ್ಷಕ ಬೆಳಕಿನಿಂದ ಸುಂದರವಾಗಿ ಸಿಂಗರಿಸಲ್ಪಟ್ಟಿದ್ದ ಫುಲ್‌ಕರ್ನ್‌ ಹಾಲ್‌ನಲ್ಲಿ ನಡೆಯಿತು. 300ಕ್ಕೂ ಹೆಚ್ಚು ಅತಿಥಿಗಳ ಸಾಮರ್ಥ್ಯದ ಈ ಹಾಲ್‌ಗೆ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸಿದ್ದರು. ಸಮಾರಂಭದ ವೀಡಿಯೊವೊಂದು ಬಿಡುಗಡೆಯಾಗಿದೆ.

ಸಮಾರಂಭದಲ್ಲಿ ಹಲವು ಗಣ್ಯ ಅತಿಥಿಗಳು ಭಾಗವಹಿಸಿದ್ದರು: ಮಾಜಿ ಕ್ರಿಕೆಟಿಗರಾದ ಪ್ರವೀಣ್‌ ಕುಮಾರ್‌, ಪಿಯೂಷ್‌ ಚಾವ್ಲಾ ಉತ್ತರ ಪ್ರದೇಶ ರಣಜಿ ತಂಡದ ನಾಯಕ ಆರಿಯನ್‌ ಜುಯಾಲ್‌ ಮತ್ತು ರಾಜಕೀಯ ನಾಯಕರಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಸಂಸದರಾದ ಜಯಾ ಬಚ್ಚನ್‌, ಡಿಂಪಲ್‌ ಯಾದವ್‌ ಮತ್ತು ಪ್ರಿಯರಿಂಗೋಯಿತ್. ಸಮಾಜವಾದಿ ಪಕ್ಷದ ಹಿರಿಯ ನಾಯಕ ಪ್ರೊಫೆಸರ್‌ ರಾಮ್ ಗೋಪಾಲ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಕೂಡ ಭಾಗವಹಿಸಿದ್ದರು.

ವಿಶೇಷ ಭೋಜನದ ವ್ಯವಸ್ಥೆ  

ಅತಿಥಿಗಳಿಗೆ ಸಂಪೂರ್ಣ ಶಾಕಾಹಾರಿ ಭೋಜನವನ್ನು ಬಡಿಸಲಾಯಿತು, ಬಂಗಾಳಿ ಸಿಹಿತಿಂಡಿಗಳಾದ ರಸಗುಲ್ಲಾ, ಕಾಜು-ಪನೀರ್ ರೋಲ್‌ಗಳು, ಯುರೋಪಿಯನ್ ಮತ್ತು ಏಷ್ಯನ್ ಸ್ಟಾರ್ಟರ್‌ಗಳಿದ್ದವು. ರಿಂಕು ಅವರಿಗೆ ಇಷ್ಟವಾದ ಪನೀರ್ ಟಿಕ್ಕಾ, ಮಟರ್ ಮಲಾಯ್, ಮಲಾಯ್ ಕೋಫ್ತಾ, ಕಡಾಯಿ ಪನೀರ್, ವೆಜ್ ಮಂಚೂರಿಯನ್, ಮತ್ತು ಸ್ಪ್ರಿಂಗ್ ರೋಲ್ಸ್‌ಗಳು ಭೋಜನದ ವಿಶೇಷ ಆಕರ್ಷಣೆಯಾಗಿದ್ದವು.

ಅತಿಥಿಗಳ ವಸತಿಗಾಗಿ ದಿ ಸೆಂಟ್ರಮ್ ಹೋಟೆಲ್‌ನಲ್ಲಿ 15 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ರಿಂಕು ಅವರ ಆಪ್ತ ಸ್ನೇಹಿತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. 

Tags:    

Similar News