ಆಸ್ಟ್ರೇಲಿಯ ಐದು ಟೆಸ್ಟ್‌ ಸರಣಿ: ಭಾರತ ಹ್ಯಾಟ್ರಿಕ್ ವಿಜಯ ಸಾಧಿಸಬಲ್ಲದು- ರವಿಶಾಸ್ತ್ರಿ

ಆಸ್ಟ್ರೇಲಿಯದ ‌ಕ್ರಿಕೆಟ್‌ ದಂತಕಥೆ ರಿಕಿ ಪಾಂಟಿಂಗ್ ಇತ್ತೀಚೆಗೆ ತಮ್ಮ ದೇಶ 3-1ರಲ್ಲಿ ಸರಣಿ ಜಯ ಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಆದರೆ, ಭಾರತೀಯ ಬೌಲರ್‌ಗಳು ತಮ್ಮ ಬ್ಯಾಟರ್‌ಗಳ ಸಹಕಾರದಿಂದ ಈ ಕೆಲಸ ಮಾಡಬಹುದು ಎಂದು ರವಿ ಶಾಸ್ತ್ರಿ ಹೇಳಿದರು.

Update: 2024-08-14 10:36 GMT

ದುಬೈ: ಬೌಲರ್‌ಗಳ ಗುಣಮಟ್ಟ ಮತ್ತು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಂತಹ ಬಲಿಷ್ಠ ಬ್ಯಾಟಿಂಗ್ ಶ್ರೇಣಿಯಿಂದ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯ ಹ್ಯಾಟ್ರಿಕ್ ಜಯ ಗಳಿಸಲು ಸಮರ್ಥವಾಗಿದೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

2015 ರ ಆರಂಭದಲ್ಲಿ ಕಾಂಗರೂಗಳು ತವರು ನೆಲದಲ್ಲಿ 2-0 ಸರಣಿ ಜಯ ಸಾಧಿಸಿದ ನಂತರ, ಭಾರತ ಆಸ್ಟ್ರೇಲಿಯದಲ್ಲಿ ಕೊನೆಯ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಇಟ್ಟುಕೊಂಡಿದೆ.

ʻಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ದೈಹಿಕವಾಗಿ ಸಮರ್ಥರಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಕಾಯ್ದಿಟ್ಟ ಆಟಗಾರರಿದ್ದಾರೆ. ನನ್ನ ಪ್ರಕಾರ ಭಾರತವು ಹ್ಯಾಟ್ರಿಕ್ ಸಾಧನೆ ಮಾಡಬಹುದು,ʼ ಎಂದು ಶಾಸ್ತ್ರಿ ಐಸಿಸಿಗೆ ತಿಳಿಸಿದರು.

ಆಸ್ಟ್ರೇಲಿಯದ ದಂತಕಥೆ ರಿಕಿ ಪಾಂಟಿಂಗ್ ಇತ್ತೀಚೆಗೆ ತಮ್ಮ ದೇಶ 3-1 ಸರಣಿ ಜಯಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಆದರೆ, ಭಾರತೀಯ ಬೌಲರ್‌ಗಳು ತಮ್ಮ ಬ್ಯಾಟರ್‌ಗಳ ಸಹಕಾರದಿಂದ ಈ ಕೆಲಸ ಮಾಡಬಹುದು ಎಂದು ಶಾಸ್ತ್ರಿ ಹೇಳಿದರು.

ʻಇದೊಂದು ಅಪೂರ್ವ ಸರಣಿ ಆಗಲಿದೆ. ಭಾರತಕ್ಕೆ ಹ್ಯಾಟ್ರಿಕ್ ಸಾಧನೆ ಮಾಡುವ ಎಲ್ಲಾ ಅವಕಾಶಗಳಿವೆ. ಉತ್ತಮ ಬೌಲರ್‌ಗಳನ್ನು ಹೊಂದಿದ್ದು, ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ, ಅವರು ಮತ್ತೊಮ್ಮೆ ಆಸ್ಟ್ರೇಲಿಯವನ್ನು ಕಟ್ಟಿ ಹಾಕಬಹುದು,ʼ ಎಂದು ಹೇಳಿದರು.

ಭಾರತವು ಮುಂಬರುವ ನವೆಂಬರ್‌ನಲ್ಲಿ ಪರ್ತ್‌ನಲ್ಲಿ ಮೊದಲ ಟೆಸ್ಟ್‌ ಆಡಲಿದೆ. ಕಳೆದ ವರ್ಷ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ತಂಡದ ವಿರುದ್ಧ ಸೇಡು ತೀರಿಸಿಕೊಂಡ ನಂತರ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯ ತಂಡ ಲವಲವಿಕೆಯಿಂದಿದೆ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿ ಪುನಃ ಪಡೆದುಕೊಳ್ಳಲು ಉತ್ಸುಕವಾಗಿದೆ.

ʻನೆನಪಿಡಿ, ಕಳೆದ ಎರಡು ಪ್ರವಾಸಗಳಲ್ಲಿ ಭಾರತ ಎರಡು ಬಾರಿ ಆಸ್ಟ್ರೇಲಿಯವನ್ನು ಸೋಲಿಸಿದೆ ಮತ್ತು ಒಂದು ದಶಕದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತದ ಕೈಯಲ್ಲಿದೆ. ಆದ್ದರಿಂದ, ಎಲ್ಲರೂ ಈ ಟೆಸ್ಟ್ ಪಂದ್ಯಗಳಿಗಾಗಿ ಕಾಯುತ್ತಿದ್ದಾರೆ,ʼ ಎಂದು ಶಾಸ್ತ್ರಿ ಹೇಳಿದರು.

ಆಸ್ಟ್ರೇಲಿಯ ಕೂಡ ಬಲಿಷ್ಠ ಬೌಲಿಂಗ್ ಹೊಂದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಸತತ ಸೋಲಿನಿಂದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ʻಬೌಲಿಂಗ್ ದಾಳಿ‌ ಬಹುಮಟ್ಟಿಗೆ ಒಂದೇ ಆಗಿರುತ್ತದೆ. ಶ್ರೇಷ್ಠ ವೇಗದ ಬೌಲಿಂಗ್ ದಾಳಿ ಇರಲಿದೆ. ನಾಥನ್ ಲಿಯಾನ್ ಸೇರಿಸಿದಾಗ ಆಲ್ರೌಂಡ್ ದಾಳಿ ನಡೆಯಲಿದೆ. ಇದು ಆಸ್ಟ್ರೇಲಿಯದ ವೇಗದ ಬೌಲರ್‌ಗಳ ವಿರುದ್ಧ ಭಾರತದ ಬ್ಯಾಟಿಂಗ್ ಸ್ಪರ್ಧೆ ಆಗಲಿದೆ. ಭಾರತೀಯ ಬೌಲಿಂಗ್ ದಾಳಿಯನ್ನು ನೋಡಲು ಪ್ರತಿಯೊಬ್ಬರೂ ಕಾಯುತ್ತಿದ್ದಾರೆ,ʼ ಎಂದು ಅವರು ಹೇಳಿದರು. 

Tags:    

Similar News