T 20| ಶ್ರೀಲಂಕಾಕ್ಕೆ 7 ವಿಕೆಟ್‌ ಸೋಲು; ಭಾರತಕ್ಕೆ 2-0 ಮುನ್ನಡೆ

ಎಂಟು ಓವರ್‌ಗಳಲ್ಲಿ 78 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ನಾಯಕ ಸೂರ್ಯಕುಮಾರ್ ಯಾದವ್ (26, 12 ಎಸೆತ) ಮತ್ತು ಯಶಸ್ವಿ ಜೈಸ್ವಾಲ್ (30, 15 ಎಸೆತ) ಅವರ ಉತ್ತಮ ಬ್ಯಾಟಿಂಗ್‌ನಿಂದ, ಭಾರತ 6.3 ಓವರ್‌ಗಳಲ್ಲಿ ಜಯ ಸಾಧಿಸಿತು.

Update: 2024-07-29 06:07 GMT

ಪಲ್ಲೆಕೆಲೆಯಲ್ಲಿ ನಡೆದ ಮಳೆ ಬಾಧಿತ ಎರಡನೇ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, 2-0 ಮುನ್ನಡೆ ಸಾಧಿಸಿದೆ.

ಎಂಟು ಓವರ್‌ಗಳಲ್ಲಿ 78 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ನಾಯಕ ಸೂರ್ಯಕುಮಾರ್ ಯಾದವ್ (26, 12 ಎಸೆತ, 4x4, 1x6) ಮತ್ತು ಯಶಸ್ವಿ ಜೈಸ್ವಾಲ್ (30, 15 ಎಸೆತ, 3x4, 2x6) ಉತ್ತಮ ಬ್ಯಾಟಿಂಗ್‌ನಿಂದ ಭಾರತ 6.3 ಓವರ್‌ಗಳಲ್ಲಿ ಡಿಎಲ್‌ಎಸ್ ವಿಧಾನದಡಿಯಲ್ಲಿ ಜಯ ಸಾಧಿಸಿತು. 

ಇದಕ್ಕೂ ಮೊದಲು, ಕುಸಲ್ ಪೆರೆರಾ ಆಕ್ರಮಣಕಾರಿ ಅರ್ಧ ಶತಕವನ್ನು ಮಾಡಿದರು. ಆದರೆ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮೂರು ನಿರ್ಣಾಯಕ ವಿಕೆಟ್‌ ಗಳಿಸಿದರು. ಪೆರೆರಾ (53, 34 ಎಸೆತ, 6x4, 2x6), ಪಾತುಮ್ ನಿಸ್ಸಾಂಕ (32, 24 ಎಸೆತ, 5x4) ಜತೆಗೂಡಿ ಲಂಕಾ ತಂಡವನ್ನು ಮುನ್ನಡೆಸಿದರು. 

ಬಿಷ್ಣೋಯಿ ಭರ್ಜರಿ ಬೌಲಿಂಗ್:‌ ಆದರೆ, ಬಿಷ್ಣೋಯ್ (3/26), ಮಧ್ಯಮ ಮತ್ತು ಅಂತ್ಯದ ಓವರ್‌ಗಳಲ್ಲಿ ಎರಡು ಎಸೆತದಲ್ಲಿ ಎರಡು ಸೇರಿದಂತೆ ಮೂರು ವಿಕೆಟ್‌ ಗಳಿಸಿದರು. ಭಾರತವು ಶ್ರೀಲಂಕಾವನ್ನು ಒಂಬತ್ತು ವಿಕೆಟ್‌ಗೆ 161ರನ್ ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿತು. ಮಳೆಗೆ ಮುನ್ನ ಭಾರತ 3 ಎಸೆತಗಳಳಲ್ಲಿ ವಿಕೆಟ್ ನಷ್ಟವಿಲ್ಲದೆ 6 ಗಳಿಸಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 20 ಓವರ್‌ಗಳಲ್ಲಿ 161/9 (ಕುಸಲ್ ಪೆರೆರಾ 53, ಪಾತುಮ್ ನಿಸ್ಸಾಂಕ 32; ರವಿ ಬಿಷ್ಣೋಯ್ 3/26, ಹಾರ್ದಿಕ್ ಪಾಂಡ್ಯ 2/24, ಅರ್ಷದೀಪ್ ಸಿಂಗ್ 2/24).

ಭಾರತ: 6.3 ಓವರ್‌ಗಳಲ್ಲಿ 81/3 ( ಸೂರ್ಯಕುಮಾರ್ ಯಾದವ್ 26, ಯಶಸ್ವಿ ಜೈಸ್ವಾಲ್ 30).

Tags:    

Similar News