ಮಾಜಿ ಟೀಂ ಇಂಡಿಯಾ ಆಟಗಾರ ಅರವಿಂದ್ ಶ್ರಿನಾಥ್ ವೈವಾಹಿಕ ಜೀವನದಲ್ಲಿ ಬಿರುಕು
ಎಡಗೈ ಬೌಲರ್ ಅರವಿಂದ್ ಶ್ರಿನಾಥ್ 2011ರಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ 2015ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಗಮನಸೆಳೆದಿದ್ದರು.;
ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಕನ್ನಡಿಗ ಕ್ರಿಕೆಟರ್ ಅರವಿಂದ್ ಶ್ರಿನಾಥ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ರಾಯಲ್ ಚಾಲೆಂಜರ್ಸ್ ಎಡ ಗೈ ಬೌಲರ್ ಬೆಂಗಳೂರು ಮೂಲದ ಅರವಿಂದ್ ಶ್ರಿನಾಥ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಭಾರತಿ ಅವರಿಂದ ವಿಚ್ಛೇದನೆ ಬಯಸಿ ಬೆಂಗಳೂರಿನ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದಾರೆ.
ಎಡಗೈ ಬೌಲರ್ ಅರವಿಂದ್ ಶ್ರಿನಾಥ್ 2011ರಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ 2015ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಗಮನಸೆಳೆದಿದ್ದರು. ಟಿ20 ಅಂತಾರಾಷ್ಟ್ರೀಯ ಆಟಗಾರ ಅರವಿಂದ್ ಶ್ರಿನಾಥ್ ಅವರು ಬೆಂಗಳೂರಿನ ಬಸವನಗುಡಿ ಮೂಲದ ಗೆಳತಿ ಐಟಿ ಉದ್ಯೋಗಿ ಭಾರತಿ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಆದರೆ ಇದೀಗ ವೈವಾಹಿಕ ಬದುಕಿನಲ್ಲಿ ಬಿರುಕು ಉಂಟಾಗಿ ದಂಪತಿ ಪ್ರತ್ಯೇಕವಾಗಿ ವಾಸವಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ನಡುವೆ ಆರೋಪ- ಪ್ರತ್ಯಾರೋಪಗಳೂ ನಡೆದಿವೆ. ಇದೇ ವಿವಾದ ಇದೀಗ ವಿಚ್ಛೇದನಾ ದಾವೆಯ ಹಂತ ತಲುಪಿದೆ. ಅರವಿಂದ್ ಶ್ರಿನಾಥ್ ಅವರು ವಿಚ್ಛೇದನೆ ಕೋರಿ ಸಲ್ಲಿಸಿರುವ ಅರ್ಜಿಯು ಬೆಂಗಳೂರಿನ ಕೌಟುಂಬಿಕ ನ್ಯಾಯಾಲದಯದಲ್ಲಿ ವಿಚಾರಣೆಗೆ ಬಂದಿದೆ.
ಈ ನಡುವೆ, ಕ್ರಿಕೆಟಿಗ ಅರವಿಂದ್ ಶ್ರಿನಾಥ್ ದಂಪತಿಯ ಆರೋಪ-ಪ್ರತ್ಯಾರೋಪಗಳೂ ಗಮನಸೆಳೆದಿವೆ. ಪತ್ನಿ ತನಗೆ ನೀಡುತ್ತಿರುವ ಮಾನಸಿಕ ಕಿರುಕುಳದಿಂದ ತಾನು ನೊಂದಿರುವುದಾಗಿ ಅರವಿಂದ್ ಶ್ರಿನಾಥ್ ಅವರು ಕೋರ್ಟ್ ಮುಂದೆ ಆರೋಪ ಮಾಡಿದರೆ, ತನ್ನ ಗಂಡ ಅರವಿಂದ್ ಶ್ರಿನಾಥ್ ಅವರೇ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ನೋವು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಪತಿಯು ಟೀಂ ಇಂಡಿಯಾದಲ್ಲಿ ಹೇಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು ಎಂಬ ಬಗ್ಗೆ ನ್ಯಾಯಾಲಯದ ಗಮನಸೆಳೆದಿರುವ ಸಂಗತಿಯೂ ಅಚ್ಚರಿ ಹಾಗೂ ಕುತೂಹಲದ ಕೇಂದ್ರಬಿಂದುವೆನಿಸಿದೆ.