ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಸೋಲು; ಕ್ರಿಕೆಟ್ ಪ್ರೇಮಿಗಳಿಗೆ ದುಃಖದ ಭಾನುವಾರ
ಹಿರಿಯ ಪುರುಷರ, ಮಹಿಳೆಯರ ಮತ್ತು 19 ವರ್ಷದೊಳಗಿನವರ ಮೂರು ರಾಷ್ಟ್ರೀಯ ತಂಡಗಳು ತಮ್ಮ ತಮ್ಮ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ.;
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಭಾನುವಾರ (ಡಿಸೆಂಬರ್ 8) ಮರೆಯಲಾಗದ ದಿನ. ಭಾರತ ಹಾಗೂ ವಿಭಿನ್ನ ತಂಡಗಳ ವಿರುದ್ಧ ಮೂರು ಪಂದ್ಯಗಳು ನಡೆದಿದ್ದು ಎಲ್ಲದರಲ್ಲೂ ಭಾರತ ಸೋತಿದೆ. ಹಿರಿಯ ಪುರುಷರ, ಮಹಿಳೆಯರ ಮತ್ತು 19 ವರ್ಷದೊಳಗಿನವರ ಮೂರು ರಾಷ್ಟ್ರೀಯ ತಂಡಗಳು ತಮ್ಮ ತಮ್ಮ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ.
ಅಡಿಲೇಡ್ನಲ್ಲಿ ನಡೆದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ಗಳ ಸೋಲು ಅನುಭವಿಸಿದರೆ, ಬ್ರಿಸ್ಬೇನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಆಸ್ಟ್ರೇಲಿಯಾ ವಿರುದ್ಧ 122 ರನ್ಗಳಿಂದ ಸೋತು ಮೂರು ಪಂದ್ಯಗಳ ಸರಣಿಯಲ್ಲಿ 2-0 ಹಿನ್ನಡೆ ಕಂಡಿತು.
ಪುರುಷರ ತಂಡ ಪರ್ತ್ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯವನ್ನು ಭಾರತ 295 ರನ್ಗಳಿಂದ ಗೆದ್ದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಈಗ 1-1 ಸಮಬಲದಲ್ಲಿದೆ. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್ನಲ್ಇ ನಡೆಯಲಿದೆ.
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 59 ರನ್ಳಿಂದ ಸೋತಿತು.
19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಭಾರತ 35.2 ಓವರ್ಗಳಲ್ಲಿ ಕೇವಲ 139 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಬಾಂಗ್ಲಾದೇಶ ತಂಡ 199 ರನ್ಗಳನನ್ನು ಪೇರಿಸಿತ್ತು.