Chennai Test| ಬಾಂಗ್ಲಾದೇಶ 149ಕ್ಕೆ ಆಲೌಟ್; ಭಾರತಕ್ಕೆ 227 ರನ್‌ ಮುನ್ನಡೆ

ಭಾರತ ಪರ ಬುಮ್ರಾ (4/50) ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಆಕಾಶ್ ದೀಪ್ (2/19), ಮೊಹಮ್ಮದ್ ಸಿರಾಜ್ (2/30) ಮತ್ತು ರವೀಂದ್ರ ಜಡೇಜಾ (2/19) ತಲಾ ಎರಡು ವಿಕೆಟ್ ಪಡೆದರು.

Update: 2024-09-20 11:55 GMT

ಚೆನ್ನೈನಲ್ಲಿ ನಡೆದ ಆರಂಭಿಕ ಟೆಸ್ಟ್‌ನ ಎರಡನೇ ದಿನದಂದು ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್‌ ಗಳಿಸಿದರು.

ಭಾರತದ 376 ರನ್‌ಗಳಿಗೆ ಉತ್ತರವಾಗಿ ಬಾಂಗ್ಲಾದೇಶದ ಆಟ ಕೇವಲ 47.1 ಓವರ್‌ ಗೆ ಮುಕ್ತಾಯವಾಯಿತು. ಟೀ ನಂತರದ ಅವಧಿಯಲ್ಲಿ ಆತಿಥೇಯ ತಂಡದ ಬೌಲರ್‌ಗಳ ವಿರುದ್ಧ ಬಾಂಗ್ಲಾದ ಬ್ಯಾಟರ್‌ಗಳು ಹೆಣಗಾಡಿದರು. ಭಾರತ 227 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಫಾಲೋ ಆನ್ ನೀಡುವ ಬದಲು ಮತ್ತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 

ಭಾರತದ ಪರ ಬುಮ್ರಾ (4/50) ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಆಕಾಶ್ ದೀಪ್ (2/19), ಮೊಹಮ್ಮದ್ ಸಿರಾಜ್ (2/30) ಮತ್ತು ರವೀಂದ್ರ ಜಡೇಜಾ (2/19) ತಲಾ ಎರಡು ವಿಕೆಟ್ ಪಡೆದರು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 32 ರನ್ ಹಾಗೂ ಮೆಹದಿ ಹಸನ್ ಮಿರಾಜ್ ಔಟಾಗದೆ 27 ರನ್ ಗಳಿಸಿದರು. 

ಇದಕ್ಕೂ ಮೊದಲು 339/6 ರೊಂದಿಗೆ ದಿನದಾಟ ಆರಂಭಿಸಿದ ಭಾರತ, ಕೇವಲ 37 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತು. 91.2 ಓವರ್‌ ಗಳಲ್ಲಿ 376 ರನ್‌ಗಳಿಗೆ ಆಲೌಟ್ ಆಯಿತು. ರವಿಚಂದ್ರನ್ ಅಶ್ವಿನ್ ಅವರ ಆಟ 113ಕ್ಕೆ ಕೊನೆಗೊಂಡಿತು. ಅವರು ರಾತ್ರಿಯ ಮೊತ್ತಕ್ಕೆ 11 ರನ್ ಸೇರಿಸಿದರು. ರವೀಂದ್ರ ಜಡೇಜಾ 86 ರನ್ ಗಳಿಸಿದರು. 

ಬಾಂಗ್ಲಾದೇಶ ಪರ ಹಸನ್ ಮಹಮೂದ್ ಐದು ವಿಕೆಟ್ (5/83) ಮತ್ತು ತಸ್ಕಿನ್ ಅಹ್ಮದ್ ಮೂರು ವಿಕೆಟ್‌ ಗಳಿಸಿದರು. 

ಸಂಕ್ಷಿಪ್ತ ಸ್ಕೋರ್‌ಗಳು:

ಭಾರತ: 91.2 ಓವರ್‌ಗಳಲ್ಲಿ 376 (ರವಿಚಂದ್ರನ್ ಅಶ್ವಿನ್ 113, ರವೀಂದ್ರ ಜಡೇಜಾ 86, ಯಶಸ್ವಿ ಜೈಸ್ವಾಲ್ 56; ಹಸನ್ ಮಹ್ಮದ್ 5/83, ತಸ್ಕಿನ್ ಅಹ್ಮದ್ 3/55).

ಬಾಂಗ್ಲಾದೇಶ: 47.1 ಓವರ್‌ಗಳಲ್ಲಿ 149( ಶಕೀಬ್ ಅಲ್ ಹಸನ್ 32, ಮೆಹದಿ ಹಸನ್ ಮಿರಾಜ್ ಔಟಾಗದೆ 27; ಬೂಮ್ರಾ 4 /50, ಆಕಾಶ್ ದೀಪ್ 2/19, ರವೀಂದ್ರ ಜಡೇಜಾ 2/19, ಮೊಹಮ್ಮದ್ ಸಿರಾಜ್ 2/30).

Tags:    

Similar News