Champion RCB : ಐಪಿಎಲ್ನಲ್ಲಿ 'ಈ ಸಲ ಕಪ್ ನಮ್ದೇ' ಕನಸು ನಿಜ! ವಿರಾಟ್ ಕೊಹ್ಲಿಗೆ ಆನಂದಭಾಷ್ಪದ ವಿಜಯ
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 18 ವರ್ಷಗಳ ದೀರ್ಘ ಕನಸು ಅಂತಿಮವಾಗಿ ನನಸಾಗಿದೆ.;
By : The Federal
Update: 2025-06-03 18:16 GMT
18 ವರ್ಷಗಳ ಕಾತರ. ನಿರಾಸೆ ಮತ್ತು ಹೃದಯವಿದ್ರಾವಕ ಸೋಲುಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಐಪಿಎಲ್ 2025ರ ಟ್ರೋಫಿ ಗೆದ್ದುಕೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜೂನ್ 4ರಂದು ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ಗಳ ವಿಜಯ ಸಾಧಿಸಿದ ಮೆನ್ ಇನ್ ರೆಡ್ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿತು.
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 18 ವರ್ಷಗಳ ದೀರ್ಘ ಕನಸು ಅಂತಿಮವಾಗಿ ನನಸಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಐತಿಹಾಸಿಕ ಪಂದ್ಯವು ಆರ್ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು. ಜೊತೆಗೆ ತಂಡದ ಸಂಘಟಿತ ಪ್ರದರ್ಶನವು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿತು.