Border-Gavaskar Trophy | ಗ್ರೀನ್‌, ಮಾರ್ಷ್ ಮೇಲೆ ಅಧಿಕ ಹೊಣೆ: ಪ್ಯಾಟ್ ಕಮ್ಮಿನ್ಸ್

Update: 2024-08-19 10:45 GMT
ಕ್ಯಾಮೆರಾನ್‌ ಗ್ರೀನ್

ಮೆಲ್ಬೋರ್ನ್:‌ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಆಲ್ ರೌಂಡರ್‌ಗಳಾದ ಕ್ಯಾಮೆರಾನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್‌ ಅವರಿಂದ ಹೆಚ್ಚು ಕೆಲಸದ ಹೊಣೆಯನ್ನು ಆಸ್ಟ್ರೇಲಿಯ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ನಿರೀಕ್ಷಿಸಿದ್ದಾರೆ.

ಐದು ಟೆಸ್ಟ್‌ಗಳ ಸರಣಿ ನವೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಮುಂಚೂಣಿಯ ವೇಗದ ದಾಳಿಯೊಂದಿಗೆ ಇಬ್ಬರೂ ಆಲ್‌ರೌಂಡರ್‌ಗಳು ಕೆಲಸದ ಹೊರೆ ಹಂಚಿಕೊಳ್ಳಬೇಕೆಂದು ಕಮ್ಮಿನ್ಸ್ ಬಯಸುತ್ತಾರೆ.

ʻಆಲ್ ರೌಂಡರ್‌ ಆಗಿರುವುದರಿಂದ ಹೊರೆ ಅಧಿಕವಾಗಿರಲಿದೆ. ನಾವು ಯೋಚಿಸಿದಷ್ಟು ಅವರನ್ನು ಬಳಸಬೇಕೆಂದಿಲ್ಲ.ಟೆಸ್ಟ್‌ ಪಂದ್ಯಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ಬೇಸಿಗೆಗಳಲ್ಲಿ ಹೆಚ್ಚೇನೂ ಕೆಲಸ ಇರಲಿಲ್ಲʼ ಎಂದು ಪ್ಲೇ ಕ್ರಿಕೆಟ್ ಸಪ್ತಾಹಕ್ಕೆ ಚಾಲನೆ ನೀಡಿ ಹೇಳಿದರು.

ʻಈ ಬೇಸಿಗೆ ಸ್ವಲ್ಪ ವಿಭಿನ್ನವಾಗಿರಬಹುದು ಎಂದು ಭಾವಿಸುತ್ತೇನೆ. ನಾವು ಗ್ರೀನ್ ಮತ್ತು ಮಾರ್ಷ್ ಅವರನ್ನು ಸ್ವಲ್ಪ ಹೆಚ್ಚು ಆಧರಿಸಿದ್ದೇವೆ. ಕ್ಯಾಮ್ ಮೂಲತಃ ಶೀಲ್ಡ್ ಕ್ರಿಕೆಟ್‌ನಲ್ಲಿ ಬೌಲರ್ ಆಗಿ ಪ್ರಾರಂಭಿಸಿದ್ದು, ಟೆಸ್ಟ್ ಪಂದ್ಯಗಳಲ್ಲಿ ರಾಶಿಗಟ್ಟಲೆ ಓವರ್‌ ಮಾಡಬೇಕಿಲ್ಲ. ಈಗ ಅವರು ಕೆಲವು ವರ್ಷ ಹಳಬರಾಗಿರುವುದರಿಂದ, ನಾವು ಅವರ ಮೇಲೆ ಸ್ವಲ್ಪ ಹೆಚ್ಚು ಅವಲಂಬಿಸಿದ್ದೇವೆ,ʼ ಎಂದು ಹೇಳಿದರು.

ಗ್ರೀನ್ (25) ಇದುವರೆಗೆ 28 ಟೆಸ್ಟ್‌ಗಳಲ್ಲಿ 35.31 ಸರಾಸರಿಯಲ್ಲಿ 35 ವಿಕೆಟ್‌ ಪಡೆದಿದ್ದಾರೆ.

ʻಮುಖ್ಯ ಅಂಶವೆಂದರೆ ಗ್ರೀನ್ ಮತ್ತು ಮಾರ್ಷ್ ಇಬ್ಬರೂ ಬ್ಯಾಟಿಂಗ್‌ನಲ್ಲಿ ಮೊದಲ ಅಗ್ರ ಆರು ಸ್ಥಾನ ಹೊಂದಿದ್ದಾರೆ. ನಾಥನ್ ಲಿಯಾನ್ ಅವರು ಸಾಕಷ್ಟು ಓವರ್‌ ಬೌಲ್ ಮಾಡುವುದರಿಂದ, ತಂಡದಲ್ಲಿ ಆಲ್ರೌಂಡರ್ ಇರಲೇಬೇಕಿಲ್ಲ. ಆದರೆ, ಐದನೇ ಬೌಲಿಂಗ್ ಆಯ್ಕೆಯನ್ನು ಹೊಂದುವಲ್ಲಿ ಇದರಿಂದ ದೊಡ್ಡ ವ್ಯತ್ಯಾಸ ಆಗುತ್ತದೆ. ಕ್ಯಾಮ್ ಮತ್ತು ಮಿಚ್ ಅವರಲ್ಲದೆ, ನಾವು ಆರು ಬೌಲಿಂಗ್ ಆಯ್ಕೆಗಳನ್ನು ಹೊಂದಿದ್ದೇವೆ. ಇದು ನಿಜವಾಗಿಯೂ ಸಂತೋಷದ ವಿಷಯ,ʼ ಎಂದು ಹೇಳಿದರು. ಬೌಲರ್‌ ಕ್ಯಾಪ್ಟನ್‌ ಹೊಂದಿರುವುದರಿಂದ ಹೊರೆ ಹೇಗೆ ಕಡಿಮೆಯಾಗುತ್ತದೆ ಎಂದು ಕಮ್ಮಿನ್ಸ್ ಅವರ ಬೌಲಿಂಗ್ ಸಹೋದ್ಯೋಗಿಗಳು ಯಾವಾಗಲೂ ಹೇಳುತ್ತಿರುತ್ತಾರೆ.

ʻಅವರು ಹಾಗೆ ಹೇಳುವುದರಿಂದ ಸಂತೋಷವಾಗಿದೆ. ಆದರೆ, ಅದನ್ನು ಎಂದಿಗೂ ನನ್ನ ಮುಂದೆ ಹೇಳುವುದಿಲ್ಲ. ನಾನು ಅವರಿಗೆ ಮೇಲಿನ ಹಂತದಲ್ಲಿ ಏನನ್ನಾದರೂ ಮಾಡಲು ಕೇಳಿದಾಗ, ನಾನು ಅದನ್ನು ಇನ್ನೊಂದು ತುದಿಯಲ್ಲಿ ಮಾಡುತ್ತಿರುತ್ತೇನೆ ಎಂಬುದು ಅವರಿಗೆ ಗೊತ್ತಿರುತ್ತದೆ. ನಾನು ಮಾಡಲು ಸಾಧ್ಯವಿಲ್ಲದ್ದನ್ನುಅವರಿಗೆ ಮಾಡಲು ಹೇಳುವುದಿಲ್ಲ. ಕಳೆದ ದಶಕದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಲ್ಲಿ ಪರಸ್ಪರ ನಂಬಿಕೆ ಹೆಚ್ಚಿರಬಹುದು,ʼ ಎಂದರು. 

Tags:    

Similar News