R Ashwin : ನನ್ನಲ್ಲಿ ಇನ್ನೂ ಕಸುವು ಇದೆ; ಆರ್​. ಅಶ್ವಿನ್ ವಿದಾಯದ ಮಾತುಗಳು ಇಲ್ಲಿವೆ

38 ವರ್ಷದ ಅಶ್ವಿನ್ 106 ಟೆಸ್ಟ್, 116 ಏಕದಿನ ಮತ್ತು 65 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಡಿಸೆಂಬರ್ 8 ರಂದು ಅಡಿಲೇಟ್​ನಲ್ಲಿ ಭಾರತಕ್ಕಾಗಿ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಡಿದ್ದರು.;

Update: 2024-12-18 07:04 GMT
ಭಾರತ ಕ್ರಿಕೆಟ್ ಕಂಡ ಶ್ರೇಷ್ಢ ಬೌಲರ್ ಆರ್​. ಅಶ್ವಿನ್​

ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ (ಡಿಸೆಂಬರ್ 18) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಮೂರನೇ ಪಂದ್ಯ ಮುಕ್ತಾಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವುದು ಭಾವನಾತ್ಮಕ ಕ್ಷಣ ಎಂದು ಹೇಳಿಕೋಂಡಿದ್ದಾರೆ.  ಅಶ್ವಿನ್​ ಐಪಿಎಲ್​​ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ. ಈ ಬಾರಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ ) ಪಾಲಾಗಿದ್ದು ಆ ತಂಡಕ್ಕೆ ಸೇವೆ ಸಲ್ಲಿಸಲಿದ್ದಾರೆ.


ಬ್ರಿಸ್ಬೇನ್​​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಡ್ರಾಗೊಂಡ ನಂತರ, ಅಶ್ವಿನ್ ನಾಯಕ ರೋಹಿತ್ ಶರ್ಮಾ ಅವರ ಪಕ್ಕದಲ್ಲಿ ಕುಳಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. 537 ಟೆಸ್ಟ್, 156 ಏಕದಿನ ಮತ್ತು 72 ಟಿ 20 ಐ ವಿಕೆಟ್​ಗಳು ಮತ್ತು ಆರು ಟೆಸ್ಟ್ ಶತಕಗಳೊಂದಿಗೆ ತಮ್ಮ ಭಾರತ ಕ್ರಿಕೆಟ್​ ತಂಡದ ಜತೆಗಿನ ವೃತ್ತಿಜೀವನವನ್ನು ಅಶ್ವಿನ್ ಕೊನೆಗೊಳಿಸಿದ್ದಾರೆ. ಡಿಸೆಂಬರ್ 18 ಭಾರತದ ಕ್ರಿಕೆಟಿಗನಾಗಿ ತನ್ನ "ಕೊನೆಯ ದಿನ" ಎಂದು ಅಶ್ವಿನ್ ಹೇಳಿದರು. ಈ ಬಲಗೈ ಬೌಲರ್​ ಅನಿಲ್ ಕುಂಬ್ಳೆ (619) ನಂತರ ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು.

38 ವರ್ಷದ ಅಶ್ವಿನ್ 106 ಟೆಸ್ಟ್, 116 ಏಕದಿನ ಮತ್ತು 65 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಡಿಸೆಂಬರ್ 8 ರಂದು ಅಡಿಲೇಟ್​ನಲ್ಲಿ ಭಾರತಕ್ಕಾಗಿ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಡಿದ್ದರು. ಅವರನ್ನು ಬ್ರಿಸ್ಬೇನ್ ಟೆಸ್ಟ್​ಗೆ ಆಯ್ಕೆ ಮಾಡಲಿಲ್ಲ. ಅವರ ಸ್ಥಾನಕ್ಕೆ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಲಾಯಿತು. ಅವರು 2023 ಮತ್ತು 2022 ರಿಂದ ಕ್ರಮವಾಗಿ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಿಲ್ಲ.

ಏಕದಿನ ವಿಶ್ವಕಪ್ ವಿಜೇತ (2011) ಅಶ್ವಿನ್, "ತಮ್ಮಲ್ಲಿ ಇನ್ನೂ ಕಸುವು ಉಳಿದಿದೆ" ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅವರ ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಶ್ವಿನ್​ ವಿದಾಯದ ಮಾತುಗಳು ಇಲ್ಲಿವೆ

"ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್ ಆಗಿ ಇಂದು ನನ್ನ ಕೊನೆಯ ದಿನ. ಒಬ್ಬ ಕ್ರಿಕೆಟಿಗನಾಗಿ ನನ್ನಲ್ಲಿ ಸ್ವಲ್ಪ ಕಸುವುದ ಉಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್​ನಲ್ಲಿ ಪ್ರದರ್ಶಿಸಲು ಬಯ,''ಸುತ್ತೇನೆ ಎಂದು ಮೊದಲಾಗಿ ಅವರು ಹೇಳಿದ್ದಾರೆ.

''ತಂಡದಲ್ಲಿ ನಾನು ಸಾಕಷ್ಟು ಖುಷಿ ಕಂಡಿದ್ದೇನೆ. ನಾಯಕ ರೋಹಿತ್ ಶರ್ಮಾ ಸೇರಿದಂತ ನನ್ನ ತಂಡದ ಹಲವಾರು ಆಟಗಾರರಗೊಂದಿಗೆ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಆದಾಗ್ಯೂ ಕಳೆದ ಕೆಲವು ವರ್ಷಗಳಲ್ಲಿ ಕೆಲವೊಂದನ್ನು ಕಳೆದುಕೊಂಡಿದ್ದೇನೆ. ನಾನಿನ್ನು ಡ್ರೆಸಿಂಗ್ ರೂಮ್​ನಿಂದ ಹೊರಗೆ ಉಳಿಯುತ್ತೇನೆ. ಈ ದಿನವನ್ನು ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊನೇ ದಿನವೆಂದು ಗುರುತಿಸುತ್ತೇನೆ ಎಂಬುದಾಗಿ ಅಶ್ವಿನ್ ಹೇಳಿದ್ದಾರೆ.

"ನಿಸ್ಸಂಶಯವಾಗಿ ಧನ್ಯವಾದ ಹೇಳಬೇಕಾದವರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಮೊದಲಾಗಿ ನಾನು ಬಿಸಿಸಿಐ ಮತ್ತು ಸಹ ಸಹ ಆಟಗಾರರಿಗೆ ಧನ್ಯವಾದ ಹೇಳದಿದ್ದರೆ ಕರ್ತವ್ಯ ಲೋಪ ಮಾಡಿದಂತೆ. ಅವರಲ್ಲಿ ಕೆಲವರನ್ನು ಹೆಸರಿಸಲು ನಾನು ಬಯಸುತ್ತೇನೆ. ಮುಖ್ಯವಾಗಿ, ರೋಹಿತ್, ವಿರಾಟ್ (ಕೊಹ್ಲಿ), ಅಜಿಂಕ್ಯ (ರಹಾನೆ), (ಚೇತೇಶ್ವರ) ಪೂಜಾರ. ಅವರು ಬ್ಯಾಟಿಂಗ್ ಜತೆಗೆ ಅದ್ಭುತ ಕ್ಯಾಚ್​ಗಳನ್ನು ಹಿಡಿದವರು. ನನ್ನ ಪ್ರಯಾಣದ ಭಾಗವಾಗಿರುವ ಎಲ್ಲಾ ತರಬೇತುದಾರರಿಗೆ ಆಭಾರಿ. ನಮ್ಮ ತೀವ್ರ ಪ್ರತಿಸ್ಪರ್ಧಿಗಳಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ದೊಡ್ಡ ಧನ್ಯವಾದಗಳು. ಅವರ ವಿರುದ್ಧ ಆಡುವುದು ನನಗೆ ಖುಷಿಯ ವಿಚಾರವಾಗಿತ್ತು,'' ಎಂದು ಹೇಳಿದ್ದಾರೆ.

"ನಿಜವಾಗಿಯೂ ಇದು ಅತ್ಯಂತ ಭಾವನಾತ್ಮಕ ಕ್ಷಣ.

"ಒಬ್ಬ ಕ್ರಿಕೆಟಿಗನಾಗಿ ನಾನು ಒಂದು ಪಂದ್ಯವನ್ನು ನಿಲ್ಲಿಸಿದ್ದೇನೆ. ಆದಾಗ್ಯೂ ಆಟವನ್ನು ನಾನು ಮುಂದುವರಿಸಬಹುದು. ಯಾಕೆಂದರೆ ನಾನು ಅತ್ಯಂತ ಇಷ್ಟಪಟ್ಟ ಕ್ರೀಡೆಯಿದು,'' ಎಂದು ಅಶ್ವಿನ್ ಮಾತು ಮುಗಿಸಿದ್ದಾರೆ.  

Tags:    

Similar News