Team India : ಪತ್ನಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುವ ಕ್ರಿಕೆಟಿಗರಿಗೆ ಕಠಿಣ ನಿಯಮ
Team India : ಕುಟುಂಬಗಳು ಅವರೊಂದಿಗೆ ದೀರ್ಘಕಾಲ ಇದ್ದರೆ ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.;
ಭಾರತ ತಂಡದ ಆಟಗಾರರು ವಿದೇಶಕ್ಕೆ ಆಡಲು ಹೋಗುವಾಗ ಪತ್ನಿಯರನ್ನು ಕರೆದುಕೊಂಡು ಹೋಗುವುದು ಮಾಮೂಲಿ. ಇದ ಅವರ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತದೆ ಎಂಬ ಅಭಿಪ್ರಾಯವಿದೆ. ಹೀಗಾಗಿ ಬಿಸಿಸಿಐ ಈ ವಿಚಾರದಲ್ಲಿ ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆಗಳಿವೆ. ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಕುಟುಂಬಗಳು ಅವರೊಂದಿಗೆ ದೀರ್ಘಕಾಲ ಇದ್ದರೆ ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನ ಮತ್ತು ಬಾರ್ಡರ್- ಗವಾಸ್ಕರ್ ಟ್ರೋಫಿ ಕಳೆದುಕೊಂಡಿರುವುದು ಈ ಅಭಿಪ್ರಾಯಗಳಿಗೆ ಕಾರಣವಾಗಿದೆ. ಇದು ದೀರ್ಘ ವಿದೇಶ ಪ್ರವಾಸದ ಸಮಯದಲ್ಲಿ ಆಟಗಾರರ ಹೆಂಡತಿಯರು ಮತ್ತು ಕುಟುಂಬಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.
ಹೊಸ ನಿಯಮ
ಪ್ರವಾಸದ ಸಮಯದಲ್ಲಿ ಕುಟುಂಬಗಳು ಆಟಗಾರರೊಂದಿಗೆ ಕಳೆಯುವ ಸಮಯವನ್ನು ಮಿತಿಗೊಳಿಸುವ 2019ಕ್ಕಿಂತ ಮೊದಲು ಜಾರಿಯಲ್ಲಿದ್ದ ನಿಯಮವನ್ನು ಮತ್ತೆ ಪರಿಚಯಿಸಲು ಮಂಡಳಿ ಉದ್ದೇಶಿಸಿದೆ. ಆಟಗಾರರು ಆಟದ ಮೇಲೆ ಸಂಪೂರ್ಣವಾಗಿ ಗಮನ ಹರಿಸುತ್ತಿಲ್ಲ ಅವರ ಕುಟುಂಬಗಳು ಅವರೊಂದಿಗೆ ದೀರ್ಘಕಾಲ ಇದ್ದರೆ ವಿದೇಶಿ ಪ್ರವಾಸಗಳಲ್ಲಿ ಅವರ ಕಾರ್ಯಕ್ಷಮತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ಹೊಸ ನಿಯಮದ ಪ್ರಕಾರ, 45 ದಿನಗಳಿಗಿಂತ ಹೆಚ್ಚು ಅವಧಿಯ ಪಂದ್ಯಾವಳಿ ಅಥವಾ ಸರಣಿಗೆ ಪತ್ನಿ ಅಥವಾ ಕುಟುಂಬವು ಆಟಗಾರನೊಂದಿಗೆ 14 ದಿನಗಳವರೆಗೆ ಮಾತ್ರ ಉಳಿಯಬಹುದು. ಕಡಿಮೆ ಅವಧಿಯ ಪ್ರವಾಸಗಳಿಗೆ, ವಾಸ್ತವ್ಯದ ಮಿತಿಯನ್ನು ಕೇವಲ ಏಳು ದಿನಗಳಿಗೆ ಇಳಿಸಲಾಗಿದೆ. ಪ್ರತಿಯೊಬ್ಬ ಆಟಗಾರನು ತಂಡದ ಇತರ ಸದಸ್ಯರೊಂದಿಗೆ ತಂಡದ ಬಸ್ ನಲ್ಲಿ ಪ್ರಯಾಣಿಸಬೇಕು ಎಂದು ಮಂಡಳಿಯು ಹೇಳಿದೆ.
ಗಂಭೀರ್ ಮ್ಯಾನೇಜರ್
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಮ್ಯಾನೇಜರ್ ಗೌರವ್ ಅರೋರಾ ಅವರಿಗೆ ತಂಡದ ಹೋಟೆಲ್‌ನಲ್ಲಿ ಉಳಿಯಲೂ ಅವಕಾಶ ನಿರಾಕರಿಸಲಾಗಿದೆ. ಕ್ರೀಡಾಂಗಣಗಳಲ್ಲಿ ವಿಐಪಿ ಬಾಕ್ಸ್‌ನಲ್ಲಿ ಕುಳಿತುಕೊಳ್ಳುವುದಕ್ಕೂ ಅನುಮತಿಸಲಾಗುವುದಿಲ್ಲ ಎಂದು ಮಂಡಳಿಯು ಕಡ್ಡಾಯಗೊಳಿಸಿದೆ.
ತಂಡದ ಬಸ್‌ನಲ್ಲಿ ಗಂಭೀರ್ ಅವರೊಂದಿಗೆ ಹೋಗಲು ಅವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ಸಹಾಯಕ ಸಿಬ್ಬಂದಿ
ತಂಡದ ಪ್ರದರ್ಶನವು ಕುಸಿಯಲು ಮತ್ತೊಂದು ಕಾರಣವೆಂದರೆ ಕೆಲವು ಸಹಾಯಕ ಸಿಬ್ಬಂದಿ ಸದಸ್ಯರ ಅವಧಿ. ಅವರು ದೀರ್ಘ ಕಾಲ ತಂಡದೊಂದಿಗೆ ಇರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಹೊಸ ಚಿಂತನೆ ಮೂಡಿ ಬರುತ್ತಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಬೇಕು ಎಂದು ಸೂಚಿಸಲಾಗಿದೆ.
ರೋಹಿತ್ ಮತ್ತು ಕೊಹ್ಲಿ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನವನ್ನು ಗಮನಿಸಿದರೆ, ಭಾರತೀಯ ಟೆಸ್ಟ್ ತಂಡದಲ್ಲಿ ಅವರ ಭವಿಷ್ಯದ ಬಗ್ಗೆಯೂ ಚರ್ಚಿಸಲಾಯಿತು.
ಮತ್ತೊಂದು ನಿರ್ಧಾರವೆಂದರೆ 150 ಕೆ.ಜಿ.ವರೆಗಿನ ಆಟಗಾರರ ಸಾಮಗ್ರಿಗಳಿಗೆ ಬಿಸಿಸಿಐ ಪಾವತಿಸುತ್ತದೆ. ಅದಕ್ಕಿಂತ ಹೆಚ್ಚಿನ ಯಾವುದೇ ವೆಚ್ಚವನ್ನು ಆಟಗಾರರು ಸ್ವತಃ ಭರಿಸಬೇಕಾಗುತ್ತದೆ ಎಂದು ನಿಯಮ ಜಾರಿಗೆ ತರಲಾಗಿದೆ.