ಪಾಕಿಸ್ತಾನದ ಜಾವೆಲಿನ್ ತಾರೆ ಒಲಿಂಪಿಯನ್​ ಅರ್ಷದ್ ನದೀಮ್‌ನ ಇನ್‌ಸ್ಟಾಗ್ರಾಮ್ ಖಾತೆ ಭಾರತದಲ್ಲಿ ಬಂದ್​!

ಭಾರತದ ಬಳಕೆದಾರರು ಅರ್ಷದ್ ನದೀಮ್‌ನ ಇನ್‌ಸ್ಟಾಗ್ರಾಮ್ ಪೇಜ್​ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, "ಭಾರತದಲ್ಲಿ ಖಾತೆ ಲಭ್ಯವಿಲ್ಲ' ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ.;

Update: 2025-05-01 08:32 GMT

ಅರ್ಷದ್ ನದೀಮ್​ (ಸಂಗ್ರಹ ಚಿತ್ರ)

ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‌ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಪ್ರಜೆಗಳ ಮೇಲೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರ್ಷದ್ ಖಾತೆಯನ್ನೂ ನಿಷೇಧ ಮಾಡಲಾಗಿದೆ.

ಭಾರತದ ಬಳಕೆದಾರರು ಅರ್ಷದ್ ನದೀಮ್‌ನ ಇನ್‌ಸ್ಟಾಗ್ರಾಮ್ ಪೇಜ್​ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, "ಭಾರತದಲ್ಲಿ ಖಾತೆ ಲಭ್ಯವಿಲ್ಲ' ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ.

ಪೆಹಲ್ಗಾಮ್ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನದ ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ, ಇವುಗಳು 'ಪ್ರಚೋದನಕಾರಿ ಮತ್ತು ಸಮುದಾಯ ಸೂಕ್ಷ್ಮ ವಿಷಯ, ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿಗಳು ಮತ್ತು ಭಾರತದ ಸೇನಾಪಡೆಯ ವಿರುದ್ಧ ಮಾಹಿತಿ ಹರಡುತ್ತಿವೆ' ಎಂದು ಆರೋಪಿಸಲಾಗಿದೆ. ಅದೇ ರೀತಿ ಪಾಕಿಸ್ತಾನದ ಸೆಲೆಬ್ರಿಟಿಗಳಾದ ನಟಿ ಮಾಹಿರಾ ಖಾನ್, ಹನಿಯಾ ಅಮೀರ್ ಮತ್ತು ಗಾಯಕ ಅಲಿ ಝಾಫರ್‌ನ ಇನ್‌ಸ್ಟಾಗ್ರಾಮ್ ಖಾತೆಗಳನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಆದರೆ, ಪಾಕಿಸ್ತಾನದ ಕ್ರಿಕೆಟಿಗರಾದ ಬಾಬರ್ ಆಜಮ್, ಮೊಹಮ್ಮದ್ ರಿಝ್ವಾನ್ ಮತ್ತು ಶಾಹಿದ್ ಆಫ್ರಿದಿಯಂತಹವರ ಇನ್‌ಸ್ಟಾಗ್ರಾಮ್ ಖಾತೆಗಳು ಇನ್ನೂ ಮುಕ್ತವಾಗಿವೆ.

ನೀರಜ್ ಚೋಪ್ರಾ ಗೆಳೆಯ ಅರ್ಷದ್​

ಅರ್ಷದ್ ನದೀಮ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾರನ್ನು ಮೀರಿಸಿ ಚಿನ್ನದ ಪದಕ ಗೆದ್ದಿದ್ದರು. ಅವರು 92.97 ಮೀಟರ್ ದೂರದ ಎಸೆತದೊಂದಿಗೆ ಒಲಿಂಪಿಕ್ ದಾಖಲೆ ನಿರ್ಮಿಸಿದ್ದರು. ಇದು ಜಾವೆಲಿನ್ ಎಸೆತದಲ್ಲಿ ಇತಿಹಾಸದಲ್ಲಿಯೇ ಆರನೇ ದೂರದ ಎಸೆತ. ಈ ಗೆಲುವು ಪಾಕಿಸ್ತಾನಕ್ಕೆ 40 ವರ್ಷಗಳ ನಂತರ ಮೊದಲ ಒಲಿಂಪಿಕ್ ಚಿನ್ನದ ಪದಕ ತಂದಿತ್ತು.

ಅರ್ಷದ್ ನದೀಮ್‌ನ ಸಾಧನೆಗಳು:

27 ವರ್ಷದ ಅರ್ಷದ್ ನದೀಮ್ ಪಾಕಿಸ್ತಾನದ ಮಿಯಾನ್ ಚನ್ನು ಎಂಬ ಸಣ್ಣ ಪಟ್ಟಣದವರು. ಅವರ ತಂದೆ, ಒಬ್ಬ ಸಾಮಾನ್ಯ ಕೂಲಿಕಾರ್ಮಿಕರಾಗಿದ್ದರೂ, ಅರ್ಷದ್‌ಗೆ ಕ್ರೀಡೆಯಲ್ಲಿ ಯಶಸ್ಸು ಗಳಿಸಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು, ಪಾಕಿಸ್ತಾನದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಅವರು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90.18 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ ಗೆದ್ದಿದ್ದರು ಮತ್ತು 2023 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Tags:    

Similar News