WPL CUP | ಆರ್‌ಸಿಬಿ ಹುಡುಗರ ಬೆನ್ನು ಬಿದ್ದ ಟ್ರೋಲರ್ಸ್

ಆರ್‌ಸಿಬಿ ಪುರುಷರ ತಂಡಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದ್ದು, ಹುಡುಗಿಯರೇ ಸ್ಟ್ರಾಂಗ್ ಎನ್ನುವ ರೀತಿಯಲ್ಲಿ ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.;

Update: 2024-03-19 11:59 GMT
ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.
Click the Play button to listen to article

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಡ್ಲ್ಯೂಪಿಎಲ್‌ ( Women's Premier League) ಪಂದ್ಯದಲ್ಲಿ ಟ್ರೋಫಿಯನ್ನು ಗೆದ್ದು ಬೀಗಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ ತಮ್ಮ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಆರ್‌ಸಿಬಿ ಪುರುಷರ ತಂಡ ಕಳೆದ 16 ವರ್ಷಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದ್ರೆ, ಸ್ಮೃತಿ ಮಂದಾನ ನೇತೃತ್ಬದ ತಂಡ ಕೇವಲ ಎರಡೇ ವರ್ಷಗಳಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಕೊನೆಗೂ ಆರ್‌ಸಿಬಿ ಅಭಿಮಾನಿಗಳ ಕಪ್‌ ಗೆಲ್ಲುವ ಕನಸನ್ನು ಆರ್‌ಸಿಬಿ ವನಿತೆಯರು ನನಸು ಮಾಡಿದ್ದಾರೆ. 

ಡಿಸೈನ್ ಡಿಸೈನ್ ಟ್ರೋಲ್‌

ಆರ್‌ಸಿಬಿ ಪುರುಷರ ತಂಡವು ಈ ಹಿಂದೆ ಮೂರು ಬಾರಿ ಐಪಿಎಲ್‌ನ ಫೈನಲ್‌ಗೆ ತಲುಪಿದೆ. ಆದರೆ ಕಪ್‌ ಗೆಲ್ಲುವಲ್ಲಿ ಮಾತ್ರ ವಿಫಲವಾಗಿದೆ. ಆರ್‌ಸಿಬಿ ಹುಡುಗರ ಟೀಂ ಮಾತ್ರ ಕಳೆದ 16 ವರ್ಷದಿಂದ ಕಪ್ ಗೆದ್ದಿಲ್ಲ. ಹೀಗಿದ್ದಾಗ ಈಗ ಆರ್‌ಸಿಬಿ ಹುಡುಗರ ತಂಡಕ್ಕೆ ಸಿಕ್ಕಾಪಟ್ಟೆ ಟ್ರೋಲರ್ಸ್ ಕಾಟ ಶುರುವಾಗಿದೆ. ಡಿಸೈನ್ ಡಿಸೈನ್ ಟ್ರೋಲ್ ಮಾಡುತ್ತಿರುವ ಟ್ರೋಲಿಗರು, ಹುಡುಗಿಯರೇ ಸ್ಟ್ರಾಂಗ್ ಎನ್ನುವ ರೀತಿಯಲ್ಲಿ ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪುರುಷರ ತಂಡ ಕಪ್‌ ಗೆಲ್ಲುತ್ತ? 

ಇದೇ ಮಾರ್ಚ್‌ 22ರಂದು ಐಪಿಎಲ್‌ ಪಂದ್ಯ ಆರಂಭಗೊಳ್ಳಲಿದೆ. ಆರ್‌ಸಿಬಿ ತಂಡ ಕೂಡ ಟೂರ್ನಿಗೆ ಸಜ್ಜಾಗಿದ್ದಾರೆ. ಈ ಬಾರಿಯಾದರೂ ಆರ್‌ಸಿಬಿ ಮಹಿಳಾಮಣಿಗಳು ಅಬ್ಬರಿಸಿ ಕಪ್‌ ಗೆದ್ದ ಹಾಗೇ ಪುರುಷರ ತಂಡ ಕಪ್‌ ಗೆಲ್ಲುತ್ತಾರಾ? ಎನ್ನುವುದು ಆರ್‌ಸಿಬಿ ಫ್ಯಾನ್ಸ್‌ ಪ್ರಶ್ನೆಯಾಗಿದೆ.

ಆರ್‌ಸಿಬಿ ಹುಡುಗಿಯರ ತಂಡದ ರೀತಿಯಲ್ಲೇ ಹುಡುಗರು ಕೂಡ ಕಪ್ ಗೆಲ್ಲಲಿ. ಈ ಮೂಲಕ ಕನ್ನಡಿಗರ 16 ವರ್ಷದ ಆಸೆಯನ್ನು ಆರ್‌ಸಿಬಿ ತಂಡವು ಪೂರೈಸಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಸೆ.

Tags:    

Similar News