ರವೀಂದ್ರ ಜಡೇಜಾ: 300 ವಿಕೆಟ್‌, 3000 ರನ್‌ ಸಾಧನೆ

ಜಡೇಜಾ ತಮ್ಮ 74 ನೇ ಪಂದ್ಯದಲ್ಲಿ ಇಂಗ್ಲೆಂಡಿನ ಆಟಗಾರ ಇಯಾನ್ ಬೋಥಮ್ ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಮತ್ತು 3000 ರನ್‌ ವೇಗವಾಗಿ ಪೂರ್ಣಗೊಳಿಸಿದ ಎರಡನೇ ಆಟಗಾರರಾದರು.;

Update: 2024-09-30 08:42 GMT

ಕಾನ್ಪುರ: ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ಖಲೀದ್ ಮಹಮೂದ್ ಅವರನ್ನು ಪೆವಿಲಿಯನ್‌ಗೆ ಕಳಿಸಿದ ರವೀಂದ್ರ ಜಡೇಜಾ, 300 ಟೆಸ್ಟ್ ವಿಕೆಟ್‌ ಪಡೆದ ಏಳನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು.

ಜಡೇಜಾ ಅವರು ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ ನ್ನು ಮಹಮ್ಮದ್ ಅವರ ವಿಕೆಟ್‌ ಪಡೆದು ಅಂತ್ಯಗೊಳಿಸಿದರು. ಊಟದ ವಿರಾಮದ ಸ್ವಲ್ಪ ಕಾಲದ ಬಳಿಕ ಬಾಂಗ್ಲಾದೇಶ 233 ರನ್‌ಗಳಿಗೆ ಆಲೌಟ್ ಆಯಿತು. 

300 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ ಗಳಿಸಿರುವ ಇತರ ಭಾರತೀಯ ಬೌಲರ್‌ಗಳೆಂದರೆ, ಅನಿಲ್ ಕುಂಬ್ಳೆ (619), ಆರ್. ಅಶ್ವಿನ್ (524), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311) ಮತ್ತು ಜಹೀರ್ ಖಾನ್ (311). 

ಜಡೇಜಾ ತಮ್ಮ 74 ನೇ ಪಂದ್ಯದಲ್ಲಿ ಇಂಗ್ಲೆಂಡಿನ ಆಟಗಾರ ಇಯಾನ್ ಬೋಥಮ್  ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಮತ್ತು 3000 ರನ್‌ ವೇಗವಾಗಿ ಪೂರ್ಣಗೊಳಿಸಿದ ಎರಡನೇ ಆಟಗಾರರಾದರು. 

Tags:    

Similar News