ಬಿಡುಗಡೆಯಾಗಿ ತಿಂಗಳಲ್ಲೇ ಓಟಿಟಿಗೆ ಬಂತು ʼಯುವʼ

ಯುವ ಸಿನಿಮಾ ಬಿಡುಗಡೆಯಾದ 22 ದಿನಕ್ಕೆ ಒಟಿಟಿಗೆ ಬಂದಿದ್ದು, ಯುವ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ.

Update: 2024-04-20 12:09 GMT
ಯುವ ಸಿನಿಮಾ
Click the Play button to listen to article

ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ʼಯುವʼ ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಈ ನಡುವೆ,  ಇದೇ ಸಿನಿಮಾ ಒಟಿಟಿ ಕಡೆ ಆಗಮಿಸಿದೆ.

ಯುವ ಸಿನಿಮಾ ಬಿಡುಗಡೆಯಾದ 22 ದಿನಕ್ಕೆ ಒಟಿಟಿಗೆ ಬಂದಿದ್ದು, ಯುವ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ. ಅದರಂತೆ ಶುಕ್ರವಾರದಿಂದಲೇ ಅಮೆಜಾನ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಆದರೆ, ಈ ಸಿನಿಮಾ ಸದ್ಯ ಎಲ್ಲರಿಗೂ ವೀಕ್ಷಣೆಗೆ ಲಭ್ಯವಿಲ್ಲ. ಬದಲಿಗೆ ಪ್ರೈಂನಲ್ಲೂ ಹಣ ಪಾವತಿಸಿ ಸಿನಿಮಾ ನೋಡಬೇಕಿದೆ. ಬರೋಬ್ಬರಿ 349 ರೂಪಾಯಿ ನೀಡಿ ಸಿನಿಮಾ ವೀಕ್ಷಿಸಬಹುದಾಗಿದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದರೆ, ಶ್ರೀಶಾ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂತೋಷ್ ಆನಂದ್‌ರಾಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್‌ ಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

Tags:    

Similar News