'ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್' ಟೀಸರ್ ಬಿಡುಗಡೆ

‘ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್’ ಚಿತ್ರವು ಗೋವಾದಲ್ಲಿ ನಡೆದ 56 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ವಿಶ್ವ ಪ್ರಥಮ ಪ್ರದರ್ಶನವನ್ನು ಕಂಡಿದೆ.

Update: 2025-11-27 07:29 GMT

ನವಾಜುದ್ದೀನ್ ಸಿದ್ದಿಕಿ ಹೊಸ ರಹಸ್ಯ ತನಿಖೆಯಲ್ಲಿ

Click the Play button to listen to article

ನವಾಜುದ್ದೀನ್ ಸಿದ್ದಿಕಿ ನಟನೆಯ ನೆಟ್‌ಫ್ಲಿಕ್ಸ್‌ನ ‘ರಾತ್ ಅಕೇಲಿ ಹೈ’ ಚಿತ್ರದ ಮುಂದುವರಿದ ಭಾಗ ‘ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಇನ್‌ಸ್ಪೆಕ್ಟರ್‌ ಜಟಿಲ್ ಯಾದವ್ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತೆ ತೆರೆ ಮೇಲೆ ಬಂದಿದ್ದಾರೆ. ಇನ್‌ಸ್ಪೆಕ್ಟರ್‌ ಜಟಿಲ್ ಯಾದವ್ ಮತ್ತೊಂದು ರಹಸ್ಯ ಪ್ರಕರಣವನ್ನು ಭೇದಿಸುವುದು ಇದರಲ್ಲಿದೆ. ನವಾಜ್ ಜೊತೆಗೆ, ರಾಧಿಕಾ ಆಪ್ಟೆ ಕೂಡ ರಾಧಾ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್, ರಜತ್ ಕಪೂರ್, ರೇವತಿ, ದೀಪ್ತಿ ನಾವಲ್ ಮತ್ತು ಸಂಜಯ್ ಕಪೂರ್ ಕೂಡ ಇದ್ದಾರೆ.

ಟೀಸರ್ ಒಂದು ಧ್ವನಿಯೊಂದಿಗೆ ಆರಂಭವಾಗುತ್ತದೆ. ಅದು ಬನ್ಸಾಲ್ ಕುಟುಂಬದ ಕೊಲೆ ಪ್ರಕರಣದ ವಿವರಗಳನ್ನು ಹಂಚಿಕೊಳ್ಳುತ್ತದೆ. ಇಡೀ ಕುಟುಂಬವನ್ನು ಒಂದೇ ರಾತ್ರಿಯಲ್ಲಿ ಹೇಗೆ ಕೊಲ್ಲಲಾಯಿತು ಎಂದು ಬಹಿರಂಗಪಡಿಸುತ್ತದೆ. ಈ ಪ್ರಕರಣದ ತನಿಖೆಯು ಜಟಿಲ್ ಯಾದವ್‌ ಹೆಗಲಿಗೆ ಬೀಳಲಿದೆ. ಟೀಸರ್‌ ದೃಶ್ಯಗಳಲ್ಲಿ ಧಾರ್ಮಿಕ ಗುಂಪು ಪ್ರಾರ್ಥನೆ  ಮಾಡುವುದು ಇದೆ.  ಕೊಲೆಯಾದ ರಾತ್ರಿ ಮನೆಯಲ್ಲಿ ಇದ್ದಂತೆ ಕಾಣುವ ಚಿತ್ರಾಂಗದಾ ಸಿಂಗ್, ಎಲ್ಲಾ ಪೊಲೀಸ್ ಪ್ರಶ್ನೆಗಳಿಗೆ ಉತ್ತರಿಸಲು ಒಪ್ಪಿಕೊಳ್ಳುತ್ತಾರೆ. ಈ ಮಧ್ಯೆ, ಸಂಜಯ್ ಕಪೂರ್ ನವಾಜ್ ಅವರಿಗೆ ಮನೆಯೊಳಗೆ ನೋಡಿ ಎಂದು ಕೇಳುತ್ತಾರೆ. ನವಾಜ್ ಅವರಿಗೆ ಪ್ರಕರಣದೊಳಗೆ ಆಳವಾಗಿ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತದೆ. ರಾಧಿಕಾ ಇದನ್ನು ಭೀಕರ ಪ್ರಕರಣ ಎಂದು ಕರೆಯುತ್ತಾರೆ. ಆದರೆ ಬನ್ಸಾಲ್ ಕುಟುಂಬದ ಉಳಿದ ಸದಸ್ಯರು ರಹಸ್ಯಗಳನ್ನು ಮರೆಮಾಡುತ್ತಿದ್ದಾರೆ ಎಂದು ಟೀಸರ್‌ನಲ್ಲಿ ತೋರಿಸಲಾಗಿದೆ. 

Full View

‘ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್’ ಚಿತ್ರವು ಗೋವಾದಲ್ಲಿ ನಡೆದ 56 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ತನ್ನ ವಿಶ್ವ ಪ್ರಥಮ ಪ್ರದರ್ಶನವನ್ನು ಕಂಡಿದೆ. ಹಿಂದಿನ ಚಿತ್ರದಂತೆಯೇ, 'ರಾತ್ ಅಕೇಲಿ ಹೈ' ಮುಂದುವರಿದ ಭಾಗವನ್ನು ಸಹ ಹನಿ ಟ್ರೆಹಾನ್ ನಿರ್ದೇಶಿಸಿದ್ದಾರೆ. ಇದು ಡಿಸೆಂಬರ್ 19 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಳ್ಳಲಿದೆ. 

ಇತ್ತೀಚೆಗೆ ಸಂವಾದದಲ್ಲಿ, ಚಿತ್ರಕಥೆಗಾರ್ತಿ ಸ್ಮಿತಾ ಸಿಂಗ್ ಅವರು ಮುಂದುವರಿದ ಭಾಗದ ವಿವರಗಳನ್ನು ಹಂಚಿಕೊಂಡಿದ್ದರು. ಮೂಲ ಚಿತ್ರವು ಒಂದು ಕುಟುಂಬ ಮತ್ತು ಒಂದು ಸಣ್ಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಒಂದು ಪ್ರಕರಣವನ್ನು ತನಿಖೆ ಮಾಡುವ ಬಗ್ಗೆ ಇತ್ತು. ಆದರೆ ಈ ಬಾರಿ ಅಪಾಯಗಳು ಹೆಚ್ಚು. ಈ ಬಾರಿ ರಾಜಕೀಯವು ಹೆಚ್ಚು ಆಳವಾಗಿದೆ ಎಂದಿದ್ದರು.   ನಿರ್ದೇಶಕ ಹನಿ ಟ್ರೆಹಾನ್ ಅವರು ಮೊದಲ ಚಿತ್ರವನ್ನು ಅನೇಕರು ನಿಧಾನಗತಿ ಎಂದು ಕರೆದಿದ್ದರಿಂದ ಮುಂದುವರಿದ ಭಾಗವನ್ನು ವೇಗವಾಗಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದರು. 

Tags:    

Similar News