ನಟ ಅಜಿತ್ ಕುಮಾರ್‌ಗೆ 'ಜೆಂಟಲ್‌ಮನ್ ಡ್ರೈವರ್ ಆಫ್ ದಿ ಇಯರ್ 2025' ಪ್ರಶಸ್ತಿ
ಮೋಟಾರ್ ರೇಸಿಂಗ್ ಮೇಲಿನ ಅಜಿತ್ ಅವರ ಒಲವು ಯಾರಿಂದಲೂ ಗುಟ್ಟಾಗಿ ಉಳಿದಿಲ್ಲ. ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಟ್ರ್ಯಾಕ್ ಮೇಲೆ ತಮ್ಮ ಕೌಶಲ್ಯ ಮತ್ತು ಸಂಕಲ್ಪವನ್ನು ನಿರಂತರವಾಗಿ ಸಾಬೀತುಪಡಿಸಿದ್ದಾರೆ.
ಅಜಿತ್ ಕುಮಾರ್
ಭಾರತೀಯ ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರು ಮತ್ತೊಮ್ಮೆ ಸಿನಿಮಾದಾಚೆಗಿನ ಸಾಧನೆಯಿಂದ ಸುದ್ದಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ 'ಪದ್ಮಭೂಷಣ' ಪ್ರಶಸ್ತಿ ಪುರಸ್ಕೃತರಾಗಿದ್ದ ನಟ ಅಜಿತ್ ಅವರಿಗೆ ಈಗ ಇಟಲಿಯ ವೆನಿಸ್‌ನಲ್ಲಿ ಫಿಲಿಪ್ ಚಾರ್ರಿಯೊಲ್ ಮೋಟಾರ್‌ಸ್ಪೋರ್ಟ್ ಗ್ರೂಪ್‌ನಿಂದ 'ಜೆಂಟಲ್‌ಮನ್ ಡ್ರೈವರ್ ಆಫ್ ದಿ ಇಯರ್ 2025' ಎಂಬ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
ಮೋಟಾರ್ ರೇಸಿಂಗ್ ಮೇಲಿನ ಅಜಿತ್ ಅವರ ಒಲವು ಯಾರಿಂದಲೂ ಗುಟ್ಟಾಗಿ ಉಳಿದಿಲ್ಲ. ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಟ್ರ್ಯಾಕ್ ಮೇಲೆ ತಮ್ಮ ಕೌಶಲ್ಯ ಮತ್ತು ಸಂಕಲ್ಪವನ್ನು ನಿರಂತರವಾಗಿ ಸಾಬೀತುಪಡಿಸಿದ್ದಾರೆ. ಈ ಇತ್ತೀಚಿನ ಗೌರವವು, ಅವರು ಭಾರತೀಯ ಚಿತ್ರರಂಗದ ಪ್ರಮುಖ ವ್ಯಕ್ತಿ ಮಾತ್ರವಲ್ಲದೆ, ಗೌರವಾನ್ವಿತ ಮೋಟಾರ್‌ಸ್ಪೋರ್ಟ್ ಉತ್ಸಾಹಿಯೂ ಹೌದು ಎಂಬುದನ್ನು ಎತ್ತಿ ತೋರಿಸುತ್ತದೆ.
ಪತ್ನಿ ಶಾಲಿನಿಯಿಂದ ಫೋಟೋ ವೈರಲ್ ಪ್ರಶಸ್ತಿ ಪ್ರದಾನ ಸಮಾರಂಭವು ವಿಶ್ವಾದ್ಯಂತ ಅವರ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿತ್ತು. ನಟನ ಪತ್ನಿ ಶಾಲಿನಿ ಅವರು ಕಾರ್ಯಕ್ರಮದ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಗೌರವವು ತೆರೆ ಮೇಲೆ ಮತ್ತು ಆಚೆಗಿನ ಅಜಿತ್ ಅವರ ಸಮರ್ಪಣೆಗೆ ಸೂಕ್ತ ಗೌರವ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತ, ಚಿತ್ರರಂಗದಲ್ಲಿ ಅಜಿತ್ ಅವರು ನಿರ್ದೇಶಕ ಅಧಿಕ್ ರವಿಚಂದ್ರನ್ ಅವರೊಂದಿಗೆ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಧಿಕೃತ ವಿವರಗಳು ಇನ್ನೂ ಗೌಪ್ಯವಾಗಿದ್ದರೂ, ತೆರೆಗೆ ಮರಳಲಿರುವ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.