Jharkhand Assembly polls: ʼಎನ್‌ಡಿಎʼಯ ಕೊನೇ ಹಂತದ ಪ್ರಯತ್ನ ಮೀರಿ ಮುನ್ನಡೆ ಸಾಧಿಸಿದ ʼಇಂಡಿಯಾʼ

Jharkhand Assembly polls ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬೆಳಿಗ್ಗೆ 10.15 ರವರೆಗೆ 81 ಸ್ಥಾನಗಳ ಪೈಕಿ 73 ಸ್ಥಾನಗಳ ಮಾಹಿತಿ ದೊರಕಿತ್ತು. ಇಂಡಿಯಾ 46, ಎನ್‌ಡಿಎ 29, ಸ್ವತಂತ್ರ ಮತ್ತು ಜೆಕೆಎಲ್ಎಂ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು

Update: 2024-11-23 06:35 GMT
Hemant Soren

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ, ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಸ್ಥಾನಗಳಲ್ಲಿ (Jharkhand Assembly polls) ಜಾರ್ಖಂಡ್‌ ಮುಕ್ತಿ ಮೋರ್ಚಾ ಎನ್‌ಡಿಎ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.



ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬೆಳಿಗ್ಗೆ 10.15 ರವರೆಗೆ 81 ಸ್ಥಾನಗಳ ಪೈಕಿ 73 ಸ್ಥಾನಗಳ ಮಾಹಿತಿ ದೊರಕಿತ್ತು. ಇಂಡಿಯಾ 46, ಎನ್‌ಡಿಎ 29, ಸ್ವತಂತ್ರ ಮತ್ತು ಜೆಕೆಎಲ್ಎಂ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು.

ಹೇಮಂತ್ ಸೊರೆನ್ ಮುನ್ನಡೆ

ಮೊದಲ ಸುತ್ತಿನ ಎಣಿಕೆಯ ನಂತರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬರ್ಹೈತ್ ವಿಧಾನಸಭಾ ಕ್ಷೇತ್ರದಲ್ಲಿ 2,812 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಎನ್‌ಡಿಎ ಮಿತ್ರಪಕ್ಷ ಎಜೆಎಸ್ಯು ಪಕ್ಷದ ಮುಖ್ಯಸ್ಥ ಸುದೇಶ್ ಮಹತೋ ಅವರು ಎರಡನೇ ಸುತ್ತಿನ ಎಣಿಕೆಯ ನಂತರ ಸಿಲ್ಲಿಯಲ್ಲಿ ಜೆಎಂಎಂನ ಅಮಿತ್ ಕುಮಾರ್ ವಿರುದ್ಧ 3,998 ಮತಗಳಿಂದ ಹಿಂದುಳಿದಿದ್ದಾರೆ.

ಜಗನ್ನಾಥಪುರದಲ್ಲಿ ಮಾಜಿ ಸಂಸದೆ ಮತ್ತು ಬಿಜೆಪಿ ಅಭ್ಯರ್ಥಿ ಗೀತಾ ಕೋರಾ ಅವರು ಕಾಂಗ್ರೆಸ್‌ನ ಸೋನಾರಾಮ್ ಸಿಂಕು ವಿರುದ್ಧ 1,790 ಮತಗಳಿಂದ ಹಿಂದುಳಿದಿದ್ದಾರೆ. ಖುಂಟಿಯಲ್ಲಿ ಜೆಎಂಎಂನ ರಾಮಸೂರ್ಯ ಮುಂಡಾ ಅವರು ಬಿಜೆಪಿಯ ನೀಲಕಂಠ ಸಿಂಗ್ ಮುಂಡಾ ವಿರುದ್ಧ 1,448 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಮಾಜಿ ಸಿಎಂ ಮತ್ತು ಬಿಜೆಪಿ ಅಭ್ಯರ್ಥಿ ಚಂಪೈ ಸೊರೆನ್ ಸೆರೈಕೆಲಾದಲ್ಲಿ ಜೆಎಂಎಂನ ಗಣೇಶ್ ಮಹ್ಲಿ ವಿರುದ್ಧ 2,986 ಮತಗಳಿಂದ ಹಿಂದುಳಿದಿದ್ದಾರೆ. ಬೆರ್ಮೊದಲ್ಲಿ ಕಾಂಗ್ರೆಸ್ ನ ಕುಮಾರ್ ಜೈಮಂಗಲ್ ಸಿಂಗ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರವೀಂದ್ರ ಪಾಂಡೆ ವಿರುದ್ಧ 3,610 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಎರಡನೇ ಸುತ್ತಿನ ಮತ ಎಣಿಕೆಯ ನಂತರ ಕಾಂಗ್ರೆಸ್ ಸಚಿವ ರಾಮೇಶ್ವರ್ ಒರಾನ್ ಅವರು ಎಜೆಎಸ್ಯು ಪಕ್ಷದ ನಿರು ಶಾಂತಿ ಭಗತ್ ವಿರುದ್ಧ 1,841 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೊಲೆಬಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಮನ್ ಬಿಕ್ಸಲ್ ಕೊಂಗಾರಿ ಇತರರಿಗಿಂತ ಮುಂದಿದ್ದಾರೆ.

ಸಿಮ್ಡೇಗಾದಲ್ಲಿ ಬಿಜೆಪಿ ಅಭ್ಯರ್ಥಿ ಶ್ರದ್ಧಾನಂದ್ ಬೆಸ್ರಾ ಮುನ್ನಡೆ ಸಾಧಿಸಿದ್ದಾರೆ. ಗರ್ಹ್ವಾದಲ್ಲಿ ಬಿಜೆಪಿಯ ಸತ್ಯೇಂದ್ರ ನಾಥ್ ತಿವಾರಿ ಅವರು ತಮ್ಮ ಪ್ರತಿಸ್ಪರ್ಧಿ ಜೆಎಂಎಂನ ಮಿಥಿಲೇಶ್ ಕುಮಾರ್ ಥರ್ಕೂರ್ ವಿರುದ್ಧ 190 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕೊಡೆರ್ಮಾದಲ್ಲಿ ಆರ್ಜೆಡಿಯ ಸುಭಾಷ್ ಯಾದವ್ ಬಿಜೆಪಿಯ ನೀರಾ ಯಾದವ್ ವಿರುದ್ಧ 1,481 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಛತ್ರಾದಲ್ಲಿ ಆರ್ಜೆಡಿಯ ರಶ್ಮಿ ಪ್ರಕಾಶ್ 988 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕಣದಲ್ಲಿ 1,211 ಅಭ್ಯರ್ಥಿಗಳು

ಬರ್ಹೈತ್‌ನಿಂದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಗಂಡೆಯಿಂದ ಅವರ ಪತ್ನಿ ಕಲ್ಪನಾ, ಧನ್ವಾರ್‌ನಿಂದ ಮಾಜಿ ಸಿಎಂ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಾಬುಲಾಲ್ ಮರಾಂಡಿ ಮತ್ತು ಸೆರೈಕೆಲಾದಿಂದ ಮಾಜಿ ಸಿಎಂ ಚಂಪೈ ಸೊರೆನ್ ಸೇರಿದಂತೆ ಒಟ್ಟು 1,211 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಈ ಫಲಿತಾಂಶ ನಿರ್ಧರಿಸಲಿವೆ.

ನಲಾದಿಂದ ಜೆಎಂಎಂನ ಸ್ಪೀಕರ್ ರವೀಂದ್ರ ನಾಥ್ ಮಹತೋ, ಮಹಾಗಾಮಾದಿಂದ ಕಾಂಗ್ರೆಸ್‌ನ ದೀಪಿಕಾ ಪಾಂಡೆ ಸಿಂಗ್, ಜಮ್ತಾರಾದಿಂದ ಸೀತಾ ಸೊರೆನ್ (ಸಿಎಂ ಹೇಮಂತ್ ಸೊರೆನ್ ಅವರ ಅತ್ತಿಗೆ) ಮತ್ತು ಸಿಲ್ಲಿಯಿಂದ ಎಜೆಎಸ್ಯು ಪಕ್ಷದ ಮುಖ್ಯಸ್ಥ ಸುದೇಶ್ ಮಹತೋ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಮತ ಎಣಿಕೆ ನಡೆಯುತ್ತಿದ್ದು, ಸಂಜೆ 4 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ತಿಳಿಸಿದ್ದಾರೆ.

2000ನೇ ಇಸವಿಯ ನವೆಂಬರ್ 15ರಂದು ಜಾರ್ಖಂಡ್ ರಾಜ್ಯ ರಚನೆಯಾದ ಬಳಿಕ ಅತಿ ಹೆಚ್ಚು ಅಂದರೆ ಶೇ.67.74ರಷ್ಟು ಮತದಾನವಾಗಿದೆ.

ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೊದಲ ಸುತ್ತಿನಲ್ಲಿ ನಲವತ್ತಮೂರು ಸ್ಥಾನಗಳಿಗೆ ಮತ್ತು ಎರಡನೇ ಸುತ್ತಿನಲ್ಲಿ ೩೮ ಸ್ಥಾನಗಳಿಗೆ ಮತದಾನ ನಡೆಯಿತು. 

Tags:    

Similar News