White topped in Bengaluru | ಚಿಕ್ಕಪೇಟೆ ವೈಟ್‌ಟಾಪಿಂಗ್; ಸಾರ್ವಜನಿಕರಿಗೆ ಸಂಕಷ್ಟ | Road Problem | BBMP
ಬೆಂಗಳೂರು ಮಹಾನಗರ ಪಾಲಿಕೆ (BBMP) ವೈಟ್‌ಟಾಪಿಂಗ್ ಕಾಮಗಾರಿ ಪ್ರಾರಂಭಿಸಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ಇರುವುದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಅಂಗಡಿಗಳ ಮಾಲೀಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಚಿಕ್ಕಪೇಟೆಯೂ ಒಂದಾಗಿದ್ದು, ಈ ಭಾಗದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಹಲವು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದೀಗ ಈ ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದು ರಸ್ತೆ ಬದಿಯಲ್ಲಿಯೇ ಎರಡೂ ಮಾರ್ಗದ ವಾಹನ ಸವಾರರು ಹಾಗೂ ಜನ ಸಂಚರಿಸುತ್ತಿದ್ದಾರೆ. ಅಸಮರ್ಪಕ ಕಾಮಗಾರಿಯಿಂದ ಜನ ಹೈರಾಣಾಗಿದ್ದಾರೆ.;
By : Keerthik
Update: 2024-06-06 07:54 GMT