Parliament Session | ಚಳಿಗಾಲದ ಅಧಿವೇಶನ ಆರಂಭ; ಅದಾನಿ ವಿಷಯ ಚರ್ಚೆಗೆ ಕಾಂಗ್ರೆಸ್ ಪಟ್ಟು

ಅಧಿವೇಶನದಲ್ಲಿ ಯಾವ ವಿಷಯ ಕುರಿತು ಚರ್ಚೆ ನಡೆಸಬೇಕು ಎಂಬ ಕಲಾಪ ಸಲಹಾ ಸಮಿತಿಯು ಕಾರ್ಯಸೂಚಿ ಪ್ರಕಾರ ನಿರ್ಧರಿಸಲಿದೆ. ಅಧಿವೇಶನ ಸುಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕರಿಸಬೇಕು’ ಎಂದು ಸಚಿವ ರಿಜಿಜು ಕೋರಿದ್ದಾರೆ.

Update: 2024-11-25 06:30 GMT
ಸಂಸತ್‌ ಅಧಿವೇಶನ

ಸಂಸತ್‌ ಚಳಿಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಮಣಿಪುರ ಗಲಭೆ , ಅದಾನಿ ಸಮೂಹದ ವಿರುದ್ಧದ ಆರೋಪಗಳು ಹಾಗೂ ವಾಯುಮಾಲಿನ್ಯ ಕುರಿತು ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಪ್ರತಿಪಕ್ಷಗಳು ಮುಂದಿಟ್ಟಿದೆ. ಸೋಮವಾರ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಚರ್ಚೆಗಳಿಗೆ ಸಾಕ್ಷಿಯಾಗಲಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಈ ಬೇಡಿಕೆ ಮಂಡಿಸಿದ್ದಾರೆ.

ಬೇಡಿಕೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ಅಧಿವೇಶನದಲ್ಲಿ ಯಾವ ವಿಷಯ ಕುರಿತು ಚರ್ಚೆ ನಡೆಸಬೇಕು ಎಂಬ ಕಲಾಪ ಸಲಹಾ ಸಮಿತಿಯು ಕಾರ್ಯಸೂಚಿ ಪ್ರಕಾರ ನಿರ್ಧರಿಸಲಿದೆ. ಅಧಿವೇಶನ ಸುಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕರಿಸಬೇಕು’ ಎಂದು ಕೋರಿದರು.

ಕಾಂಗ್ರೆಸ್‌ ಸಂಸದ ಪ್ರಮೋದ್‌ ತಿವಾರಿ, ‘ಗೌತಮ್‌ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಹೊರಿಸಿರುವ ಲಂಚದ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಅಧಿವೇಶನಕ್ಕೂ ಮುಂಚೆಯೇ ಪಕ್ಷವು ಸರ್ಕಾರವನ್ನು ಒತ್ತಾಯಿಸಿತ್ತು’ ಎಂದು ಹೇಳಿದರು.

‘ಮಣಿಪುರದಲ್ಲಿ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗುತ್ತಿದೆ. ಅಲ್ಲಿನ ಸಮಸ್ಯೆ ಬಗೆಹರಿಸಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ‘ವಿಭಜಿಸು ಹಾಗೂ ಕೊಲ್ಲು’ ಎಂಬುದು ಈ ಸರ್ಕಾರದ ಮಂತ್ರವಾಗಿದೆ’ ಎಂದ ಅವರು, ಮಣಿಪುರ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ಧೇವೆ ಎಂದರು.

ಸಚಿವ ರಿಜಿಜು ಮಾತನಾಡಿ, ‘ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾ ಸಭಾಪತಿ ಅವರ ಅನುಮತಿಯೊಂದಿಗೆ ಯಾವ ವಿಷಯಗಳ ಕುರಿತು ಚರ್ಚೆ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಕಲಾಪ ಸಲಹಾ ಸಮಿತಿ ತೀರ್ಮಾನಿಸಲಿದೆ’ ಎಂದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕಾನೂನು ಸಚಿವ ಅರ್ಜುನ್‌ ಮೇಘವಾಲ್, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್, ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯರಾದ ಜೈರಾಮ್‌ ರಮೇಶ್, ಲೋಕಸಭಾ ಸದಸ್ಯರಾದ ಗೌರವ್‌ ಗೊಗೋಯಿ, ಕೆ.ಸುರೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಿಎಂಸಿ ಸದಸ್ಯರು ಗೈರಾಗಿದ್ದರೆ

Tags:    

Similar News