Wayanad By-Election : ವಯನಾಡ್‌ ಮತದಾರನಿಗೆ ಅಣ್ಣನಿಗಿಂತಲೂ ತಂಗಿ ಮೇಲೆ ಅಕ್ಕರೆ; ಪ್ರಿಯಾಂಕಾ ಗಾಂಧಿಗೆ ಭರ್ಜರಿ ಜಯ

ಮಾಹಿತಿ ಪ್ರಕಾರ ಪ್ರಿಯಾಂಕಾ ಗಾಂಧಿ 6.2 ಲಕ್ಷಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸತ್ಯನ್‌ ಮೋಕೆರಿ 2 ಲಕ್ಷ ಮತಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬಿಜೆಪಿಯ ನವ್ಯಾ ಹರಿದಾಸ್ ಅವರು 1 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ.

Update: 2024-11-23 11:12 GMT

ಅಣ್ಣ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಭರ್ಜರಿ ವಿಜಯ ಸಾಧಿಸಿದ್ದಾರೆ. ಆದರೆ, ಅವರ ಗೆಲುವಿನ ಅಂತರ 4 ಲಕ್ಷಕ್ಕಿಂತಲೂ ಅಧಿಕ. ಇದು ಅಣ್ಣ ರಾಹುಲ್‌ ಗಾಂಧಿ ಸಾರ್ವತ್ರಿಕ ಚುನಾವಣೆ ವೇಳೆ ಗಳಿಸಿದ್ದ ವಿಜಯದ ಅಂತರಕ್ಕಿಂತಲೂ ಹೆಚ್ಚು. ಹೀಗಾಗಿ ವಯನಾಡಿನ ಮಂದಿ ಅಣ್ಣನಿಗಿಂತ ತಂಗಿ ಮೇಲೆ ಹೆಚ್ಚು ಅಕ್ಕರೆ ತೋರಿದ್ದಾರೆ.

ಮಾಹಿತಿ ಪ್ರಕಾರ ಪ್ರಿಯಾಂಕಾ ಗಾಂಧಿ 6.2 ಲಕ್ಷಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸತ್ಯನ್‌ ಮೋಕೆರಿ 2 ಲಕ್ಷ ಮತಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಂಕ ಗೆಲುವಿನ ಅಂತರ 4.2 ಲಕ್ಷಕ್ಕಿಂತಲೂ ಅಧಿಕವಾಗಿದೆ. ಇನ್ನು ಬಿಜೆಪಿಯ ನವ್ಯಾ ಹರಿದಾಸ್ ಅವರು 1 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದು 3,64,422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರಾಹುಲ್ ಗಾಂಧಿ ವಶದಲ್ಲಿದ್ದ ವಯನಾಡ್ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಇಳಿಯುತ್ತಿದ್ದಂತೆ ರಾಷ್ಟ್ರವ್ಯಾಪಿ ಗಮನ ಸೆಳೆದಿತ್ತು. ಚಲಾವಣೆಯಾದ 9.52 ಲಕ್ಷ ಮತಗಳಲ್ಲಿ ವಾದ್ರಾ ಸುಮಾರು ಆರು ಲಕ್ಷ ಮತಗಳನ್ನು ಪಡೆಯಬಹುದು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಭವಿಷ್ಯ ನುಡಿದಿದ್ದರು. ಅದು ದಿಟವಾಗಿದೆ.

ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ ಇಳಿದಿರುವುದು ಇದೇ ಮೊದಲು. ಅವರ ತಮ್ಮ ಅಣ್ಣ ರಾಹುಲ್‌ ಗಾಂಧಿ ರಾಯ್‌ಬರೇರಿಯಲ್ಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಂಡ ಕಾರಣ ತೆರವಾದ ವಯನಾಡಿನಲ್ಲಿ ಗೆದ್ದು ಬೀಗಿದ್ದಾರೆ.

ಪ್ರಿಯಾಂಕ ಎಕ್ಸ್ ಸುದೀರ್ಘ ಪೋಸ್ಟ್‌ ಮಾಡಿದ್ದು ವಯನಾಡು ಜನರು ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞನಾಗಿದ್ದೇನೆ ಈ ಗೆಲುವು ನಿಮ್ಮ ಗೆಲುವು ಎಂದು ನೀವು ಭಾವಿಸುತ್ತೀರಿ. ನಿಮ್ಮನ್ನು ಪ್ರತಿನಿಧಿಸಲು ನೀವು ಆಯ್ಕೆ ಮಾಡಿದ ವ್ಯಕ್ತಿ ನಿಮ್ಮ ಭರವಸೆಗಳು ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳಲಿದ್ದಾರೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

‘ವಯನಾಡ್ ಕ್ಷೇತ್ರದ ಮತದಾರರು ಚಿಹ್ನೆಗೆ ಮತ ಹಾಕಿದ್ದಾರೆಯೇ ಹೊರತು, ಅಭ್ಯರ್ಥಿಗಲ್ಲ’ ಎಂದು ಬಿಜೆಪಿ ಅಭ್ಯರ್ಥಿ ನವ್ಯಾ ಹೇಳಿದ್ದಾರೆ.

ವಿಧಾನಸಭಾ ಉಪಚುನಾವಣೆ ಫಲಿತಾಂಶg

ಕೇರಳದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಮಮಕೂಟತ್ತಿಲ್ ಗೆದ್ದಿದ್ದರೆ, ಚೇಲಕ್ಕರ ಕ್ಷೇತ್ರದಲ್ಲಿ ಎಲ್‌ಡಿಎಫ್‌ನ ಯು.ಆರ್. ಪ್ರದೀಪ್‌ ಗೆದ್ದಿದ್ದಾರೆ.

Tags:    

Similar News