ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ : ನಾಲ್ವರು ಸಾವು
ದಿಬ್ರುಗಢಕ್ಕೆ ತೆರಳುತ್ತಿದ್ದ ರೈಲಿನ ಕೆಲವು ಬೋಗಿಗಳು ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಹಳಿ ತಪ್ಪಿದವು.
ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ದಿಬ್ರುಗಢಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಕೆಲವು ಬೋಗಿಗಳು ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಹಳಿ ತಪ್ಪಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಹಾರ ಕಾರ್ಯಾಚರಣೆಗೆ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹಿರಿಯ ರೈಲ್ವೆ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
12 ಬೋಗಿಗಳ ಪೈಕಿ ಎಸಿ ಕಂಪಾರ್ಟ್‌ಮೆಂಟ್‌ನ ನಾಲ್ಕು ಬೋಗಿಗಳು ಜಿಲಾಹಿ ರೈಲ್ವೆ ನಿಲ್ದಾಣಕ್ಕೆ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿದವು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಅಪಘಾತದ ಮಾಹಿತಿ ನೀಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತ ನಡೆದ ಸ್ಥಳಕ್ಕೆ ತಕ್ಷಣ ತಲುಪುವಂತೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರತೀಯ ರೈಲ್ವೆ ಪರಿಹಾರ ಕಾರ್ಯಾಚರಣೆ ಪ್ರಾರಂಭಿಸಿದೆ ಮತ್ತು ಆಂಬ್ಯುಲೆನ್ಸ್‌ಗಳು ಅಪಘಾತ ಸ್ಥಳವನ್ನು ತಲುಪಿವೆ.
ಸಹಾಯವಾಣಿ: ರೈಲ್ವೆ ಮಂಡಳಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ: ವಾಣಿಜ್ಯ ನಿಯಂತ್ರಣ: 9957555984, ಫುರ್ಕೇಟಿಂಗ್ (ಎಫ್‌ಕೆಜಿ): 9957555966, ಮರಿಯಾನಿ (ಎಂಎಕ್ಸ್‌ಎನ್): 6001882410, ಸಿಮಲ್ಗುರಿ (ಎಸ್ಎಲ್‌ಜಿಆರ್): 8789543798, ತೀನ್ಸುಕಿಯಾ : 9957555960.