ಮಾನಹಾನಿ: ಜುಲೈ 2ರಂದು ಹಾಜರಾಗಲು ರಾಹುಲ್ ಗಾಂಧಿಗೆ ಸಮನ್ಸ್

Update: 2024-06-26 08:43 GMT

ಸುಲ್ತಾನ್‌ಪುರ (ಯುಪಿ)- ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ಜುಲೈ 2 ರಂದು ಹಾಜರಾಗುವಂತೆ ಸಂಸದ-ಶಾಸಕ ನ್ಯಾಯಾಲಯ ಬುಧವಾರ ತಿಳಿಸಿದೆ.

ದೂರುದಾರ ಸಂತೋಷ್ ಕುಮಾರ್ ಪಾಂಡೆ , ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರನನ್ನಾಗಿ ಮಾಡಬೇಕೆಂದು ರಾಮ್ ಪ್ರತಾಪ್ ಎಂಬಾತ  ಒತ್ತಾಯಿಸಿದ್ದಾನೆ. ಆದರೆ, ಆತ ಸಂತ್ರಸ್ಥನಲ್ಲ ಇಲ್ಲವೇ ಈ ವಿಷಯಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ರಾಹುಲ್‌ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಕೂಡ ಅರ್ಜಿದಾರರ ಮನವಿಯನ್ನು ವಿರೋಧಿಸಿದರುಆದರೆ, ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದು ಹಾಜರಾಗುವಂತೆ ರಾಹುಲ್‌ ಅವರಿಗೆ ಆದೇಶಿಸಿತು.

2018ರಲ್ಲಿ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ಮಾನನಷ್ಟ ದೂರು ದಾಖಲಿಸಿದ್ದರು. ಫೆಬ್ರವರಿ 20 ರಂದು ಅಮೇಥಿಯಲ್ಲಿ ʻಭಾರತ್ ಜೋಡೋ ನ್ಯಾಯಯಾತ್ರೆʼಯನ್ನು ಸ್ಥಗಿತಗೊಳಿಸಿದ್ದ ರಾಹುಲ್‌, ನ್ಯಾಯಾ ಲಯಕ್ಕೆ ಹಾಜರಾಗಿದ್ದರು. ಕೋರ್ಟ್‌ ಅವರಿಗೆ ಜಾಮೀನು ನೀಡಿತು. 

Tags:    

Similar News