Train Accident : ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಶಾಲಿಮಾರ್ ಎಕ್ಸ್‌ಪ್ರೆಸ್‌; ಯಾವುದೇ ಪ್ರಾಣಾಪಾಯ ಇಲ್ಲ

ಕೋಲ್ಕೊತಾದಿಂದ 40 ಕಿ.ಮೀ ದೂರದಲ್ಲಿರುವ ನಲ್ಪುರದಲ್ಲಿ ಸಾಪ್ತಾಹಿಕ ವಿಶೇಷ ರೈಲು ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ;

Update: 2024-11-09 06:29 GMT
ರೈಲ್ವೆ ಅಪಘಾತದ ದೃಶ್ಯಗಳು.

ಸಿಕಂದರಾಬಾದ್- ಶಾಲಿಮಾರ್ ಸೂಪರ್‌ಪಾಸ್ಟ್ ‌ಎಕ್ಸ್‌ಪ್ರೆಸ್‌ ರೈಲಿನ ಕನಿಷ್ಠ ಮೂರು ಬೋಗಿಗಳು ಪಶ್ಚಿಮ ಬಂಗಾಳದ ಹೌರಾ ಬಳಿ ಶನಿವಾರ (ನವೆಂಬರ್ 9) ಬೆಳಿಗ್ಗೆ 5.30 ರ ಸುಮಾರಿಗೆ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕೊತಾದಿಂದ 40 ಕಿ.ಮೀ ದೂರದಲ್ಲಿರುವ ನಲ್ಪುರದಲ್ಲಿ ಸಾಪ್ತಾಹಿಕ ವಿಶೇಷ ರೈಲು ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಳಿ ತಪ್ಪಿದ ಬೋಗಿಗಳಲ್ಲಿ ಪಾರ್ಸೆಲ್ ವ್ಯಾನ್ ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ. 22850 ಸಿಕಂದರಾಬಾದ್-ಶಾಲಿಮಾರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಖರಗ್‌ಪುರ ವಿಭಾಗದ ನಲ್ಪುರ್ ನಿಲ್ದಾಣದ ಮೂಲಕ ಹಾದುಹೋಗುತ್ತಿದ್ದಾಗ ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಗಾಚಿ ಮತ್ತು ಖರಗ್ಪುರದಿಂದ ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ಪರಿಹಾರ ರೈಲುಗಳನ್ನು ತಕ್ಷಣ ಸಹಾಯಕ್ಕಾಗಿ ಕಳುಹಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ಪ್ರಯಾಣಿಕರನ್ನು ಕೋಲ್ಕತ್ತಾಗೆ ಕರೆದೊಯ್ಯಲು ಬಸ್ಸುಗಳನ್ನು ಸಹ ಕಳುಹಿಸಲಾಗಿದೆ.

Tags:    

Similar News