ರಾಜ್ಯಪಾಲರಿಂದ ಡಿಎಂಕೆ ಆಡಳಿತದ ಟೀಕೆ: ಕೆಲವೇ ನಿಮಿಷಗಳಲ್ಲಿ ಭಾಷಣ ಮುಕ್ತಾಯ

Update: 2024-02-12 07:32 GMT

ಸೋಮವಾರ (ಫೆಬ್ರವರಿ 12): ತಮ್ಮ ವಾಡಿಕೆ ಭಾಷಣವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿದ ರಾಜ್ಯಪಾಲ ಆರ್‌.ಎನ್. ರವಿ, ಭಾಷಣದ ವಿಷಯದ ಬಗ್ಗೆ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯವಿದೆ ಎಂದು ಪ್ರಕಟಗೊಳಿಸಿದ್ದಲ್ಲದೆ, ರಾಷ್ಟ್ರಗೀತೆಯನ್ನು 'ಗೌರವಿಸದ' ಡಿಎಂಕೆ ಆಡಳಿತವನ್ನು ದೂಷಿಸಿದರು. 

ರಾಜ್ಯಪಾಲರು ತಮ್ಮ ವರ್ಷದ ಉದ್ಘಾಟನಾ ಭಾಷಣದಲ್ಲಿ ʻರಾಷ್ಟ್ರಗೀತೆಗೆ ಸರಿಯಾದ ಗೌರವವನ್ನು ತೋರಿಸಬೇಕೆಂದು, ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅದನ್ನು ನುಡಿಸುವಂತೆ ರಾಜ್ಯ ಸರ್ಕಾರಕ್ಕೆ ಪದೇಪದೇ ಮಾಡಿದ ಮನವಿ ಮತ್ತು ಸಲಹೆಯನ್ನು ನಿರ್ಲಕ್ಷಿಸಲಾಗಿದೆʼ ಎಂದು ದೂರಿದರು ʻಭಾಷಣವು ವಾಸ್ತವ ಮತ್ತು ನೈತಿಕ ಆಧಾರದಲ್ಲಿ ನಾನು ಒಪ್ಪದ ಹಲವು ಅಂಶಗಳನ್ನು ಹೊಂದಿದೆ. ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಅಂಶಗಳಿಗೆ ಧ್ವನಿಗೂಡಿಸುವುದು ಸಂವಿಧಾನದ ಅಪಹಾಸ್ಯವಾಗುತ್ತದೆ. ಆದ್ದರಿಂದ ನಾನು ನನ್ನ ಭಾಷಣವನ್ನು ಮುಕ್ತಾಯ ಗೊಳಿಸುತ್ತೇನೆ. ಈ ಸದನ ಜನರ ಒಳಿತಿಗಾಗಿ ಉತ್ಪಾ ದಕ ಮತ್ತು ಆರೋಗ್ಯಕರ ಚರ್ಚೆ ನಡೆಸಬೇಕೆಂದು ಆಶಿಸುತ್ತೇನೆʼ ಎಂದು ಹೇಳಿದ ಅವರು ಸಭಾಧ್ಯಕ್ಷ ಅಪ್ಪಾವು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಶಾಸಕರಿಗೆ ತಮಿಳಿನಲ್ಲಿ ಶುಭಾಶಯ ಕೋರಿ ತಮ್ಮ ಭಾಷಣವನ್ನು ಮುಗಿಸಿದರು.

ಇತ್ತೀಚೆಗೆ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ತಮ್ಮ ಭಾಷಣದ ಕೊನೆಯ ವಾಕ್ಯವೃಂದವನ್ನು ಮಾತ್ರ ಓದಿ, ಒಂದೆರಡು ನಿಮಿಷಗಳಲ್ಲಿ ತಮ್ಮ ಮಾತು ಮುಗಿಸಿದ್ದರು. 

Tags:    

Similar News