ಹಿಂದಿ ಹೇರಿಕೆ ಆರೋಪ, ಬಿಜೆಪಿ ಬಿಟ್ಟು ಟಿವಿಕೆ ಸೇರಿದ ನಟಿ ರಂಜನಾ
ಬಿಜೆಪಿ ಜತೆಗಿನ ಎಂಟು ವರ್ಷಗಳ ಸಂಬಂಧ ಕಡಿದುಕೊಂಡಿರುವ ಅವರು, ಕೇಸರಿ ಪಕ್ಷ ತಮಿಳುನಾಡಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.;
ಮಹತ್ವದ ಬೆಳವಣಿಗೆಯೊಂದರಲ್ಲಿ, ನಟಿ ಮತ್ತು ರಾಜಕಾರಣಿ ರಂಜನಾ ನಾಚಿಯಾರ್ ಬಿಜೆಪಿಗೆ ರಾಜೀನಾಮೆ ನೀಡಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರಿದ್ದಾರೆ.
ಬಿಜೆಪಿ ಜತೆಗಿನ ಎಂಟು ವರ್ಷಗಳ ಸಂಬಂಧ ಕಡಿದುಕೊಂಡಿರು ಅವರು, ಕೇಸರಿ ಪಕ್ಷ ತಮಿಳುನಾಡಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ತ್ರಿಭಾಷಾ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಂಜನಾ ನಾಚಿಯಾರ್, ಮಂಗಳವಾರ (ಫೆಬ್ರವರಿ 25) ತಮ್ಮ ರಾಜೀನಾಮೆ ಪ್ರಕಟಿಸಿದ್ದಾರೆ. ಕೇಂದ್ರದ ನೀತಿ ತಮಿಳುನಾಡಿನ ಭಾಷಾ ಪರಂಪರೆಯನ್ನು ದುರ್ಬಲಗೊಳಿಸುತ್ತದೆ ಮತ್ತು ರಾಜ್ಯದ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಕಡೆಗಣಿಸುತ್ತದೆ ಎಂದು ಹೇಳಿದ್ದಾರೆ.
"ತ್ರಿಭಾಷಾ ನೀತಿಯ ಹೇರಿಕೆ, ದ್ರಾವಿಡರ ವಿರುದ್ಧ ಹೆಚ್ಚುತ್ತಿರುವ ಹಗೆತನ ಮತ್ತು ತಮಿಳುನಾಡಿನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸುವುದನ್ನು ತಮಿಳು ಮಹಿಳೆಯಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಬಳಿಕ ಸಮಯದಲ್ಲಿ ನಾಚಿಯಾರ್ ಅಧಿಕೃತವಾಗಿ ಟಿವಿಕೆಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ, ಅವರು ಪಕ್ಷದ ಸಂಸ್ಥಾಪಕ ವಿಜಯ್ ಅವರನ್ನು "ಮುಂದಿನ ಎಂಜಿಆರ್" ಎಂದು ಬಣ್ಣಿಸಿದ್ದಾರೆ. .
ದಿವಂಗತ ಎಂ.ಜಿ.ರಾಮಚಂದ್ರನ್ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದರು. ವಿಜಯ್ ಅವರ ರಾಷ್ಟ್ರೀಯತೆ ಮತ್ತು ದ್ರಾವಿಡ ನೀತಿಗಳ ಮಿಶ್ರಣ ತಮ್ಮನ್ನು ಸೆಳೆಯಿತು ಎಂದು ಅವರು ಹೇಳಿದ್ದಾರೆ.