ತೆರಿಗೆ ಭಯೋತ್ಪಾದನೆ: ಕಾಂಗ್ರೆಸ್

1,700 ಕೋಟಿ ರೂ.ತೆರಿಗೆ‌ ಪಾವತಿಗೆ ನೋಟಿಸ್

Update: 2024-03-29 12:59 GMT

ದಂಡ ಮತ್ತು ಬಡ್ಡಿ‌ ಸೇರಿಸಿ, 1,700 ಕೋಟಿ ರೂ. ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ ಗೆ ನೋಟಿಸ್‌ ನೀಡಿದೆ. ಇದು ʻತೆರಿಗೆ ಭಯೋತ್ಪಾದನೆʼ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ಐಟಿಯ ಹೊಸ ನೋಟಿಸ್‌ 2017-18 ರಿಂದ 2020-21ರವರೆಗಿನ ಮೌಲ್ಯಮಾಪನ, ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ. ʻನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ನೋಟಿಸ್‌ ಕಳುಹಿಸಲಾಗುತ್ತಿದೆ. ಇದು ತೆರಿಗೆ ಭಯೋತ್ಪಾದನೆ. ಇದನ್ನು ನಿಲ್ಲಿಸಬೇಕುʼ ಎಂದು ಕಾಂಗ್ರೆಸ್‌ ವಕ್ತಾರ ಜೈರಾಮ್ ರಮೇಶ್ ಹೇಳಿದರು. ʻನಾವು ನೋಟಿಸ್‌ ಗಳಿಗೆ ಹೆದರುವುದಿಲ್ಲ.ನಾವು ಇನ್ನಷ್ಟು ಆಕ್ರಮಣಕಾರಿಯಾಗುತ್ತೇವೆ ಮತ್ತು ಚುನಾವಣೆಯಲ್ಲಿ ಹೋರಾಡುತ್ತೇವೆʼ ಎಂದು ಹೇಳಿದರು.

ಆದಾಯ ತೆರಿಗೆ ಅಧಿಕಾರಿಗಳು ಪಕ್ಷಕ್ಕೆ 200 ಕೋಟಿ ರೂ. ದಂಡ ವಿಧಿಸಿ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದೆ. ಹಣದ ಕೊರತೆಯಿಂದ ಕಾಂಗ್ರೆಸ್ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದೆ. ದೆಹಲಿ ಹೈಕೋರ್ಟ್‌ನಿಂದ ಪರಿಹಾರ ಪಡೆಯಲು ವಿಫಲವಾದ ನಂತರ, ಪಕ್ಷ ಸುಪ್ರೀಂ ಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ.

Tags:    

Similar News